ಡಾಕ್ಟರ್ ಆಗುವ ಕನಸು ಕಟ್ಟಿ ಕೊಂಡು ವಿದ್ಯಾರ್ಥಿನಿ ಯೊಬ್ಬಳ ಕನಸಿನ ದುಡಿಮೆ ಮೆಚ್ಚುವಂತ ಹದ್ದು ಕುಟುಂಬ ಜವಾಬ್ದಾರಿ ಹೇಗೆ ನಡಿಸುತ್ತಿದ್ದಾರೆ ಒಮ್ಮೆ ನೋಡಿ…..

Suddi Sante Desk

ಭುವನೇಶ್ವರ –

ಮಹಾಮಾರಿ ಕರೊನಾ ವೈರಸ್ ದೇಶದಲ್ಲಿ ಸೃಷ್ಟಿಸಿ ರುವ ಬಿಕ್ಕಟ್ಟಿನಿಂದ ಅನೇಕರ ಜೀವನದ ಹಾದಿಯೇ ಬದಲಾಗಿದೆ.ಹಲವರ ಕನಸುಗಳು ಕನಸಾಗಿಯೇ ಉಳಿದಿವೆ.ಅದಕ್ಕೆ ತಾಜಾ ಉದಾಹರಣೆ ಒಡಿಶಾದ ಯುವತಿ.ವೈದ್ಯೆಳಾಗುವ ಈಕೆಯ ಕನಸು ಕರೊನಾ ಲಾಕ್‌ಡೌನ್ ನಿಂದಾಗಿ ಕನಸಾಗಿಯೇ ಉಳಿದಿದೆ. ಭಾನುಪ್ರಿಯಾಳ ವಯಸ್ಸು 18.ಪಿಯು ವಿದ್ಯಾರ್ಥಿನಿ ಆಗಿರುವ ಭಾನುಪ್ರಿಯಾ ಡಾಕ್ಟರ್ ಆಗಬೇಕೆಂಬ ಕನಸಿನೊಂದಿಗೆ ಗುರಿಯೆಡೆಗೆ ಸಾಗಿದ್ದಳು.ಆದರೆ ಕರೊನಾ ಲಾಕ್‌ಡೌನ್ ಆಕೆಯ ಕನಸಿಕೆ ಅಡ್ಡಿಯಾಗಿ ದೆ.ವೃತ್ತಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಹಾಗೂ ಕುಟುಂಬದ ಆಧಾರವಾಗಿದ್ದ ತಂದೆಯ ಕೆಲಸವನ್ನು ಲಾಕ್‌ಡೌನ್ ಕಸಿದುಕೊಂಡಿತು. ಉಳಿ ತಾಯ ಹಣ ಖಾಲಿಯಾಗುತ್ತಿದ್ದಂತೆ ಮುಂದಿನ ಜೀವನವೇ ಕುಟುಂಬಕ್ಕೆ ಕಷ್ಟವಾಗಿತ್ತು.ಒಂದು ಹೊತ್ತಿನ ಆಹಾರ ವ್ಯವಸ್ಥೆ ಮಾಡುವುದೇ ಕುಟುಂಬ ದಕ್ಕೆ ದುಸ್ಥರವಾಗಿತ್ತು.

ಇತ್ತ ತಂದೆಯ ಅಸಹಾಯಕತೆಯನ್ನು ನೋಡಿದ ಭಾನುಪ್ರಿಯಾ ತನ್ನ ವಿದ್ಯಾಭ್ಯಾಸವನ್ನು ಸ್ವಲ್ಪಕಾಲ ಪಕ್ಕಕ್ಕಿಟ್ಟು ಏನಾದರೂ ಮಾಡಬೇಕೆಂಬ ನಿರ್ಧಾರಕ್ಕೆ ಬಂದಳು.ಮೂವರು ಒಡಹುಟ್ಟಿದವರಲ್ಲಿ ಭಾನುಪ್ರಿ ಯಾಳೇ ಹಿರಿಯವಳು.ಕುಟುಂಬದ ಕಷ್ಟಕ್ಕೆ ಕರಗಿದ ಭಾನುಪ್ರಿಯಾ ಆನ್ ಲೈನ್ ಪುಡ್ ಡೆಲಿವರಿ ಕಂಪನಿ ಜೊಮ್ಯಾಟೋಗೆ ಡೆಲಿವರಿ ಗರ್ಲ್ ಆಗಿ ಸೇರಿದರು.

ರಾತ್ರಿಯ ವೇಳೆ ನಿರ್ಜನ ರಸ್ತೆಗಳಲ್ಲಿ ಡೆಲಿವರಿ ಗರ್ಲ್ ಆಗಿ ಕೆಲಸ ಮಾಡುವುದು ಎಷ್ಟೊಂದು ಕಷ್ಟ ಅಂತಾ ಗೊತ್ತಿದ್ದರೂ ಕೂಡ ಅದನ್ನೆಲ್ಲ ಲೆಕ್ಕಿಸದೇ ಭಾನುಪ್ರಿ ಯಾ ಕೆಲಸ ಆರಂಭಿಸಿದ್ದಾರೆ.ಕುಟುಂಬಕ್ಕೆ ಸಹಾಯ ವಾಗಲು ಭಾನುಪ್ರಿಯಾ ಕಾಲೇಜನ್ನು ಸಹ ತೊರೆದಿ ದ್ದಾರೆ.ಕೆಲಸಕ್ಕೂ ಸೇರುವ ಮುನ್ನ ತನ್ನ ತಂದೆಯ ಬೈಕ್ ಅನ್ನು ಓಡಿಸುವುದು ಹೇಗೆಂದು ಕಲಿತುಕೊಂ ಡಿದ್ದಾರೆ.

ಸ್ಥಳೀಯ ಜೊಮ್ಯಾಟೋ ಕಚೇರಿಗೆ ಹೋಗಿ ಸಂದರ್ಶನ ಎದುರಿಸಿ ಡೆಲಿವರಿ ಏಜೆಂಟ್ ಆಗಿ ಕೆಲಸವನ್ನು ಗಿಟ್ಟಿಸಿಕೊಂಡಿದ್ದಾರೆ.ಈ ಮೂಲಕ ಖಡಕ್ ಮೊದಲ ಡೆಲಿವರಿ ಗರ್ಲ್ ಹೆಸರಿಗೆ ಪಾತ್ರರಾ ಗಿದ್ದಾರೆ.ರಾತ್ರಿಯ ವೇಳೆ ಕಗ್ಗಲಿತ್ತನಲ್ಲಿ ಇಕ್ಕಟಾದ ರಸ್ತೆಗಳಲ್ಲಿ ಫುಡ್ ಡೆಲಿವರಿ ಮಾಡಬೇಕಾದ ಸ್ಥಿತಿ ಇದೆ.ಆದರೆ ಭಾನುಪ್ರಿಯಾ ಹೇಳುವಂತೆ ಇದುವರೆ ಗೂ ಆಕೆ ಯಾವುದೇ ಅಹಿತಕರ ಘಟನೆಯಾಗಲಿ ಅಥವಾ ಯಾರಿಂದಲೂ ಅಸಭ್ಯ ವರ್ತನೆಯನ್ನು ಎದುರಿಸಿಲ್ಲ ಎಂದು ಹೇಳಿಕೊಂಡಿದ್ದಾರೆ.

ಡೆಲಿವರಿ ಜಾಬ್ ಮಾತ್ರವಲ್ಲದೆ ಬೆಳಗ್ಗೆ 6 ಗಂಟೆಗೆ ಟ್ಯೂಷನ್ ತೆಗೆದುಕೊಳ್ಳುವ ಮೂಲಕ ಹೆಚ್ಚಿನ ದುಡುಮೆ ಮಾಡುತ್ತಿರುವ ಭಾನುಪ್ರಿಯಾ ತನ್ನ ಶಿಕ್ಷಣವನ್ನು ಮುಂದುವರಿಸುವ ಇಂಗಿತವನ್ನು ಹೊಂದಿದ್ದಾರೆ.

ಈ ಬಗ್ಗೆ ಮಾಧ್ಯಮವೊಂದರ ಬಳಿ ಮಾತನಾಡಿರುವ ಭಾನುಪ್ರಿಯಾ ಡಾಕ್ಟರ್ ಆಗಿ ಮಾನವೀಯ ಕೆಲಸ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ನನ್ನ ತಂದೆ ಕೆಲಸ ಹೋದಾಗಿನಿಂದ ಜೀವನ ತುಂಬಾ ಕಷ್ಟವಾಗಿದೆ ಎಂದು ಹೇಳಿಕೊಂಡಿದ್ದಾರೆ.

ನನ್ನ ತಂದೆ ನಾನು ಸೇರಿ ಮೂವರು ಹೆಣ್ಣು ಮಕ್ಕಳಿ ದ್ದಾರೆ. ತಂದೆಗೆ ಸಹಾಯ ಮಾಡಲು ಈ ನಿರ್ಧಾರ ತೆಗೆದುಕೊಂಡೆ.ಯಾವುದೇ ಕೆಲಸವೂ ಸಣ್ಣದಲ್ಲ. ನನ್ನ ಕುಟುಂಬಕ್ಕೆ ಸಾಧ್ಯವಾದಷ್ಟು ನೆರವಾಗುತ್ತೇನೆ. ನನ್ನ ಸಹೋದರಿಯರು ಶಿಕ್ಷಣ ಮುಂದುವರಿಸಲು ಸಹಾಯ ಮಾಡುತ್ತೇನೆ ಎಂದಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.