ಧಾರವಾಡ –
ಧಾರವಾಡದ ಸಾರ್ವಜನಿಕ ಶಿಕ್ಷಣ ಇಲಾಖೆಯ (ಅಭಿವೃದ್ಧಿ) ವಿಭಾಗದ ಉಪನಿರ್ದೇಶಕರನ್ನಾಗಿ ತತ್ಸಮಾನ ವೃಂದದ ಅಧಿಕಾರಿ ಶ್ರೀಮತಿ ಎನ್.ಕೆ. ಸಾವಕಾರ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಬೆಳಗಾವಿಯ ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಪ್ರವಾಚಕರಾಗಿ ಸೇವೆ ಸಲ್ಲಿಸುತ್ತಿದ್ದ ಇವರನ್ನು ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಉಪ ನಿರ್ದೇಶಕರು(ಅಭಿವೃದ್ದಿ) ಹಾಗೂ ಪದನಿಮಿತ್ತ ಪ್ರಾಂಶುಪಾಲರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಧಾರವಾಡ ಇಲ್ಲಿನ ಖಾಲಿ ಹುದ್ದೆಗೆ ವರ್ಗಾಯಿಸಿ ಆದೇಶಿಸಿದೆ.
ಇನ್ನೂ ವರ್ಗಾವಣೆಗೊಂಡ ಇವರನ್ನು ರಾಜ್ಯ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸರ್ವ ಸದಸ್ಯರ ಪರವಾಗಿ ರಾಜ್ಯಾದ್ಯಕ್ಷ ಅಶೋಕ ಸಜ್ಜನ ಗೌರವಾದ್ಯಕ್ಷರಾದ ಎಲ್ ಐ ಲಕ್ಕಮ್ಮನವರ, ಹೈಸ್ಕೂಲ್ ಗ್ರಾಮೀಣ ಶಿಕ್ಷಕರ ಸಂಘದ ರಾಜ್ಯ ಕಾರ್ಯಾದ್ಯಕ್ಷರು ಕೆ ಬಿ ಕುರಹಟ್ಟಿ, ಅಶೋಕ ಬಿಸೆರೊಟ್ಟಿ, ಕೆ ಎಂ ಗೆದಗೇರಿ, ಅಶೋಕ ನಾಗಸಮುದ್ರ ಎಂ ಎಸ್ ಗಾಣಿಗೇರ ಸೇರಿದಂತೆ ಅನೇಕರು ಅಭಿನಂದಿಸಿ ಸ್ವಾಗತಿಸಿದ್ದಾರೆ.