ಧಾರವಾಡ –
ಜ.24 ರಿಂದ ಧಾರವಾಡ ನಗರ ಮತ್ತು ಗ್ರಾಮೀಣ ಹಾಗೂ ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ತಾಲೂಕಿನಾದ್ಯಂತದ ಶಾಲೆಗಳ 1 ರಿಂದ 8 ನೇ ತರಗತಿಗಳನ್ನು ಪುನರ್ ಆರಂಭಿ ಸಲು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಇಂದು ಪರಿಷ್ಕೃತ ಆದೇಶ ಹೊರಡಿಸಿದ್ದಾರೆ.
ಕೋವಿಡ್ ಪತ್ತೆಯಾದ ಶಾಲೆ ಕ್ಲಸ್ಟರ್
ಸರ್ಕಾರದ ಪರಿಷ್ಕೃತ ಆದೇಶದ ಹಿನ್ನೆಲೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳ ಸುರಕ್ಷತಾ ದೃಷ್ಠಿಯಿಂದ 3 ರಿಂದ 5 ಪಾಸಿಟಿವ್ ಪ್ರಕರಣಗಳು ಬಂದರೆ 3 ದಿನ,6 ರಿಂದ 20 ಪಾಸಿಟಿವ್ ಪ್ರಕರಣಗಳು ಬಂದರೆ 5 ದಿನ,20 ಕ್ಕಿಂತ ಹೆಚ್ಚು ಪ್ರಕರಣಗಳು ಬಂದರೆ 7 ದಿನ, ಹೀಗೆ ಪ್ರಕರಣಗಳು ದಾಖ ಲಾದರೆ ಶಾಲೆ,ಕಾಲೇಜನ್ನು ತಕ್ಷಣ ಕ್ಲಸ್ಟರ್ ಎಂದು ಪರಿಗಣಿ ಸಲಾಗುತ್ತದೆ.
ಜನವರಿ 24 ರಿಂದ ಶಾಲೆಗಳು ಪುನರ್ ಆರಂಭ
ಜನೆವರಿ 12 ರಂದು ಧಾರವಾಡ ಜಿಲ್ಲೆಯ ಧಾರವಾಡ ನಗರ ಮತ್ತು ಗ್ರಾಮೀಣ ಹಾಗೂ ಹುಬ್ಬಳ್ಳಿ ನಗರ ಮತ್ತು ಗ್ರಾಮೀಣ ತಾಲ್ಲೂಕಿನಾದಾದ್ಯಂತ 1 ರಿಂದ 8ನೇ ತರಗತಿ ವರೆಗಿನ ಶಾಲೆಗಳನ್ನು ದಿನಾಂಕ 13-01-2022 ರಿಂದ ಮುಂದಿನ ಆದೇಶವಾಗುವವರೆಗೆ ಶಾಲೆಗಳನ್ನು ತೆರೆಯ ದಂತೆ ಆದೇಶಿಸಿರುವದನ್ನು ಹಿಂಪಡೆಯಲಾಗಿದೆ.ಜನೆವರಿ 24 ರ ಸೋಮವಾರದಿಂದ ಶಾಲೆಗಳನ್ನು ಪುನರ್ ಆರಂಭಿ ಸಲು ಅವರು ನಿರ್ದೇಶಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ನೋಡಲ್ ಅಧಿಕಾರಿ
ಈ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಕುರಿತು ವಿಪತ್ತು ನಿರ್ವಹಣಾ ಕಾಯ್ದೆ 2005 ರ ಕಲಂ 34 ರನ್ವಯ ಜಿಲ್ಲೆಯ ಎಲ್ಲ ರೀತಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವ್ಯಾಪ್ತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರನ್ನು ನೋಡಲ್ ಅಧಿಕಾರಿಯನಾಗಿ ನೇಮಿಸಿ ಆದೇಶಿಸಿದ್ದು ಈ ಆದೇಶವು ತಕ್ಷಣದಿಂದ ಜಾರಿಗೆ ಬಂದಿರು ತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಶಾಲೆ ಒಂದು ಘಟಕವಾಗಿ ಪರಿಗಣನೆ
ರಾಜ್ಯದಲ್ಲಿ ಕೋವಿಡ್ ರೂಪಾಂತರಿ ಓಮೇಕ್ರಾನ್ ವೈರಾಣು ಹರಡುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರವು ಜನೆವರಿ 11 ರಂದು ಮಾರ್ಗಸೂಚಿಗಳನ್ನು ಹೊರಡಿಸಿ ತಾಲೂಕನ್ನು ಒಂದು ಘಟಕವೆಂದು ಪರಿಗಣಿಸಿ ಶಾಲೆಗ ಳನ್ನು ಸ್ಥಗಿತಗೊಳ್ಳಿಸುವ ಅಥವಾ ನಡೆಸುವ ಬಗ್ಗೆ ತಿರ್ಮಾ ನಿಸಲು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದ್ದ ಆದೇಶವನ್ನು ಪರಿಷ್ಕರಿಸಿ ಜನೆವರಿ 21 ರಂದು ಹೊಸ ಮಾರ್ಗಸೂಚಿ ಯನ್ನು ನೀಡಿದೆ.ಅದರಂತೆ ಒಂದು ತಾಲೂಕನ್ನು ಘಟಕ ವೆಂದು ಪರಿಗಣಿಸಿರುವುದನ್ನು ಮಾರ್ಪಡಿಸಿ,ಪ್ರಾಥಮಿಕ ಮತ್ತು ಪ್ರೌಢ ಶಾಲೆಯನ್ನು ಘಟಕವೆಂದು ಪರಿಗಣಿಸಿ ಅಂತಹ ಶಾಲೆ ಕಾಲೇಜುಗಳನ್ನು ಮಾತ್ರ ಮುಚ್ಚುವ ಅಥವಾ ನಡೆಸುವ ಬಗ್ಗೆ ನಿರ್ಣಯ ತೆಗೆದುಕೊಳ್ಳುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸ್ಪಷ್ಟೀಕರಣ ಹೊರಡಿಸಿದ್ದಾರೆ.
ಕೋವಿಡ್ ಕಾರಣದಿಂದ ಮುಚ್ಚಿರುವ ಶಾಲೆಗಳು
ಈಗಾಗಲೇ ಕೋವಿಡ್ ಸೋಂಕಿತರ ಪ್ರಕರಣಗಳು ದಾಖಲಾಗಿರುವ ಶಾಲೆಗಳನ್ನು ಅಲ್ಲಿನ ಕೋವಿಡ್ ಸಂಖ್ಯೆಗಳಿಗೆ ಅನುಗುಣವಾಗಿ 3, 5 ಮತ್ತು 7 ದಿನಗಳ ವರೆಗೆ ಮುಚ್ಚಲಾಗುತ್ತದೆ.ಸೀಲ್‍ಡೌನ್ ಅವಧಿ ಮುಗಿದ ನಂತರ,ಶ್ಯಾನಿಟೈಜ್ ಮಾಡಿ ಸ್ವಚ್ಚಗೊಳಿಸಿ ಶಾಲೆಗಳನ್ನು ಪುನರ್ ಆರಂಭಿಸಬೇಕು ಎಂದು ಜಿಲ್ಲಾಧಿಕಾರಿ ಉಲ್ಲೇಖ ಮಾಡಿದ್ದಾರೆ