What’s Up ನಲ್ಲಿ ವಿಡಿಯೋ ಕಾಲ್ ಜೊತೆ ಸ್ಕ್ರೀನ್ ಶೇರಿಂಗ್ ಹೊಸ ಫೀಚರ್ ಬಿಡುಗಡೆ – ಬಳಕೆದಾರರಿಗೆ ಹೊಸತನ ಪರಿಚಯಿಸಿದ ಮೆಟಾ ಸಂಸ್ಥೆ…..

Suddi Sante Desk
What’s Up ನಲ್ಲಿ ವಿಡಿಯೋ ಕಾಲ್ ಜೊತೆ ಸ್ಕ್ರೀನ್ ಶೇರಿಂಗ್ ಹೊಸ ಫೀಚರ್ ಬಿಡುಗಡೆ – ಬಳಕೆದಾರರಿಗೆ ಹೊಸತನ ಪರಿಚಯಿಸಿದ ಮೆಟಾ ಸಂಸ್ಥೆ…..

ನವದೆಹಲಿ

What’s Up ನಲ್ಲಿ ವಿಡಿಯೋ ಕಾಲ್ ಜೊತೆ ಸ್ಕ್ರೀನ್ ಶೇರಿಂಗ್ ಹೊಸ ಫೀಚರ್ ಬಿಡುಗಡೆ  ಬಳಕೆದಾರರಿಗೆ ಹೊಸತನ ಪರಿಚಯಿಸಿದ ಮೆಟಾ ಸಂಸ್ಥೆ.ಹೌದು ವಾಟ್ಸಪ್ ನೂತನ ಅಪ್ ಡೇಟ್ ನಲ್ಲಿ ವಿಡಿಯೊ ಕಾಲ್ ವೇಳೆ ಸ್ಕ್ರೀನ್ ಶೇರಿಂಗ್ ಫೀಚರ್ ಪರಿಚಯಿಸಿದೆ.

ವಾಟ್ಸಪ್ ಕುರಿತು ಅದರ ಮಾತೃ ಸಂಸ್ಥೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದು ವಾಟ್ಸಪ್ ನೂತನ ಅಪ್ ಡೇಟ್ ನಲ್ಲಿ ವಿಡಿಯೊ ಕಾಲ್ ವೇಳೆ ಸ್ಕ್ರೀನ್ ಶೇರಿಂಗ್ ಫೀಚರ್ ಪರಿಚಯಿಸಿದೆ.ವಾಟ್ಸಪ್ ನಲ್ಲಿ ವಿಡಿಯೊ ಕಾಲ್ ವೇಳೆ ಸ್ಕ್ರೀನ್ ಶೇರಿಂಗ್ ಫೀಚರ್ ಸಕ್ರಿಯಗೊಳಿಸಲಾಗಿದೆ ಎಂದು ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಜುಕರ್‌ ಬರ್ಗ್ ಹೇಳಿದ್ದಾರೆ.

ವಿಡಿಯೊ ಕಾಲ್ ವೇಳೆ ಬಳಕೆದಾರರು ಶೇರಿಂಗ್’ ಐಕಾನ್ ಅನ್ನು ಕ್ಲಿಕ್ ಮಾಡುವ ಮೂಲಕ ನಿರ್ದಿಷ್ಟ ಅಪ್ಲಿಕೇಶನ್ ಅಥವಾ ಸಂಪೂರ್ಣ ಪರದೆಯನ್ನು ಹಂಚಿಕೊಳ್ಳುವ ಆಯ್ಕೆ ಮಾಡುವ ಮೂಲಕ ಸ್ಕ್ರೀನ್ ಹಂಚಿಕೆಯನ್ನು ಪ್ರಾರಂಭಿಸಬ ಹುದು ಕೆಲಸದ ನಿಮಿತ್ತ ಡಾಕ್ಯುಮೆಂಟ್‌ಗಳನ್ನು ಹಂಚಿಕೊಳ್ಳುವುದು,

ಕುಟುಂಬದೊಂದಿಗೆ ಚಿತ್ರಗಳನ್ನು ಹಂಚಿಕೊಳ್ಳು ವುದು, ರಜೆ ಕುರಿತು ಯೋಜಿಸುವುದು ಅಥವಾ ಸ್ನೇಹಿತರೊಂದಿಗೆ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವುದು ಮುಂತಾದ ಸಂದರ್ಭ ವಿಡಿಯೊ ಕರೆ ಸಮಯದಲ್ಲಿ ನಿಮ್ಮ ಪರದೆಯ ಲೈವ್ ವೀಕ್ಷಣೆಯನ್ನು ಹಂಚಿಕೊಳ್ಳಲು ಸ್ಕ್ರೀನ್ ಶೇರಿಂಗ್ ಫೀಚರ್ ನಿಮಗೆ ಅನುಮತಿಸುತ್ತದೆ’ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ವಾಟ್ಸಪ್ಪ್ ಬಳಕೆದಾರರು ಸ್ಮಾರ್ಟ್‌ಫೋನ್‌ಗಳಲ್ಲಿ ವಿಶಾಲವಾದ ಮತ್ತು ಮತ್ತಷ್ಟು ಉತ್ತಮ ಅನು ಭವಕ್ಕಾಗಿ ಲ್ಯಾಂಡ್‌ಸ್ಕೇಪ್ ಮೋಡ್‌ನಲ್ಲಿ ವಿಡಿಯೊ ಕರೆಗಳನ್ನು ಮಾಡಬಹುದು. ನವೆಂಬರ್ 2016ರಿಂದ ಎಲ್ಲ ಬಳಕೆದಾರರಿಗೆ ವಾಟ್ಸಪ್ ವಿಡಿಯೊ ಕರೆ ಫೀಚರ್ ಅನ್ನು ಪರಿಚಯಿಸಿತ್ತು

ಮೆಟಾ CEO ಮಾರ್ಕ್ ಜುಕರ್‌ಬರ್ಗ್ ವಾಟ್ಸಾ ಪ್‌ಗಾಗಿ ಹೊಸ ವೈಶಿಷ್ಟ್ಯವನ್ನು ಘೋಷಿಸಿದ್ದಾರೆ ಅದು ಬಳಕೆದಾರರಿಗೆ ವೀಡಿಯೊ ಕರೆ ಸಮಯ ದಲ್ಲಿ ತಮ್ಮ ಪರದೆಯನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ. ವಾಟ್ಸಪ್ಪ್ ನ ಸ್ಕ್ರೀನ್ ಹಂಚಿಕೆ ವೈಶಿಷ್ಟ್ಯವು meta ಪ್ಲಾಟ್‌ಫಾರ್ಮ್‌ಗೆ ಮೌಲ್ಯವಾದ ಸೇರ್ಪಡೆಯಾಗಿದೆ.

ಈ ವೈಶಿಷ್ಟವು ವೀಡಿಯೊ ಕರೆಗಳ ಸಮಯದಲ್ಲಿ ಬಳಕೆದಾರರು ತಮ್ಮ ಮೊಬೈಲ್ ಸ್ಕ್ರೀನ್ ಅನ್ನು ವಿಡಿಯೋ ಕಾಲ್ ನಲ್ಲಿ ಭಾಗವಹಿಸಿದವ ರೊಂದಿಗೆ ಹಂಚಿಕೊಳ್ಳಬಹುದು.ವಾಟ್ಸ ಆಪ್  ನಲ್ಲಿ ಸ್ಕ್ರೀನ್ ಶೇರಿಂಗ್ ಅನೇಕ ಉದ್ದೇಶಗಳನ್ನು ಪೂರೈಸುತ್ತದೆ.

ಅದು ಒಟ್ಟಿಗೆ ಪ್ರಾಜೆಕ್ಟ್‌ ನಲ್ಲಿ ಕೆಲಸ ಮಾಡುತ್ತಿರು ವಾಗ ಪ್ರೆಸೆಂಟೇಷನ್ ನೀಡುತ್ತಿರುವುದಾಗಲಿ, ಫೋಟೋಗಳು ಮತ್ತು ವೀಡಿಯೊಗಳನ್ನು ಸರಳ ವಾಗಿ ಹಂಚಿಕೊಳ್ಳಲು ಸ್ನೇಹಿತರೊಂದಿಗೆ ಮತ್ತು ಕುಟುಂಬದವರೊಂದಿಗೆ ಫೋಟೋಗಳು ಮತ್ತು ವೀಡಿಯೊಗಳು ಹಂಚಿಕೊಳ್ಳಬಹುದು.

ಯಾವುದೇ ತರಹದ ಆನ್ಲೈನ್ ತರಗತಿಗಳಾಗಲಿ, ಕಾರ್ಯಾಗಾರಗಳು ಮತ್ತು ಟ್ಯುಟೋರಿಯಲ್‌ ಗಳನ್ನು ನಡೆಸಲು ಶಿಕ್ಷಕರು ಈ ವೈಶಿಷ್ಟ್ಯವನ್ನು ಬಳಸಿಕೊಳ್ಳಬಹುದು.ವಾಟ್ಸಪ್ಪ್ ನಲ್ಲಿ ಸ್ಕ್ರೀನ್ ಹಂಚಿಕೆಯನ್ನು ‘Share ‘ ಐಕಾನ್ ಅನ್ನು ಟ್ಯಾಪ್ ಮಾಡುವ ಮೂಲಕ ಅಥವಾ ಕ್ಲಿಕ್ ಮಾಡುವ ಮೂಲಕ ಪ್ರವೇಶಿಸಬಹುದು.

ಬಳಕೆದಾರರು ‘Share’ ಐಕಾನ್ ಕ್ಲಿಕ್ ಮಾಡುವ ಮೂಲಕ ಸ್ಕ್ರೀನ್ ಹಂಚಿಕೆಯನ್ನು ಪ್ರಾರಂಭಿಸಬ ಹುದು. ಬಳಕೆದಾರರು ಅದರ ಮೇಲೆ ಟ್ಯಾಪ್ ಮಾಡಿದಾಗ ಸ್ಕ್ರೀನ್ ಹಂಚಿಕೆ ಪ್ರವೇಶವನ್ನು ಅನುಮತಿಸಲು ಅಪ್ಲಿಕೇಶನ್ ಅವರನ್ನು ಕೇಳುತ್ತದೆ ಬಳಕೆದಾರರು ನಿರ್ದಿಷ್ಟ ಅಪ್ಲಿಕೇಶನ್ ಹಂಚಿಕೊಳ್ಳುವ ಅಥವಾ ಸಂಪೂರ್ಣ ಪರದೆ ಯನ್ನು ಹಂಚಿಕೊಳ್ಳುವ ನಡುವೆ ಆಯ್ಕೆ ಮಾಡಬಹುದು.

ಈ ವೈಶಿಷ್ಟ್ಯದಲ್ಲಿ ಬಳಕೆದಾರರ ಭದ್ರತೆ ಮತ್ತು ಗೌಪ್ಯತೆ ಗಮನದಲ್ಲಿಟ್ಟು ಈ ಸ್ಕ್ರೀನ್ ಶೇರಿಂಗ್
end- to -end encryption ಭದ್ರತಾ ವೈಶಿಷ್ಟ ವನ್ನು ಅಭಿವೃದ್ಧಿ ಮಾಡಲಾಗಿದೆ, ಅಂದರೆ ಇದು ಬಳಕೆದಾರರ ಸೆನ್ಸಿಟಿವ್ ಹಾಗೂ ಪ್ರೈವಸಿ ಯನ್ನು ಕಾಪಾಡುತ್ತದೆ ಮತ್ತು ಹಂಚಿಕೊಂಡ ವಿಷಯವು ವನ್ನು ಖಚಿತಪಡಿಸುತ್ತದೆ.

“ಕೆಲಸಕ್ಕಾಗಿ ಡಾಕ್ಯುಮೆಂಟ್‌ಗಳನ್ನು ಹಂಚಿಕೊ  ಳ್ಳುವುದು,ಕುಟುಂಬದೊಂದಿಗೆ ಫೋಟೋಗ ಳನ್ನು ಬ್ರೌಸ್ ಮಾಡುವುದು, ರಜೆಯನ್ನು ಯೋಜಿಸುವುದು ಅಥವಾ ಸ್ನೇಹಿತರೊಂದಿಗೆ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವುದು ಅಥವಾ ತಾಂತ್ರಿಕ ಬೆಂಬಲದೊಂದಿಗೆ ಅಜ್ಜಿ ಯರಿಗೆ ಸಹಾಯ ಮಾಡುವುದು

ಪರದೆಯ ಹಂಚಿಕೆಯು ಕರೆ ಸಮಯದಲ್ಲಿ ನಿಮ್ಮ ಪರದೆಯ ಲೈವ್ ವೀಕ್ಷಣೆಯನ್ನು ಹಂಚಿಕೊಳ್ಳಲು ನಿಮಗೆ ಅನುಮತಿಸುತ್ತದೆ” ಎಂದು ವಾಟ್ಸಪ್ಪ್ ಪ್ರಕಟಣೆಯನ್ನು ನೀಡಿದೆ

ಸುದ್ದಿ ಸಂತೆ ನ್ಯೂಸ್ ನವದೆಹಲಿ…..

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.