ಹುಬ್ಬಳ್ಳಿ –
ವಾರ್ಡ್ ಗೆ ಹೊಸ ಟಿಪ್ಪರ್ ಸಮರ್ಪಣೆ ಮಾಡಿದ ಪಾಲಿಕೆಯ ಸದಸ್ಯ ಸಂತೋಷ ಚವಾಣ್ – 10 ವರ್ಷಗಳ ಹಳೆಯ ಆಟೋ ಟಿಪ್ಪರ್ ಗೆ ಮುಕ್ತಿ ನೀಡಿ ವಾರ್ಡ್ ಜನತೆಯ ಬಹುದಿನಗಳ ಬೇಡಿಕೆ ಈಡೇರಿಸಿದ ಯುವ ಉತ್ಸಾಹಿ ಪಾಲಿಕೆಯ ಸದಸ್ಯ ಹೌದು
ಕಳೆದ 10 ವರ್ಷಗಳಿಂದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ 41 ರಲ್ಲಿದ್ದ ಹಳೆಯ ಆಟೋ ಟಿಪ್ಪರ್ ನ್ನು ತಗೆದು ಹೊಸ ವಾಹನವನ್ನು ಪಾಲಿಕೆಯ ಸದಸ್ಯ ಸಂತೋಷ ಚೌಹಾನ್ ನೀಡಿದ್ದಾರೆ.ಹೌದು ವಾರ್ಡ್ ನಲ್ಲಿ ಕಸ ವಿಲೇವಾರಿಗಾಗಿ ಇದ್ದ ಟಿಪ್ಪರ್ ಹಳೆಯದಾಗಿತ್ತು ಈ ಒಂದು ಕುರಿತಂತೆ ವಾರ್ಡ್ ನ ಜನರು ಪಾಲಿಕೆಯ ಸದಸ್ಯ ಸಂತೋಷ ಚೌಹಾನ್ ಗೆ ಬೇಡಿಕೆಯನ್ನು ಇಟ್ಟಿದ್ದರು.
ಟಿಪ್ಪರ್ ನ್ನು ಬದಲಾವಣೆ ಮಾಡಲು ಒತ್ತಾಯ ಮಾಡುತ್ತಿದ್ದರು ಇವೆಲ್ಲದರ ನಡುವೆ ಸಧ್ಯ ಈ ಒಂದು ಹಳೆಯ ಆಟೋ ಟಿಪ್ಪರ್ ಗೆ ಮುಕ್ತಿ ನೀಡಿ ಹೊಸ ವಾಹನವನ್ನು ನೀಡಲಾಗಿದೆ.ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 41 ರಲ್ಲಿ ಸುಮಾರು 10 ವರುಷದ ಹಳೆಯ ಆಟೋ ಟಿಪ್ಪರ್ ತಗೆದು ಹೊಸ ಆಟೋ ಟಿಪ್ಪರ್ ಅನು ವಾರ್ಡ್ ಗೆ ಸಮರ್ಪಣೆಯನ್ನು ಮಾಡಲಾಯಿತು.
ಪಾಲಿಕೆಯ ಸದಸ್ಯ ಸಂತೋಷ ಚೌಹಾನ್ ವಾರ್ಡ್ ನ ಹಿರಿಯರ ಸಮ್ಮುಖದಲ್ಲಿಯೇ ನೀಡಿದರು.ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸದಸ್ಯರಾದ ಸಂತೋಷ ಚವಾಣ್ ಪ್ರಮುಖರಾದ ಆನಂದ್ ಪಾಟೀಲ್, ಸುಮಾ ಕುಲಕರ್ಣಿ, ವಿದ್ಯಾ ಹಸಬಿ , ಡಾಕ್ಟರ್ ಸಂದೀಪ್ ಕುಲಕರ್ಣಿ, ಸುರೇಶ ನೈರ, ಅಲಫ್ರೆಡ್ , ಕೇಶವ್ , ನಾಯ್ಕ್, ಮೀನಾಕ್ಷಿ ಅಮರ್ಗೋಲ್, ಇಂದಿರಾ ಚವಾಣ್, ಅಜಯ್ ನಾಯಿಕರ್ , ಗುರುರಾಜ್ ಹೊರಟ್ಟಿ, ಜೊತಿಭಾ ಮೊರೇ, ಅರೋಗ್ಯ ನಿರೀಕ್ಷ ಕರಾದ ಪ್ರಶಾಂತ್ ಶಿವಮೊಗ್ಗಿ,
ದೇವಪ್ಪ,ಆಟೋ ಟಿಪ್ಪರ್ ಚಾಲಕರಾದ ಮಂಜುನಾಥ, ಹಾಗೂ ಎಲ್ಲಾ ಹಿರಿಯರು, ನಾಗರಿಕರು ಉಪಸ್ಥಿತರಿದ್ದರು.ಇದರೊಂದಿಗೆ ವಾರ್ಡ್ ನ ಜನತೆಯ ಬಹು ದಿನಗಳ ಬೇಡಿಕೆ ಯನ್ನು ಸಂತೋಷ ಚೌಹಾನ್ ಈಡೇರಿಸಿ ಕೊಟ್ಟ ಮಾತನಂತೆ ನಡೆದುಕೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..