ಆಂದ್ರಪ್ರದೇಶ –
ಮಹಾಮಾರಿ ಕರೋನ ಎರಡನೇಯ ಅಲೆ ದಿನ ದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು ಹೀಗಾಗಿ ಆಂಧ್ರ ಪ್ರದೇಶದಲ್ಲಿ ಶಾಲೆಗಳ ಆರಂಭಕ್ಕೆ ಸರ್ಕಾರ ನಿರ್ಧಾ ರ ತೆಗೆದುಕೊಂಡಿದ್ದು ಘೋಷಣೆ ಮಾಡಿದೆ. ಕೊರೋನಾ ಕೇಸಸ್ ಕಮ್ಮಿಯಾಗಿರೋ ಬೆನ್ನಲ್ಲೇ ಆಗಸ್ಟ್ 16 ರಿಂದ ಶಾಲೆಗಳನ್ನ ಓಪನ್ ಮಾಡಲಾಗು ತ್ತೆ ಅಂತ ಆಂಧ್ರ ಸರ್ಕಾರ ಘೋಷಿಸಿದೆ.ಅಂದ್ರೆ ಒಂದನೇ ತರಗತಿಯಿಂದ 12ನೇ ತರಗತಿವರೆಗಿನ ಮಕ್ಕಳಿಗೆ ಆಗಸ್ಟ್ 16ರಿಂದ ಭೌತಿಕ ತರಗತಿಗಳು ಆರಂಭವಾಗಲಿವೆ.
ಆಂಧ್ರ ಸಿಎಂ ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದಲ್ಲಿ ನಡೆದ ಸಭೆ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಬಹುಶಃ ಲಾಕ್ ಡೌನ್ ನಂತರ ನಿರ್ಬಂಧದ ಬಳಿಕ ಭೌತಿಕ ಶಾಲೆಗಳನ್ನು ತೆರೆಯಲು ನಿರ್ಧರಿಸಿದ ಮೊದಲ ರಾಜ್ಯ ಆಂಧ್ರಪ್ರದೇಶ ಆಗಿದ್ದು ಇಲ್ಲಿ ಶಾಲೆಗಳನ್ನು ಆರಂಭ ಮಾಡಿದ ನಂತರ ಇನ್ನೂ ದೇಶದ ಉಳಿದೆಡೆ ಶಾಲೆಗಳು ಬಾಗಿಲು ತೆರೆಯುತ್ತ ವೆನಾ ಎಂಬುದನ್ನು ಕಾದು ನೋಡಬೇಕು