ಧಾರವಾಡ –
ಮಹಾತ್ಮಾ ಗಾಂಧಿಜಿಯವರ ಪುಣ್ಯತಿಥಿಯಂದು ಬಿಜೆಪಿ ಯುವ ಮೋರ್ಚಾ ಧಾರವಾಡ ನಗರ ಘಟಕ-71ರ ವತಿಯಿಂದ ಧಾರವಾಡ ದಲ್ಲಿ ವಿಶೇಷ ಕಾರ್ಯಕ್ರಮ ವೊಂದು ನಡೆಯಿತು.ಹೌದು ಭಾರತದಲ್ಲಿ ಪ್ರತಿವರ್ಷ ಜನವರಿ 30 ರಂದು ರಾಷ್ಟ್ರೀಯ ಸ್ವಚ್ಛತಾ ದಿನ ವನ್ನು ಆಚರಿಸಲಾಗುತ್ತದೆ.

ಕೆಲಸದ ಸ್ಥಳ ಮನೆಗಳು ಅಥವಾ ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳು,ಉದ್ಯಾನವನಗಳು ಇತರ ಸಾರ್ವ ಜನಿಕ ಸ್ಥಳಗಳಲ್ಲೂ ಸ್ವಚ್ಛತೆ ಕಾಪಾಡಲು ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ.ಹೀಗಾಗಿ ಈ ಒಂದು ಉದ್ದೇಶದಿಂದ ನಗರದಲ್ಲಿ ವಿಶೇಷವಾಗಿ ಸ್ವಚ್ಚತಾ ಕಾರ್ಯಕ್ರಮ ವನ್ನು ಮಾಡಲಾಯಿತು




ಶಕ್ತಿ ಹಿರೇಮಠ ಅಧ್ಯಕ್ಷರು ಬಿಜೆಪಿ ಯುವ ಮೋರ್ಚಾ ಧಾರವಾಡ ನಗರ ಘಟಕ-71 ನೇತೃತ್ವದಲ್ಲಿ ಈ ಒಂದು ವಿಶೇಷ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.



ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಸಂಜಯ ಕಪಟ ಕರ್,ಮಂಡಳ ಅಧ್ಯಕ್ಷರಾದ ಸುನಿಲ ಮೋರೆ,ಶ್ರೀನಿವಾಸ ಕೋಟ್ಯಾಣ,ಸಂಗಮ ಹಂಜಿ,ವಿನಯ ಗೋಂದಲಿ,ಮುತ್ತು ಬನ್ನುರ,ಮಂಜು ನಿರಲಕಟ್ಟಿ,ವಿರೇಶ ಹಿರೇಮಠ,ಮಂಜು ಚೌಹ್ಹಾನ್ ಹಾಗೂ ಪ್ರಮುಖ ಪದಾದಿಕಾರಿಗಳು, ಕಾರ್ಯ ಕರ್ತರು ಉಪಸ್ಥಿತರಿದ್ದರು
ವರದಿ – ಶಕ್ತಿ ಜೆ. ಹಿರೇಮಠ,ವಕೀಲರು,ಅಧ್ಯಕ್ಷರು
ಬಿಜೆಪಿ ಯುವ ಮೋರ್ಚಾ ಧಾರವಾಡ ನಗರ ಘಟಕ-71