ಧಾರವಾಡ –
ಮಿಕ್ಸ್ ರ್ ಜಾರ್ ತುಂಬಿಕೊಂಡು ಹೊರಟಿದ್ದ ಲಾರಿಯೊಂದು ಬೆಂಕಿಗೆ ಆಹುತಿಯಾದ ಘಟನೆ ಧಾರವಾಡದ ಹೊರವಲಯದ ಹೆದ್ದಾರಿಯಲ್ಲಿ ನಡೆದಿದೆ. ಇಟಿಗಟ್ಟಿ ಬಳಿಯ ಹೆದ್ದಾರಿಯಲ್ಲಿ ಈ ಒಂದು ಅವಘಡ ನಡೆದಿದೆ.

ಜಾರ್ ತುಂಬಿಕೊಂಡು ಹೊರಟಿದ್ದ ಲಾರಿಯಲ್ಲಿ ಏಕಾಏಕಿಯಾಗಿ ಬೆಂಕಿ ಕಾಣಿಸಿಕೊಂಡಿದೆ.ನೋಡು ನೋಡುತ್ತಲೇ ಧಗ ಧಗನೇ ಲಾರಿ ಹೊತ್ತಿ ಉರಿ ಯಿತು.
ಬೆಂಕಿ ಹತ್ತಿಕೊಂಡಿದೆ ಎನ್ನುತ್ತಲೇ ಲಾರಿ ಚಾಲಕ ಲಾರಿಯನ್ನು ರಸ್ತೆ ಪಕ್ಕಕ್ಕೆ ಹಾಕಿದ್ದಾರೆ.ಬೆಂಕಿಯ ಪ್ರಮಾಣ ಹೆಚ್ಚಾಗಿ ಲಾರಿ ಸುಟ್ಟ ಕರಕಲಾಗಿದೆ. ಇನ್ನೂ ಸುದ್ದಿ ತಿಳಿದ ಧಾರವಾಡ ಗ್ರಾಮೀಣ ಪಿಎಸ್ ಐ ಮಹೇಂದ್ರ ನಾಯಕ ಮತ್ತು ಧಾರವಾಡ ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿ ಗಳು ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ದಳದ ಟೀಮ್ ನೊಂದಿಗೆ ಬೆಂಕಿ ನಂದಿಸಿದರು



ಪುನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರಮ್ಯಾ ಹೊಟೇಲ್ ಬಳಿ ಈ ಅವಘಡ ನಡೆದಿದ್ದು ಎರಡೂವರೆ ಕಿಲೋಮೀಟರ್ ಉದ್ದ ಸಂಚಾರ ಸಮಸ್ಯೆ ಉಂಟಾಗಿದ್ದು ಸಧ್ಯ ಎಲ್ಲವನ್ನೂ ಪೊಲೀಸ ರು ಸರಿ ಮಾಡಿದ್ದಾರೆ.