ಹುಬ್ಬಳ್ಳಿ –
ಸಚಿವ ರಮೇಶ ಜಾರಕಿಹೊಳಿ ರಾಸಲೀಲೆ ಪ್ರಕರಣ ಹಿನ್ನೆಲೆಯಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಾಲು ಸಾಲಾಗಿ ಪ್ರತಿಭಟನೆಗಳು ನಡೆದವು.

ಹುಬ್ಬಳ್ಳಿಯಲ್ಲಿ ರಮೇಶ ಜಾರಕಿಹೊಳಿ ವಿರುದ್ಧ ಕಾವೇರಿದ ಪ್ರತಿಭಟನೆ ಕಂಡು ಬಂದವು.ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ವಿವಿಧ ಸಂಘಟನೆ ಗಳಿಂದ ಪ್ರತಿಭಟನೆ ಕಂಡು ಬಂದವು.

ಜೆಡಿಎಸ್ ಪಕ್ಷ, ಶಿವಸೇನಾ ಕರ್ನಾಟಕ ಸೇರಿದಂತೆ ವಿವಿಧ ಸಂಘಟನೆಯ ಕಾರ್ಯಕರ್ತರಿಂದ ರಮೇಶ ಜಾರಕಿಹೊಳಿ ವಿರುದ್ಧ ಪ್ರತಿಭಟನೆ ಮಾಡಿದರು.

ಸಚಿವ ರಮೇಶ ಜಾರಕಿಹೊಳಿ ವಿರುದ್ಧ ಘೊಷಣೆ ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಿದರು.ಇದೇ ವೇಳೆ ಪ್ರತಿಕೃತಿ ದಹಿಸಿದರು.

ಕೂಡಲೇ ರಮೇಶ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಕೀನಾಮೆ ನೀಡುವಂತೆ ಆಗ್ರಹಿಸಿದರು