ಧಾರವಾಡ –
60K ರೂಪಾಯಿ ಬಾಡಿಗೆಗೆ 15K ಬಾಂಡ್ ಮಾಡಿಸಿದ ದೊಡ್ಡವರು – ಇಲಾಖೆಯ ನೊಟೀಸ್ ನಿಂದ ತಪ್ಪಿಸಿ ಕೊಳ್ಳಲು ಹೇಗೆ ಪ್ಲಾನ್ ಮಾಡಿದ್ದಾರೆ ನೋಡಿ ಡಿಸಿ ಸಾಹೇಬ್ರೆ…..ಹೇಳೊಂದು ಒಂದು ಮಾಡೊದು ಒಂದು
ಧಾರವಾಡ ಹೊಸ ಬಸ್ ನಿಲ್ದಾಣದಲ್ಲಿ ಏನು ಮಾಡಿದ್ರು ನಡೆಯುತ್ತದೆ ಎನ್ನೊದಕ್ಕೆ ಸುದ್ದಿ ಸಂತೆ ವರದಿಗಳೇ ಸಾಕ್ಷಿ. ಹೌದು ಇಲ್ಲಿ ಕಡಿಮೆ ಹಣಕ್ಕೆ ಟೆಂಡರ್ ತಗೆದುಕೊಂಡು ಲಕ್ಷ ಲಕ್ಷ ಬಾಡಿಗೆಯನ್ನು ವಸೂಲಿ ಮಾಡುತ್ತಿರುವವುದು ನಿಲ್ದಾಣದ ತುಂಬೆಲ್ಲಾ ಕೇಳಿ ಬರುತ್ತಿದೆ.ಅದರಲ್ಲೂ ಇತ್ತೀಚಿಗಷ್ಟೇ ಹೊಸ ಟೆಂಡರ್ ನಲ್ಲಿ ಆರಂಭಗೊಂಡಿ ರುವ ಒಂದಿಷ್ಟು ಭಾಗದಲ್ಲಿನ ಹೊಟೇಲ್,ಬೇಕರಿ ಗಳು ಸೇರಿದಂತೆ ಹಲವು ಮಳಿಗೆಗಳ ಬಾಡಿಗೆ ಕೇಳಿದ್ರೆ ಎದೆ ನಡಗುತ್ತದೆ
ದುಡಿದು ತಿನ್ನುವವರನ್ನು ಸುಲಿದು ಹೇಗೆ ತಿನ್ನುತ್ತಾರೆ ಎಂಬ ವಿಚಾರವನ್ನು ಸುದ್ದಿ ಸಂತೆ ಬೆಳಕಿಗೆ ತಗೆದು ಕೊಂಡು ಬಂದಿದ್ದೆ ತಡ ಇತ್ತ ಡಿಸಿಯವರು ಬಸ್ ನಿಲ್ದಾಣಕ್ಕೆ ಆಗಮಿಸಿ ಪರಿಶೀಲನೆ ಮಾಡಿ ದುಬಾರಿ ಬಾಡಿಗೆ ವಿಚಾರದಲ್ಲಿ ಬಾಡಿಗೆದಾರರಿಂದ ಸಂಪೂರ್ಣ ವಾದ ಮಾಹಿತಿಯನ್ನು ಪಡೆದುಕೊಂಡು ಇತ್ತ ಲಕ್ಷ ಲಕ್ಷ ಬಾಡಿಗೆಯನ್ನು ವಸೂಲಿ ಮಾಡುತ್ತಿರುವವರಿಗೆ ನೊಟೀಸ್ ನೀಡಿ ಲಿಖಿತವಾಗಿ ದಾಖಲೆಗಳನ್ನು ನೀಡುವಂತೆ ಸೂಚನೆಯನ್ನು ನೀಡಿದ್ದಾರೆ
ಈ ಒಂದು ಖಡಕ್ ಸೂಚನೆಯ ಬೆನ್ನಲ್ಲೇ ಇತ್ತ ಟೆಂಡರ್ ತಗೆದುಕೊಂಡವರು ದುಬಾರಿ ಬಾಡಿಗೆಯಿಂದ ತಪ್ಪಿಸಿ ಕೊಳ್ಳಲು ಕಡಿಮೆ ಹಣ ತಗೆದುಕೊಳ್ಳುತ್ತಿದ್ದೇನೆ ಎಂಬೊದನ್ನು ಬಿಂಬಿಸಲು ಬಾಂಡ್ ಮಾಡಿಸಿದ್ದಾರೆ. ಬೇಕರಿಯೊಂದಕ್ಕೆ ಸಧ್ಯ 60 ಸಾವಿರ ಬಾಡಿಗೆ ಇದೆ ಇದಕ್ಕೆ ಮತ್ತೆ ಜಿಎಸ್ ಟಿ ಸೇರಿದಂತೆ 75 ಸಾವಿರ ರೂಪಾಯಿ ತಗೆದುಕೊಳ್ಳುತ್ತಿದ್ದು ಸಧ್ಯ ಹೊಸದಾಗಿ ಈ ಒಂದು ಬೇಕರಿಗೆ ಒತ್ತಾಯ ಪೂರ್ವಕವಾಗಿ ಬಾಡಿಗೆ ಬಾಂಡ್ ಮಾಡಿಸಿದ್ದು ಪ್ರತಿ ತಿಂಗಳು 15 ಸಾವಿರ ರೂಪಾಯಿ ಬಾಡಿಗೆ ಕೊಡಲಾಗುತ್ತಿದೆ ಎಂದು ಕಾಗದ ಪತ್ರ ಮಾಡಿಸಿದ್ದಾರೆ.
ಬೇಕರಿ ಮಾಲಿಕರಿಗೆ ಏನೇನು ಹೇಳಿ ಕರೆಯಿಸಿಕೊಂಡು ದುಬಾರಿ ಬಾಡಿಗೆ ತಗೆದುಕೊಳ್ಳುತ್ತಿದ್ದರು ಕೂಡಾ ಪ್ರತಿ ತಿಂಗಳು 15 ಸಾವಿರ ರೂಪಾಯಿ ಬಾಂಡ್ ಮಾಡಿಸಿ ಇಲಾಖೆಗೆ ಕೊಡಲು ದೊಡ್ಡವರು ಸಿದ್ದತೆಯನ್ನು ಮಾಡಿಕೊಂಡಿದ್ದಾರೆ.ಡಿಸಿ ಯವರೇ ಹೇಗಿದೆ ನೋಡಿ ವ್ಯವಸ್ಥೆ ನಿಮ್ಮ ನೆರಳಿನಲ್ಲಿ ಕಡಿಮೆ ಹಣಕ್ಕೆ ಟೆಂಡರ್ ತಗೆದುಕೊಂಡು ದುಬಾರಿ ಬಾಡಿಗೆ ತಗೆದುಕೊಳ್ಳುತ್ತಿರು ವವರು ನಿಮ್ಮ ನೊಟೀಸ್ ಗೆ ಉತ್ತರ ಕೊಡಲು ಹೇಗೆಲ್ಲಾ ದಾಖಲೆಗಳನ್ನು ಮಾಡಿಸುತ್ತಿದ್ದಾರೆ ನೋಡಿ.
ಇನ್ನೂ ದುಬಾರಿ ಬಾಡಿಗೆಯ ಕಹಾನಿ ಸುದ್ದಿ ಸಂತೆಯಲ್ಲಿ ಮುಂದುವರೆಯಲಿದ್ದು ನಾಳೆ ಮತ್ತೊಂದು ಕಹಾನಿ ದಾಖಲೆ ಸಮೇತ ನಿಮ್ಮ ಮುಂದೆ…..