ಧಾರವಾಡ –
ಒಂದು ವಾರದಲ್ಲಿ ಶಿಕ್ಷಕರ ವರ್ಗಾವಣೆ ಮಾಡದಿದ್ದರೆ ಬೆಂಗಳೂರಿನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ವನ್ನು ಮಾಡುತ್ತೇವೆ ಎಂದು ಗ್ರಾಮೀಣ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಸಂಘದವರು ಸರ್ಕಾರಕ್ಕೆ ಖಡಕ್ ಸಂದೇಶವನ್ನು ನೀಡಿದ್ದರು.ಈ ಕುರಿತಂತೆ ಸುದ್ದಿ ಸಂತೆ ಕೂಡಾ ವರದಿಯೊಂದನ್ನು ಪ್ರಸಾರ ಮಾಡಿತ್ತು.ಈ ಒಂದು ಸಂದೇಶದ ವರದಿಯ ಬೆನ್ನಲ್ಲೇ ಸರ್ಕಾರ ಅದರಲ್ಲೂ ಶಿಕ್ಷಣ ಇಲಾಖೆ ವಾರದೊಳಗಾಗಿ ವರ್ಗಾವಣೆಯ ಹೊಸ ಅಧಿಸೂಚನೆಯೊಂದಿಗೆ ವೇಳಾಪಟ್ಟಿ ಪ್ರಕಟಗೊಂಡಿದೆ.
ಒಂದು ವಾರದಲ್ಲಿ ವರ್ಗಾವಣೆ ಪ್ರಕ್ರಿಯೆ ಪ್ರಾರಂಭ ಮಾಡದಿದ್ದರೆ ಉಗ್ರ ಹೋರಾಟದೊಂದಿಗೆ ಅಮರಣಾಂ ತಹ ಉಪವಾಸ ಅಹೋರಾತ್ರಿ ಧರಣಿಗೆ ಸಿದ್ಧರಾಗಲು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರುಗಳಿಗೆ ಸಂಘವು ಕರೆ ನೀಡಿತ್ತು.
ಗ್ರಾಮೀಣ ಪ್ರೌಢಶಾಲಾ ಹಾಗೂ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಅಶೋಕ ಸಜ್ಜನ ಹಾಗೂ ಪವಾಡೆಪ್ಪ ಶಿಕ್ಷಕರ ಧ್ವನಿಯಾಗಿ ಸರ್ಕಾರಕ್ಕೆ ಕೊಟ್ಟ ಈ ಒಂದು ಸಂದೇಶದ ಬೆನ್ನಲ್ಲೇ ಈಗ ವರ್ಗಾವಣೆಯ ಸಂದೇಶ ಹೊರ ಬಿದ್ದಿದ್ದು ಹೀಗಾಗಿ ಸಂಘದ ಪರವಾಗಿ ಪವಾಡೆಪ್ಪ ಅವರು ಇಲಾಖೆಯ ಸಚಿವರಿಗೆ ಮತ್ತು ಅಧಿಕಾರಿಗಳಿಗೆ ಧನ್ಯವಾದಗಳನ್ನು ಹೇಳಿದ್ದಾರೆ ಹಾಗೇ ಸಂಘದ ಹೋರಾಟಕ್ಕೆ ಇದೊಂದು ಸಿಕ್ಕ ಜಯ ಎಂದಿದ್ದು ಯಾವುದೇ ಕಾರಣಕ್ಕೂ ವಿಳಂಬವನ್ನು ಮಾಡದೇ ಕೂಡಲೇ ನ್ಯಾಯಸಮ್ಮತವಾಗಿ ವರ್ಗಾವಣೆ ಮಾಡಲೆಂದು ಆಗ್ರಹಿಸಿದ್ದಾರೆ.