ಮಧ್ಯಪ್ರದೇಶ –
ಇತ್ತೀಚಿಗೆ ಸೆಲ್ಪಿ ಹುಚ್ಚಾಟ ಹೆಚ್ಚಾಗುತ್ತಿದೆ. ಹಿಂದೆ ಮುಂದೆ ನೋಡದೆ ನಿಂತ ನಿಂತಿಲ್ಲ ಸೆಲ್ಪಿ ತಗೆದುಕೊಳ್ಳುತ್ತಾರೆ. ಹೀಗೆ ಬಾವಿಯ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಯುವತಿವೋರ್ವಳು ಆಯತಪ್ಪಿ ಸುಮಾರು 50 ಅಡಿ ಆಳದ ಬಾವಿಗೆ ಬಿದ್ದ ಘಟನೆ ಮಧ್ಯಪ್ರದೇಶದ ರತ್ಲಂ ಜಿಲ್ಲೆಯ ಸುಖೇಡಾ ಗ್ರಾಮದಲ್ಲಿ ನಡೆದಿದೆ. ಬಾವಿಯೊಳಗಿಂದ ಯುವತಿಯ ಕಿರುಚಾಟ ಕೇಳಿ ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಯುವಕನೊಬ್ಬ ಆಕೆಯನ್ನು ಉಳಿಸಲು ಬಾವಿಗೆ ಹಾರಿ ಆತನೂ ಇಕಕಟ್ಟಿಗೆ ಸಿಲುಕಿದ್ದ.
ಸುಜಾಪುರ ದೇವಸ್ಥಾನ ನೋಡಲೆಂದು ಬಂದಿದ್ದ ಯುವತಿ ಪೂಜೆ ಮುಗಿಸಿ, ಪಕ್ಕದಲ್ಲಿಯೇ ಇದ್ದ ಬಾವಿಯ ಬಳಿ ಸೆಲ್ಫಿ ತೆಗೆದುಕೊಳ್ಳಲು ಹೋದಾಗ ಕಾಲುಜಾರಿ ಬಾವಿಗೆ ಬಿದ್ದಿದ್ದಾಳೆ.
ಯುವತಿಯನ್ನ ರಕ್ಷಿಸಲು ಬಾವಿಗೆ ಹಾರಿದ ಯುವಕ ಮೇಲೆಳಲಾಗದೇ ಒದ್ದಾಡಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಮಿಸಿದ ಪೊಲೀಸರು ಸ್ಥಳೀಯರ ನೆರವಿನಿಂದ ಹಗ್ಗದ ಮೂಲಕ ಹರಸಾಹನ ಪಟ್ಟು ಇಬ್ಬರನ್ನೂ ಸುರಕ್ಷಿತವಾಗಿ ಬಾವಿಯಿಂದ ಮೇಲೆತ್ತಿದ್ದಾರೆ.ಒಟ್ಟಾರೆ ಏನೇ ಆಗಲಿ ಸೆಲ್ಪಿ ತಗೆದುಕೊಳ್ಳುವಾಗ ಸ್ವಲ್ಪ ಮಟ್ಟಿಗೆ ಗಮನವಿರಲಿ