ಹೆಬ್ಬಳ್ಳಿ –
ಸಾಮಾನ್ಯವಾಗಿ ಯಾವುದೇ ಒಂದು ಧರ್ಮದ ಆಚರಣೆ ಧಾರ್ಮಿಕ ವಿಧಿವಿಧಾನವನ್ನು ಮಾಡೊದು ದೊಡ್ಡವರು ಇಲ್ಲವೇ ಚಿಕ್ಕವರು.ಆದರೆ ಧಾರವಾಡ ದ ಹೆಬ್ಬಳ್ಳಿ ಗ್ರಾಮದಲ್ಲಿ ಮೂವರು ಚಿಕ್ಕ ಮಕ್ಕಳು ವಿಭಿನ್ನವಾಗಿ ಧಾರ್ಮಿಕ ಆಚರಣೆಯೊಂದರ ಮೂಲ ಕ ಈಗ ಗಮನ ಸೆಳೆದಿದ್ದಾರೆ.

ಹೌದು ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಇಸ್ಲಾಂ ಧರ್ಮ ಗುರು ಮೌಲಾನಾ ಶಾಕೀರಲಿ ಮುಲ್ಲಾ ಯಾಸ್ಮೀನಬಾನು ಇವರ ಮಕ್ಕಳಾದ ಕುಮಾರಿ ಜಿಕರಿಯ, ಬಿಲಕಿಸ್, ಕುಮಾರ ಅಕ್ತರ ರಜಾ ಇವರುಗಳು ರಂಜಾನ್ ಹಬ್ಬದ ಆರಂಭದ ಉಪವಾಸ ರೋಜಾ ಒಟ್ಟು 30 ದಿನಗಳ ರೋಜಾ ಮಾಡಿ ಗ್ರಾಮದ ಮುಸ್ಲಿಂ ಜನರ ಹಾಗೂ ಉಳಿದ ಎಲ್ಲಾ ಜನಾಂಗದ ಪ್ರೀತಿಗೆ ಪಾತ್ರರಾಗಿದ್ದಾರೆ.

ಹೌದು ಇವರು ತುಂಬಾ ತುಂಬಾ ಕಠಿಣ ಪರಿಶ್ರಮ ದಿಂದ ಈ ಪವಿತ್ರ ರಂಜಾನ್ ರೋಜಾ ತಿಂಗಳ ಉಪವಾಸ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಗ್ರಾಮದ ಜಮಾತಿನ ಹಿರಿಯರಾದ ಮಹೂಬಸಾಬ ಇಮಾಮಸಾಬ ಗುಡಸಲಮನಿ, ಧಾರವಾಡದ ನವರಸ ಸ್ನೇಹಿತರ ವೇದಿಕೆಯ

ರಾಜ್ಯಾದ್ಯಕ್ಷರು ಬಾಬಾಜಾನ ಮುಲ್ಲಾ, ಶಿಕ್ಷಕ ಸಂಘ ದ ಧಾರವಾಡ ಜಿಲ್ಲಾ ಅದ್ಯಕ್ಷರು ಅಕ್ಬರಲಿ ಸೋಲಾ ಪುರ ಗ್ರಾಮದ ಹಿರಿಯರಾದ ಪತ್ತೆಸಾಬ ಗುಡಸ ಲಮನಿ, ಹಜರತಸಾಬ ನವಲಗುಂದ, ನಬಿಸಾಬ ನಾಲಬಂದ್ ಶಿಕ್ಷಕರಾದ ಎಲ್ ಐ ಲಕ್ಕಮ್ಮನವರ, ಪಂಚಾಯತಿ ಸದಸ್ಯರಾದ ಮಂಜುನಾಥ ವಾಸಂಬಿ, ಬಸವರಾಜ ಹಡಪದ, ಸಿದ್ದಪ್ಪ ಕುಂಬಾರ, ಸೇರಿದಂ ತೆ ಅನೇಕರು ಈ ಮಕ್ಕಳ ಪವಿತ್ರ ರೋಜಾ ಮಾಡಿರು ವುದನ್ನು ಮುಕ್ತಕಂಠದಿಂದ ಕೊಂಡಾಡಿದ್ದಾರೆ ಅಲ್ಲ ದೇ ಎಲ್ಲ ಪ್ರೀತಿಗೆ ಪಾತ್ರರಾಗಿದ್ದು ಮೆಚ್ಚುಗೆ ಪಡೆದು ಕೊಂಡು ಮಾದರಿಯಾಗಿದ್ದಾರೆ