ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕ ಹುಬ್ಬಳ್ಳಿ ರಾಜ್ಯಾಧ್ಯಕ್ಷ ರು ಹಾಗೂ ಪದಾಧಿಕಾರಿಗಳು ಮಕ್ಕಳ ಆನ್ ಲೈನ್ ಕುರಿತು ಮನವಿ ಮಾಡಿಕೊಂಡು ಧ್ವನಿ ಎತ್ತಿದ್ದಾರೆ. ತಮ್ಮ ಸಮಸ್ಯೆಯ ನಡುವೆ ಮಕ್ಕಳ ಪರವಾಗಿ ಸಮಸ್ಯೆಗೆ ಪರಿಹರಿಸುವಂತೆ ಒತ್ತಾಯವನ್ನು ಮಾಡಿದ್ದಾರೆ

ಜುಲೈ 1ರಿಂದ ರಾಜ್ಯದ ಎಲ್ಲಾ ಪ್ರಾಥಮಿಕ ಹಾಗೂ ಪ್ರೌಢಶಾಲೆ ಗಳಲ್ಲಿ ಒಂದರಿಂದ 10ನೇ ತರಗತಿವರೆಗೆ ಆನ್ಲೈನ್ ತರಗತಿಯನ್ನು ಪ್ರಾರಂಭಿಸುವಂತೆ ಮತ್ತು ಲಭ್ಯವಿರುವ ವಿವಿಧ ತಂತ್ರಜ್ಞಾನ ವಸ್ತುಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಸಂಗ್ರಹಿಸಿದ ಮಾಹಿತಿ ಆಧರಿಸಿ ವಿವಿಧ ಗುಂಪುಗಳನ್ನು ರಚಿಸಿ ಉದಾಹರಣೆಗೆ ಕೀಪ್ಯಾಡ್ ಮೊಬೈಲ್ ಹೊಂದಿರುವ ಮಕ್ಕಳು, ಮೊಬೈಲ್ ಕಂಪ್ಯೂಟರ್ ಟ್ಯಾಬ್ ಹೊಂದಿರುವ ಮಕ್ಕಳು, ರೇಡಿಯೋ ಮತ್ತು ದೂರದರ್ಶನ ಮನೆಯಲ್ಲಿ ಹೊಂದಿರುವ ಮಕ್ಕಳು ಹೀಗೆ ವಿವಿಧ ಗುಂಪುಗಳನ್ನು ರಚಿಸಿ ಆ ಮೂಲಕ ಮಕ್ಕಳ ಕಲಿಕಾ ನಿರಂತರತೆ ಸಾಧಿಸಲು ತಾವುಗಳು ಆದೇಶಿಸಿದ್ದು ಇರುತ್ತದೆ

ಆದರೆ ಹಲವು ಜಿಲ್ಲೆಗಳಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಗಳು ಆನ್ಲೈನ್ ತರಗತಿಗಳನ್ನು ಕಡ್ಡಾಯವಾಗಿ ಮಾಡಲೇಬೇಕು ಮತ್ತು ಎಲ್ಲಾ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸ ಬೇಕು ಎಂದು ಟೀಚಮೆಂಟ್ ಯಾಪ್ ನಲ್ಲಿಯೇ ಆನ್ ಲೈನ್ ತರಗತಿ ನಡೆಸುವಂತೆ ಸೂಚಿಸುತ್ತಿದ್ದಾರೆ. ಇದರಿಂದ ಗ್ರಾಮೀಣ ಪ್ರದೇಶದ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡ ಆಗುತ್ತಿದೆ. ಬಹು ತೇಕ ಗ್ರಾಮೀಣ ಪ್ರದೇಶದ ಪಾಲಕರು ಸ್ಮಾರ್ಟ್ ಫೋನ್ ಸೌಲಭ್ಯ ಹೊಂದಿರುವುದಿಲ್ಲ.ಸ್ಮಾರ್ಟ್ ಫೋನ್ ಹೊಂದಿದ್ದರೂ ಅವರು ತಮ್ಮ ದಿನನಿತ್ಯದ ಕೆಲಸಕಾರ್ಯಗಳಿಗೆ ಹೋಗುತ್ತಾರೆ ಶಾಲಾ ಅವಧಿ ಯಲ್ಲಿ ಮಕ್ಕಳಿಗೆ ಮೊಬೈಲ್ ಸಿಗುವುದಿಲ್ಲ ಹೀಗಾಗಿ ಶಾಲಾ ಅವಧಿಯಲ್ಲಿ ಆನ್ಲೈನ್ ತರಗತಿ ಮಾಡಲು ತುಂಬಾ ತೊಂದರೆಯಾಗುತ್ತಿದೆ.ಆದ್ದರಿಂದ ದಯಾ ಳುಗಳಾದ ತಾವುಗಳು ರಾಜ್ಯದ ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರು ಗಳಿಗೆ ಆನ್ ಲೈನ್ ತರಗತಿಯ ಬಗ್ಗೆ ಗೊಂದಲ ನಿವಾರಿಸಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿ ಪೂರ್ವಕವಾಗಿ ವಿನಂತಿಸಿಕೊಳ್ಳು ತ್ತೇವೆ
ತಮ್ಮ ವಿಶ್ವಾಸಿ ರಾಜ್ಯಾಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳು ಕರ್ನಾಟಕ ಸರ್ಕಾರ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕ ಹುಬ್ಬಳ್ಳಿ