ಧಾರವಾಡ –
ಇಲಾಖೆಯ ನೊಟೀಸ್ ಬೆನ್ನಲ್ಲೇ ಬಾಡಿಗೆ ಬಾಂಡ್ ಮಾಡಲು ಒದ್ದಾಟ – ಕಡಿಮೆ ಬಾಡಿಗೆ ಬಾಂಡ್ ಗಾಗಿ ಬಾಡಿಗೆದಾರರಿಗೆ ದುಂಬಾಲು ಬಿದ್ದಿರುವ ಆ…..ಹೇಗಿದೆ ನೋಡಿ ಧಾರವಾಡ ಹೊಸ ಬಸ್ ನಿಲ್ದಾಣದ ಲಕ್ಷ ಲಕ್ಷ ದುಬಾರಿ ಬಾಡಿಗೆಯಿಂದ ತಪ್ಪಿಸಿಕೊಳ್ಳಲು ತಂತ್ರ ಡಿಸಿ ಸಾಹೇಬ್ರೆ…..
ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿ ಕಡಿಮೆ ಹಣಕ್ಕೆ ಟೆಂಡರ್ ತಗೆದುಕೊಂಡು ಲಕ್ಷ ಲಕ್ಷ ರೂಪಾಯಿಗೆ ಬಾಡಿಗೆ ನೀಡಿರುವ ವಿಚಾರ ಕುರಿತಂತೆ ಸುದ್ದಿ ಸಂತೆ ವಿಚಾರವನ್ನು ಬೆಳಕಿಗೆ ತಗೆದುಕೊಂಡು ಬಂದ ನಂತರ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿದೆ.ಈ ಒಂದು ವಿಚಾರ ಕುರಿತಂತೆ ಈಗಾಗಲೇ ಡಿಸಿಯವರು ಸ್ವತಃ ತಾವೇ ಖುದ್ದಾಗಿ ಬಾಡಿಗೆದಾರರಿಂದ ಬಾಡಿಗೆ ತಗೆದು ಕೊಳ್ಳುವ ಕುರಿತಂತೆ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ
ನಂತರ ಟೆಂಡರ್ ದಾರರನಿಗೆ ನೊಟೀಸ್ ನೀಡಿದ್ದಾರೆ. ನೀವು ಬಾಡಿಗೆದಾರರಿಂದ ತಗೆದುಕೊಳ್ಳುತ್ತಿರುವ ಬಾಡಿಗೆ ಕುರಿತು ದಾಖಲೆ ನೀಡುವಂತೆ ಖಡಕ್ ಸೂಚನೆ ಯನ್ನು ನೀಡಿದ್ದಾರೆ.ಈ ಒಂದು ಸೂಚನೆಯ ಬೆನ್ನಲ್ಲೇ ಇತ್ತ ಯಾವುದೇ ದಾಖಲೆ ಇಲ್ಲದೇ ಯಾವುದೇ ಬಾಂಡ್ ಇಲ್ಲದೇ ಪ್ರತಿ ತಿಂಗಳು ಲಕ್ಷ ಲಕ್ಷ ರೂಪಾಯಿ ಬಾಡಿಗೆ ಪಡೆಯುತ್ತಿರುವ ದೊಡ್ಡವರಿಗೆ ಇಲಾಖೆಗೆ ನೀಡಲು ದಾಖಲೆ ಸಮಸ್ಯೆಯಾಗಿದೆ.
ಒಂದು ಕಡೆಗೆ ನಿಗದಿತ ಸಮಯದಲ್ಲಿ ಬಾಡಿಗೆ ಬಾಂಡ್ ನೀಡಬೇಕು ಇತ್ತ ಕೈಯಲ್ಲಿ ಯಾವುದು ಇಲ್ಲದ ದಾಖಲೆಯ ನಡುವೆ ಏನು ಕೊಡಬೇಕು ಎಂಬ ದೊಡ್ಡ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿದ್ದು ಬಾಡಿಗೆದಾರರಿಗೆ ಪೊನ್ ಮೇಲೆ ಪೊನ್ ಮಾಡುತ್ತಾ ಆಫೀಸ್ ಗೆ ಕರೆಯಿಸಿ ಕೊಂಡು ಬಾಡಿಗೆ ಇಷ್ಟೇ ಕೊಡ್ತಾ ಇದ್ದೇನಿ ಎಂದು ಹೇಳಿ ಬಾಂಡ್ ಮಾಡಲು ದುಂಬಾಲು ಬಿದ್ದಿದ್ದಾರೆ
ಪ್ರತಿ ತಿಂಗಳು ಕೈಯಲ್ಲಿ ಲಕ್ಷ ಲಕ್ಷ ಬಾಡಿಗೆ ಕೊಡುತ್ತಿರುವ ಬಾಡಿಗೆದಾರರಿಗೆ ಸಧ್ಯ ಹತ್ತು ಇಪ್ಪತ್ತೂ ಸಾವಿರ ರೂಪಾಯಿ ಬಾಡಿಗೆ ಬಾಂಡ್ ಮಾಡಲು ಹಿಂದೇಟು ಹಾಕುತ್ತಿದ್ದು ಡಿಸಿ ಸಾಹೇಬ್ರೆ ಹೇಗಿದೆ ನೋಡಿ ವ್ಯವಸ್ಥೆ ಲಕ್ಷ ಲಕ್ಷ ರೂಪಾಯಿ ಬಾಡಿಗೆ ತಗೆದುಕೊಳ್ಳುತ್ತಿರುವ ದೊಡ್ಡ ವರು ನಿಮ್ಮ ನೊಟೀಸ್ ಬಾಣದಿಂದ ತಪ್ಪಿಸಿಕೊಳ್ಳಲು ಹೇಗೆಲ್ಲಾ ತಂತ್ರಗಾರಿಕೆ ಮಾಡ್ತಾ ಇದ್ದಾರೆ ನೋಡಿ
ಸಧ್ಯ ಬಾಂಡ್ ಮಾಡಲು ಒದ್ದಾಡುತ್ತಿದ್ದು ಏನೇಲ್ಲಾ ಮಾಡ್ತಾ ಇದ್ದಾರೆ ಹೇಗೆಲ್ಲಾ ಬಾಂಡ್ ರೇಡಿ ಆಗುತ್ತವೆ ದಾಖಲೆಯೊಂದಿಗೆ ನಿಮ್ಮ ಮುಂದೆ ನಿರೀಕ್ಷಿಸಿ ಬಾಂಡ್ ಬಡಿದಾಟ ಸ್ಟೋರಿ ಒಟ್ಟಾರೆ ಏನೇ ಆಗಲಿ ಕಡಿಮೆ ಹಣಕ್ಕೆ ಟೆಂಡರ್ ಪಡೆದು ಲಕ್ಷ ಲಕ್ಷ ಬಾಡಿಗೆ ಪಡೆಯುತ್ತಿರುವವರ ಏನೇಲ್ಲಾ ತಂತ್ರಗಾರಿಕೆ ಮಾಡುತ್ತಿದ್ದಾರೆ ಇನ್ನೂ ಏನೇನಿದೆ ಎಂಬೊದನ್ನು ಕಾದು ನೋಡಿ.
ಸುದ್ದಿ ಸಂತೆ ನ್ಯೂಸ್ ಧಾರವಾಡ……