ಮೈಸೂರು –
ಆನ್ ಲೈನ್ ಪಾಠ ಮಾಡುತ್ತಿದ್ದ ಉಪನ್ಯಾಸಕನೊಬ್ಬ ವಾಟ್ಸ್ ಆಪ್ ಗ್ರೂಪ್ ಗೆ ಸಿಲೆಬಸ್ ಕಳುಹಿಸುವ ಜೊತೆಗೆ ಅಶ್ಲೀಲ ಚಿತ್ರವನ್ನೂ ಕಳುಹಿಸಿದ್ದು, ವಿದ್ಯಾರ್ಥಿಗಳು ಮುಜುಗರಕ್ಕೊಳಗಾದ ಘಟನೆ ಮೈಸೂರಿನಲ್ಲಿ ನಡೆದಿದೆ.
ಕೆ.ಆರ್.ಸಾಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ ವಿಭಾಗದಲ್ಲಿ ಅತಿಥಿ ಉಪನ್ಯಾಸಕ ಮೂರ್ತಿ ಎಂಬುವವರೇ ಈ ಪ್ರಮಾದವೆಸಗಿದ್ದು. ಇವರು ಕೆಲ ವರ್ಷಗಳಿಂದ ಈ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ವಿದ್ಯಾರ್ಥಿಗಳಿಗೆ ಆನ್ ಲೈನ್ ಪಠ್ಯ ಕಳುಹಿಸುವ ಜೊತೆಗೆ ಅಶ್ಲೀಲ ಚಿತ್ರವನ್ನೂ ಉಪನ್ಯಾಸಕ ಕಳುಹಿಸಿದ್ದಾನೆ.
ವಾಟ್ಸ್ ಆಪ್ ಗ್ರೂಪ್ ಗೆ ಉಪನ್ಯಾಸಕ ನಿಂದ ಅಶ್ಲೀಲ ಚಿತ್ರ ಬಂದ ಬಗ್ಗೆ ಗ್ರೂಪ್ ನಲ್ಲಿದ್ದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಪ್ರಾಂಶುಪಾಲರ ಗಮನಕ್ಕೆ ತಂದರು.ನಂತರ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಜೊತೆ ಚರ್ಚಿಸಿದ ಪ್ರಾಂಶುಪಾಲೆ ಹಂಸವೇಣಿ ಅವರು ಅತಿಥಿ ಉಪನ್ಯಾಸಕ ಮೂರ್ತಿಯನ್ನು ಸೇವೆಯಿಂದ ಬಿಡುಗಡೆಗೊಳಿಸಿದ್ದಾರೆ.