ಬೆಳಗಾವಿ –
ರಾಜ್ಯದಲ್ಲಿ ಪದವಿ ಕಾಲೇಜುಗಳ ಆರಂಭದ ಹಿನ್ನಲೆಯಲ್ಲಿ ಕರೊನಾ ಪರೀಕ್ಷೆಗಾಗಿ ವಿದ್ಯಾರ್ಥಿಗಳು ಪರದಾಡುತ್ತಿರುವ ಚಿತ್ರಣ ಬೆಳಗಾವಿಯಲ್ಲಿ ಕಂಡು ಬಂದಿತು.
ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಕರೊನಾ ಪರೀಕ್ಷೆ ಕಡ್ಡಾಯ ಎಂದು ಹೇಳಿದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಪರೀಕ್ಷಾ ರಿಪೋರ್ಟ್ ನೊಂದಿಗೆ ಕಾಲೇಜಿಗೆ ಹೋಗಬೇಕು ಹೀಗಾಗಿ ಬೆಳಗಾವಿಯಲ್ಲಿ ಕೊರೊನಾ ಪರೀಕ್ಷೆಗಾಗಿ ನೂಕು ನುಗ್ಗಲು ಕಂಡು ಬಂದಿತು.
ಬೆಳಗಾವಿ ಬಿಮ್ಸ್ ಆಸ್ಪತ್ರೆಯ ಬಳಿ ವಿದ್ಯಾರ್ಥಿಗಳಿಂದ ನೂಕು ನುಗ್ಗಲಾಗಿರುವ ಚಿತ್ರಣ ಕಂಡು ಬಂದಿತು. ರಾಜ್ಯದಲ್ಲಿ ಪದವಿ ಕಾಲೇಜುಗಳ ಆರಂಭ ಹಿನ್ನೆಲೆ.ಕಾಲೇಜಿಗೆ ಬರಲು ಕೊರೊನಾ ಪರೀಕ್ಷೆ ವರದಿ ಕಡ್ಡಾಯವಾಗಿದೆ.ಹೀಗಾಗಿ ಪರೀಕ್ಷೆಗಾಗಿ ಬಂದ ವಿದ್ಯಾರ್ಥಿಗಳೆಲ್ಲರೂ ಸಾಮಾಜಿಕ ಅಂತರ ಮರೆತು ನೂಕು ನುಗ್ಗಲು ಆಗಿರುವ ಚಿತ್ರಣ ಕಂಡು ಬಂದಿತು.ವೈದ್ಯಕೀಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದು ಕರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಹಾಗೇ ರಿಪೋರ್ಟ್ ಪಡೆದುಕೊಳ್ಳಲು ಪರದಾಡುತ್ತಿದ್ದಾರೆ.