ಆಂಕರ್ –
ಎರಡು ವಾರಗಳ ವೀಕೆಂಡ್ ಕರ್ಫ್ಯೂ ನಂತರ ಜನಜೀವನ ಯಥಾಸ್ಥಿತಿಗೆ ಬಂದಿದ್ದು ಧಾರವಾಡ ಜಿಲ್ಲೆಯಲ್ಲೂ ಇದೇ ಚಿತ್ರಣ ಕಂಡು ಬಂದಿದ್ದು ಅವಳಿ ನಗರ ಸೇರಿದಂತೆ ಜಿಲ್ಲೆ ಯಲ್ಲಿ ವಿಕೇಂಡ್ ಕರ್ಫ್ಯೂ ತಗೆದ ಹಿನ್ನಲೆಯಲ್ಲಿ ಇಂದು ಎಂದಿನಂತೆ ಹುಬ್ಬಳ್ಳಿ ಧಾರವಾಡ ಸೇರಿದಂತೆ ಜಿಲ್ಲೆಯಾ ಧ್ಯಂತ ಜನಜೀವನ ಸೇರಿದಂತೆ ಎಲ್ಲವೂ ಸಾಮಾನ್ಯವಾಗಿ ಕಂಡು ಬಂದವು.

ಬಸ್ ಗಳ ಓಡಾಟ,ಅಂಗಡಿ ಮುಂಗಟ್ಟುಗಳ ಆರಂಭ ವ್ಯಾಪಾರ ವಹಿವಾಟು ಹೂಗಳ ಮಾರುಕಟ್ಟೆ ತರಕಾರಿಗಳ ಮಾರಾಟ ಹೀಗೆ ಎಲ್ಲವೂ ಸಾಮಾನ್ಯವಾಗಿ ಕಂಡು ಬಂದವು.ಬಾರ್ ಮತ್ತು ರೆಸ್ಟೊರೆಂಟ್ ಗಳು ಕೂಡಾ ಆರಂಭವಾಗಿದ್ದು ಇದರೊಂದಿಗೆ ಶಾಲೆಗಳು ಕೂಡಾ ಬಾಗಿಲು ತಗೆದಿದ್ದು ಹೀಗಾಗಿ ವಿಕೇಂಡ್ ಕರ್ಪ್ಯೂ ಮುಗಿದ ಹಿನ್ನಲೆಯಲ್ಲಿ ಅವಳಿ ನಗರದಲ್ಲಿ ಜನಜೀವನ ಸಾಮಾನ್ಯ ವಾಗಿ ಕಂಡು ಬಂದಿತು.
ವೀಕೆಂಡ್ ಕರ್ಪ್ಯೂ ತಗೆದ ನಂತರ ಜನರ ಅದರಲ್ಲೂ ಬೀದಿ ಬದಿಯ ವ್ಯಾಪಾರಸ್ಥರು ಸೇರಿದಂತೆ ಎಲ್ಲರೂ ಸಂತಸ ಗೊಂಡಿದ್ದು ಖುಷಿಯಿಂದ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದರೆ ಇತ್ತ ಸಾರ್ವಜನಿಕರು ಕೂಡಾ ವಿಕೇಂಡ್ ನಡುವೆ ಮಾರುಕಟ್ಟೆಯಲ್ಲಿ ತಿರುಗಾಡುತ್ತಿದ್ದು ಕೆಲವು ಕಡೆಗಳಲ್ಲಿ ಸಾಮಾಜಿಕ ಅಂತರವಿಲ್ಲದೇ ಮಾಸ್ಕ್ ಇಲ್ಲದೇ ತಿರುಗಾಡುತ್ತಿರುವ ಚಿತ್ರಣ ಕಂಡು ಬರುತ್ತಿದ್ದು ವಾಣಿಜ್ಯ ನಗರಿ ಹುಬ್ಬಳ್ಳಿ ಧಾರವಾಡ ದಲ್ಲಿ ಎಂದಿನಂತೆ ಚಿತ್ಱಣ ಕಂಡು ಬರುತ್ತಿದೆ.
