ಗರಗ –
ಗ್ರಾಮ ಪಂಚಾಯತ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭಗೊಂಡಿದ್ದು ಧಾರವಾಡ ಜಿಲ್ಲೆಯಲ್ಲೂ ಜೋರಾಗಿದೆ. ಜಿಲ್ಲೆಯ ಧಾರವಾಡ ತಾಲ್ಲೂಕಿನ ಗರಗ ಗ್ರಾಮದಲ್ಲಿ ಪಂಚಾಯತ ಅಖಾಡಕ್ಕೇ 8ನೇ ವಾರ್ಡ್ ನಿಂದ ಸಂತೋಷ ಕರಗುಳಿ ನಾಮಪತ್ರ ಸಲ್ಲಿಸಿದರು.
ಗ್ರಾಮ ಪಂಚಾಯತನಲ್ಲಿ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ತಮ್ಮ ಉಮೇದುವಾರಿಕೆಯನ್ನು ಸಲಿಸಿದ್ರು.
ಗರಗ ಗ್ರಾಮದ 8ನೇ ವಾರ್ಡ್ ನಿಂದ ಸ್ಪರ್ಧೆಗೆ ಬಯಸಿ ಸಂತೋಸ ನಾಮಪತ್ರವನ್ನು ಸಲ್ಲಿಸಿದ್ದಾರೆ. ಸ್ವಚ್ಛ ಪ್ರಾಮಾಣಿಕ ಜನಪರ ರಾಜಕಾರಣದ ಅಭ್ಯರ್ಥಿಯಾಗಿ ಸಂತೋಸ ಕರಗುಳಿ ಅಖಾಡಕ್ಕಿಳಿದಿದ್ದಾರೆ.
ನಾಮಪತ್ರ ಸಲ್ಲಿಕೆಯ ಸಮಯದಲ್ಲಿ ಸಂತೋಸ ಅವರೊಂದಿಗೆ ಈ ಸಂದರ್ಭದಲ್ಲಿ ಸೂಚಕ ರಾಗಿ ಸಂತೋಷ ತೋಟನವರ್, ರವಿ ಅರಗನವರ ,ರವಿ ಒಡೆಯರ , ಚಂದ್ರಶೇಖರ ಎಸ್ ಮಠದ, ಸಂತೋಷ ಹಂಪನ್ನವರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.