ಧಾರವಾಡ –
ಧಾರವಾಡದ ಮದಿಹಾಳದಲ್ಲಿ ಮತ್ತೆ ಕಳ್ಳರು ಬಂದಿದ್ದಾರೆ ಎಂದು ಯಾರೋ ಸುದ್ದಿ ಹರಿಬಿಟ್ಟಿ ದ್ದಾರೆ. ಈ ಒಂದು ಸುದ್ದಿ ಗುಲ್ಲೆಬ್ಬುತ್ತಿದ್ದಂತೆ ಮನೆ ಮನೆಗಳಿಂದ ನಾ ನೀನು ಎನ್ನುತ್ತಾ ಸಾಕಷ್ಟು ಪ್ರಮಾಣದಲ್ಲಿ ಜನರು ಸೇರಿದ್ದಾರೆ.

ಮೊನ್ನೆ ಮೊನ್ನೆಯಷ್ಟೇ ಕಳ್ಳರ ಗ್ಯಾಂಗ್ ರಾಜಾರೋಷವಾಗಿ ತಿರುಗಾಡಿ ಕಳ್ಳತನ ಮಾಡಿಕೊಂಡು ಹೋಗಿದ್ದರು. ಆ ಒಂದು ಘಟನೆ ಯಿಂದ ಭಯಗೊಂಡ ಜನರು ಈಗ ಮತ್ತೆ ಕಳ್ಳರು ಬಂದಿದ್ದಾರೆ ಎಂದು ಯಾರೋ ಸುದ್ದಿ ಹರಡಿದ್ದಾರೆ.

ಈ ಒಂದು ಸುದ್ದಿ ಹರಡುತ್ತಿದ್ದಂತೆ ಮನೆಯಲ್ಲಿದ್ದವರು ಜಮಾಯಿಸಿದ್ದಾರೆ.ಸಾಕಷ್ಟು ಪ್ರಮಾಣದಲ್ಲಿ ಸೇರಿದ್ದಾರೆ. ನಂತರ ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ಮಾಡಿದ್ದಾರೆ.

ಇನ್ನೂ ಮದಿಹಾಳದಲ್ಲಿ ಯಾರೋ ಒಬ್ಬರು ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬಳ ಕೈಹಿಡಿದು ಜಗ್ಗಿದ್ದಾರೆ.ಇದರಿಂದ ಕೆಲವರು ಇದನ್ನೆ ತಪ್ಪು ತಿಳಿದುಕೊಂಡು ಮತ್ತೆ ಕಳ್ಳತನ ಮಾಡಲು ಕಳ್ಳರು ಬಂದಿದ್ದಾರೆ ಎಂದಿದ್ದಾರೆ.
ಹೀಗಾಗಿ ಸಾಕಷ್ಟು ಪ್ರಮಾಣದಲ್ಲಿ ಸಾರ್ವಜನಿಕರು ಸೇರಿದ್ದಾರೆ. ಇನ್ನೂ ಸ್ಥಳಕ್ಕೆ ಆಗಮಿಸಿದ ಶಹರ ಠಾಣೆ ಪೊಲೀಸರು ಸಾರ್ವಜನಿಕರಿಗೆ ಮಾಹಿತಿ ನೀಡಿ ಪರಿಸ್ಥಿತಿಯನ್ನು ಸರಿಪಡಿಸಿದರು.