ಧಾರವಾಡ –
ಬೆಳ್ಳಂ ಬೆಳಿಗ್ಗೆ ಧಾರವಾಡದ ಹೊರವಲಯದಲ್ಲಿನ ಬೆಳಗಾವಿ ರಸ್ತೆಯಲ್ಲಿನ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕೊಟೂರ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ.ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿ ಸ್ಥಳದಲ್ಲೇ ಬೈಕ್ ಸವಾರೊಬ್ಬನು ಸಾವಿಗೀಡಾಗಿದ್ದಾನೆ.ಮೃತನನ್ನು ಧಾರವಾಡ ತಾಲ್ಲೂಕಿನ ಕಲ್ಲಾಪೂರ ಗ್ರಾಮದ ಬಾಹುಬಲಿ ಬಾಹುಬಲಿ ಪ್ರಕಾಶ ಹನಬರಟ್ಟಿ ಎಂಬುವರಾಗಿದ್ದಾರೆ.

ಮೂಲತಃ ಬೈಲಹೊಂಗಲ ತಾಲೂಕಿನ ನಿವಾಸಿ ಯಾಗಿದ್ದು ಕಲ್ಲಾಪೂರದಲ್ಲಿ ಇದ್ದರು.ಇನ್ನೂ ಬೆಲೂರಿನಲ್ಲಿರುವ RSB ಕಾರ್ಖಾನೆಗೆ ಕೆಲಸಕ್ಕೆಂದು ಹೊರಟಿದ್ದರು. ಮನೆಯಿಂದ ಬೈಕ್ ಮೇಲೆ ಹೊರಟಿದ್ದ ಇವರಿಗೆ ಹೆದ್ದಾರಿಯಲ್ಲಿ ಟಿಪ್ಪರ್ ಡಿಕ್ಕಿಯಾಗಿದೆ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಇನ್ನೂ ವಿಷಯ ತಿಳಿದ ಹೆದ್ದಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಟಿಪ್ಪರ್ ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.