ಕೇರಳ –
ಕರೋನಾ ಮಹಾಮಾರಿ ಬಂದ ಮೇಲಂತೂ ದೇವರ ದರ್ಶನ ಒಂದು ಕಡೆ ಇರಲಿ ಪ್ರಸಾದಕ್ಕೂ ಕುತ್ತು ಬಂದಿದೆ. ಎಲ್ಲಿ ನೋಡಿದಲ್ಲಿ ಕೇಳಿದಲ್ಲಿ ಕರೋನಾ ಮಹಾಮಾರಿಯ ಸುದ್ದಿ ಸದ್ದು. ಇವೆಲ್ಲದರ ನಡುವೆ ಈಗಸ್ಟೇ ಅಲ್ಪ ಸ್ವಲ್ಪು ಸಡಿಲಿಕೆಯನ್ನು ಎಲ್ಲಾ ವರ್ಗಗಳಲ್ಲೂ ಮಾಡುತ್ತಿದ್ದು ದೇವಾಲಯಗಳಿಗೂ ಕೆಲ ಷರತ್ತುಗಳನ್ನು ವಿಧಿಸಿ ಆರಂಭಕ್ಕೆ ಅನುಮತಿ ನೀಡಲಾಗಿದೆ. ಕೇಂದ್ರ ಸರ್ಕಾರದಿಂದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ಇತ್ತ ದೇವಸ್ಥಾನಗಳ ಬಾಗಿಲು ತೆರೆದಿದ್ದು ದೇವರ ದರ್ಶನವಾಗುತ್ತಿದೆ. ಇನ್ನೂ ಇವೆಲ್ಲದರ ನಡುವೆ ಭಕ್ತರಿಗೆ ಶಬರಿಮಲೆ ಅಯ್ಯಪ್ಪ ಸ್ವಾಮಿ ಪ್ರಸಾದ ವಿತರಿಸುವ ನಿಟ್ಟಿನಲ್ಲಿ ಅಂಚೆ ಇಲಾಖೆ ‘ಮನೆ ಬಾಗಿಲಿಗೆ ಪ್ರಸಾದ ಪೂರೈಕೆ ಯೋಜನೆ’ ಆರಂಭಿಸಿದೆ.
ತಿರುವಂಕೂರು ದೇವಸ್ಥಾನ ಮಂಡಳಿ ಸಾರ್ವಜನಿಕ ಸಂಪರ್ಕಾಧಿಕಾರಿ ಸುನೀಲ್ ಅರುಮನೂರ್ ಪತ್ರಿಕಾ ಪ್ರಕಟಣೆ ಮೂಲಕ ಹೇಳಿದ್ದಾರೆ .ಅಂಚೆ ಇಲಾಖೆಯ ಈ ಯೋಜನೆಯಡಿ, ಒಂದು ಬಾಟಲಿ ‘ಅರಾವಣ’ 100 ಮಿಲಿ ತುಪ್ಪ, ಶ್ರೀಗಂಧದ ಪೇಸ್ಟ್, ವಿಭೂತಿ, ಕುಂಕುಮ ಮತ್ತು ಅರಿಶಿನವನ್ನು ಒಳಗೊಂಡಿರುವ ಪ್ರಸಾದ ಕಿಟ್ 450 ರೂ.ಗಳ ಶುಲ್ಕಕ್ಕೆ ತ್ವರಿತ ಅಂಚೆ ಮೂಲಕ ಭಕ್ತರ ಮನೆಗಳಿಗೆ ತಲುಪಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಪ್ರಸಾದ ಕಿಟ್ ಅನ್ನು ಪ್ರಮುಖ ಅಂಚೆ ಕಚೇರಿಗಳಿಂದ ನೇರವಾಗಿ ಮತ್ತು ಅಂಚೆ ಇಲಾಖೆಯ ವೆಬ್ ಸೈಟ್ ಮೂಲಕ ಆನ್‌ಲೈನ್ ಮೂಲಕ ಖರೀದಿಸಬಹುದಾಗಿದೆ ಎಂದಿದ್ದಾರೆ.