ಸವದತ್ತಿ ಯಲ್ಲಮ್ಮದೇವಿ ದೇವಸ್ಥಾನ ಮತ್ತೆ ಬಂದ್ ಕೋವಿಡ್ ಹಿನ್ನೆಲೆಯಲ್ಲಿ ಕೆಲವು ದೇವಾಲಯ ಬಂದ್ ಮಾಡಿ‌ ಆದೇಶ…..

Suddi Sante Desk

ಬೆಳಗಾವಿ –

ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಈಗಾಗಲೇ ರಾಜ್ಯ ಸರ್ಕಾರ ಕೆಲವೊಂ ದಿಷ್ಟು ಕ್ರಮಗಳನ್ನು ಕೈಗೊಂಡಿದ್ದು ಇನ್ನೂ ಇತ್ತ ಆಯಾ ಜಿಲ್ಲಾಡಳಿತಗಳು ಕಠಿಣ ಕ್ರಮಗಳನ್ನು ಕೈಗೊಂಡಿದ್ದು ಮುನ್ನೆ ಚ್ಚರಿಕೆ ಕ್ರಮವಾಗಿ ಬೆಳಗಾವಿ ಜಿಲ್ಲೆಯ ಒಂಬತ್ತು ಪ್ರಮುಖ ದೇವಸ್ಥಾನಗಳನ್ನು ಮುಂದಿನ ಆದೇಶದವರೆಗೆ ಸಾರ್ವಜ ನಿಕ ದರ್ಶನ ನಿಷೇಧಿಸಿದೆ

ಹೌದು ಜಿಲ್ಲಾಧಿಕಾರಿಗಳು ಈ ಕುರಿತು ಆದೇಶವನ್ನು ಮಾಡಿದ್ದು ಬಂದ್ ಮಾಡಿ ಆದೇಶ ವನ್ನು ಹೊರಡಿಸಿ ದ್ದಾರೆ.ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾ‌ನ,ಚಿಂಚಲಿ ಮಾಯಕ್ಕ,ರಾಮದುರ್ಗದ ವೀರಭ ದ್ರೇಶ್ವರ,ಸವದತ್ತಿಯ ಜೋಗುಳಭಾವಿ ದೇವಸ್ಥಾನ, ಹುಕ್ಕೇ ರಿ ಯ ಬಡಕುಂದ್ರಿಯ ಹೊಳೆಮ್ಮ ದೇವಸ್ಥಾನ, ಅಥಣಿಯ ಕೊಕಟನೂರ ಯಲ್ಲಮ್ಮ ದೇವಸ್ಥಾನ ಸೇರಿದಂತೆ ಒಟ್ಟು ಒಂಬತ್ತು ದೇವಸ್ಥಾನಗಳಲ್ಲಿ ಸಾರ್ವಜನಿಕರ ದರ್ಶನ ನಿಷೇಧಿಸಿ ಬೆಳಗಾವಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿ ಸಿದ್ದಾರೆ.

ಸವದತ್ತಿ ಯಲ್ಲಮ್ಮನ ದೇವಸ್ಥಾನ ಕ್ಕೆ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಲಕ್ಷಾಂತರ ಭಕ್ತರು ಸಮಾವೇಶಗೊಳ್ಳುತ್ತಿ ದ್ದರು ಈ ಜಾತ್ರೆಗೆ ಮಹಾರಾಷ್ಟ್ರ ರಾಜ್ಯದಿಂದಲೂ ಸಾವಿ ರಾರು ಜನರು ಬರುವ ಹಿನ್ನಲೆಯಲ್ಲಿ ದೇವಸ್ಥಾನದ ಆವರಣದಲ್ಲಿ ಜಾತ್ರೆ ನಡೆಸುವದಕ್ಕೂ ನಿರ್ಬಂಧ ಹೇರಲಾ ಗಿದ್ದು ಜಿಲ್ಲೆಯ ಒಂಬತ್ತು ದೇವಸ್ಥಾನಗಳು ಮುಂದಿನ ಆದೇಶದವರೆಗೆ ಸಾರ್ವಜನಿಕರ ದರ್ಶನಕ್ಕೆ ಬಂದ್ ಆಗಲಿವೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.