ಧಾರವಾಡ –
ಬರ್ತಡೇ ಪಾರ್ಟಿಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣ ಕುರಿತು ಧಾರವಾಡ ಗ್ರಾಮೀಣ ಪೊಲೀಸರು ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ

ಕೈ ಮುಖಂಡ ಮಲ್ಲಿಕಾರ್ಜುನ ಆಯಟ್ಟಿ ಮತ್ತು ಅಣ್ಣಪ್ಪಗೌಡ ಇವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.ತನ್ನ ರಿವಾಲ್ವಾರ್‌ನಿಂದ ಫೈರಿಂಗ್ ಮಾಡಿದ್ದ ಮಲ್ಲಿಕಾರ್ಜುನ ಆಯಟ್ಟಿ.

ಅಣ್ಣಪ್ಪಗೌಡ ಬರ್ತಡೆ ಪಾರ್ಟಿಯಲ್ಲಿ ನಡೆದಿತ್ತು ಫೈರಿಂಗ್. ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದ ಲ್ಲಿ ನಿನ್ನೆ ರಾತ್ರಿ ನಡೆದಿದ್ದ ಬರ್ತಡೆ ಪಾರ್ಟಿಯಲ್ಲಿ ಈ ಒಂದು ಘಟನೆ ನಡೆದಿತ್ತು.
ಆಯಟ್ಟಿಗೆ ಸೇರಿದ್ದ ರಿವಾಲ್ವಾರ್ ವಶಪಡಿಸಿಕೊಂಡಿ ರುವ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿ ದ್ದಾರೆ.