ಧಾರವಾಡ –
ಹಿರಿಯ ಚಿತ್ರಕಲಾ ಶಿಕ್ಷಕ ಸಂಜೀವ ಕಾಳೆ ನಿಧನರಾಗಿ ದ್ದಾರೆ.ತಮ್ಮ ಅದ್ಬುತವಾದ ಕುಂಚದ ಮೂಲಕ ಹಾಗೇ ಇನ್ನಿತರ ಚಟುವಟಿಕೆಯ ಮೂಲಕ ನಾಡಿ ನಲ್ಲಿ ಮೂಲೆ ಮೂಲೆಗಳಲ್ಲಿ ಚಿರಪರಿಚತರಾಗಿದ್ದರು ಸಂಜೀವ ಕಾಳೆ.

ವೃತ್ತಿಯಲ್ಲಿ ಚಿತ್ರಕಲಾ ಶಿಕ್ಷಕರು. ಕಲಘಟಗಿಯ ಗಳಗಿ ಹುಲಕೊಪ್ಪದ ಸರ್ಕಾರಿ ಪ್ರೌಢ ಶಾಲೆ ಯಲ್ಲಿ ಶಿಕ್ಷಕರಾಗಿದ್ದರು.ಕೂಡಾ ಇದರೊಂದಿಗೆ ಬೇರೆ ಬೇರೆ ಇನ್ನಿತರ ಚಟುವಟಿಕೆಗಳಲ್ಲೂ ಕೂಡಾ ಸಾಕಷ್ಟು ಪ್ರಮಾಣದಲ್ಲಿ ಹೆಸರನ್ನು ಮಾಡಿ ನಾಡಿನ ಮೂಲೆ ಮೂಲೆಗಳಲ್ಲಿ ತಮ್ಮದೇಯಾದ ಕಾರ್ಯವೈಖರಿಯ ಮೂಲಕ ಗುರುತಿಸಿಕೊಂಡಿದ್ದರು

ಹೆಸರಾಂತ ಈ ಹಿರಿಯ ಚಿತ್ರಕಲಾ ಶಿಕ್ಷಕ ಮಹಾಮಾ ರಿ ಕೋವಿಡ್ ಗೆ ಬಲಿಯಾಗಿದ್ದಾರೆ.ಕಳೆದ ವಾರವಷ್ಟೇ ಕೋವಿಡ್ ಸೋಂಕು ಕಾಣಿಸಿಕೊಂಡ ಆರೋಗ್ಯ ತೀವ್ರವಾಗಿ ಹದಗೆಟ್ಟ ಹಿನ್ನಲೆಯಲ್ಲಿ ಇಂದು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಸಾವಿಗೀಡಾಗಿ ದ್ದಾರೆ

ದ್ದಾರೆ. ಸಂಜೀವ ಕಾಳೆ ಕೊನೆಯುಸಿರೆಳಿದಿದ್ದಾರೆ ಹೌದು ಕಳೆದ ತಿಂಗಳು ಗದಗಕ್ಕೆ ತೋಂಟದಾರ್ಯ ಶ್ರೀಗಳ ಪುಸ್ತಕ ಬಿಡುಗಡೆಗೆ ಹೋದಾಗ ಏಳನೂರು ಪುಟದ ಪುಸ್ತಕಕ್ಕೆ ಪ್ರತಿ ಲೇಖನಕ್ಕೂ ಶ್ರೀಗಳ ರೇಖಾ ಚಿತ್ರ ಬಿಡಿಸಿ ಎಲ್ಲರ ಬೆರಗುಗೊಳಿಸಿದ್ದರು ಈ ಮಹಾ ನ್ ಚಿತ್ರಕಲಾವಿದ.

ವೆಂಟಿಲೇಟರ್ ಸಿಗದೇ ನಾನು ಸಾಯುತ್ತೇನೆ ನಾನು ಸಾಯುತ್ತೇನೆ ಎನ್ನುತ್ತಲೇ ಧಾರವಾಡದಲ್ಲಿ ಕೊನೆಗೂ ಉಸಿರನ್ನು ನಿಲ್ಲಿಸಿದರು ಹಿರಿಯ ಕಲಾ ಸಹೋದರ ಸಂಜೀವ ಕಾಳೆ.ಇವರನ್ನು ಏನಾದರೂ ಮಾಡಿ ಉಳಿಸಿಕೊಳ್ಳಬೇಕು ಎನ್ನುವ ಕಲಾವಿದರ.ಚಿತ್ರಕಲಾ ಶಿಕ್ಷಕರ ಹಾಗೇ ಶಿಕ್ಷಕರ ಇವರೊಂದಿಗೆ ನಿರಂತವಾಗಿ ಪ್ರಯತ್ನ ಮಾಡಿದ ಡಾ.ಸದಾಶಿವ ಮರ್ಜಿ ಸೇರಿದಂ ತೆ ಹಲವರು ಇವರನ್ನು ಉಳಿಸಿಕೊಳ್ಳಲು ಮಾಡಿದ ಪ್ರಯತ್ನ ಕೈಗೂಡಲಿಲ್ಲ.ಈ ನಾಡು ಕಂಡ ಅತ್ಯಂತ ಭರವಸೆಯ ಯುವ ಕಲಾವಿದನಾಗಿದ್ದರು.

ಎಲ್ಲದಕ್ಕಿಂತ ಹೆಚ್ಚಾಗಿ ಹೃದಯವಂತನಾಗಿದ್ದರು ಇವ ರು.ಹೇಳದೇ ಹೋದ ಕಲಾವಿದ ಸಂಜೀವ ಕಾಳೆ ನಿಧನಕ್ಕೆ ಹಲವರು ಭಾವಪೂರ್ಣ ನಮನವನ್ನು ಸಲ್ಲಿಸಿದ್ದಾರೆ. ಸಂತಾಪವನ್ನು ಸೂಚಿಸಿದ್ದಾರೆ. ಡಾ. ಶಿವಾನಂದ ಶೆಟ್ಟರ.ಶಂಕರ ಹಲಗತ್ತಿ.ಎಲ್ ಐ ಲಕ್ಕ ಮ್ಮನವರ,ಹನುಮಂತ ಬೂದಿಹಾಳ, ಅಯ್ಯಪ್ಪ ಮೊಕಾಶಿ,ಪಿ ಬಿ ಕುಲಕರ್ಣಿ, ಗುರು ತಿಗಡಿ, ಕಾಶಪ್ಪ ದೊಡವಾಡ ಮಲ್ಲಿಕಾರ್ಜುನ ಚಿಕ್ಕಮಠ, ಮಾರ್ತಾಂ ಡ ಕತ್ತಿ, ವಿ ಎನ ಕೀರ್ತಿವತಿ ಬಾಬಾಜಾನ ಮುಲ್ಲಾ ಎಂ ಬಿ ಹುಬ್ಬಳ್ಳಿ ನಂದಕುಮಾರ ದ್ಯಾಪೂರ ಭಾರತಿ ಸಾಧನಿ, ಕೋಟೆಗದ್ದೆ ರವಿ (ಬೆಂಗಳೂರು) ಸವಿತಾ ಕುಂಬಾರ ಬಿ ಆರ್ ಜಕಾತಿ,ಅಶೋಕ ಸಜ್ಜನ, ಮಂಜುನಾಥ ಬಡಿಗೇರ(ಸೌಂದರ್ಯ ಆರ್ಟ್ಸ್) ವಿಠ್ಠಲ ಬಸಲಿಗುಂಧಿ, ನಾರಾಯಣಸ್ವಾಮಿ, ಚಂದ್ರ ಶೇಖರ ಶೆಟ್ರು, ಸೇರಿದಂತೆ ಹಲವರು ಅಗಲಿದ ಮಹಾನ್ ಕಲಾವಿದ ಶಿಕ್ಷಕನಿಗೆ ಭಾವಪೂರ್ಣ ನಮನವನ್ನು ಸಲ್ಲಿಸಿ ಸಂತಾಪವನ್ನು ಸೂಚಿಸಿದ್ದಾರೆ.