ಬಿಹಾರ –
ಮನಸ್ಸು ಮಾಡಿದರೆ ಏನೇಲ್ಲಾ ಮಾಡನಹುದು ಸಾಧಿಸ ಬಹುದು ಎಂಬೊದಕ್ಕೆ ಈ ಬಾಲಕಿಯೇ ಸಾಕ್ಷಿ. ಕೈ ಕಾಲು ಚೆನ್ನಾಗಿದ್ರೂ ಅಸಡ್ಡೆಯಿಂದ ಏನನ್ನೂ ಸಾಧನೆ ಮಾಡದ ವರು ಬಹಳಷ್ಟಿದ್ದಾರೆ.ಆದರೆ ವಿಶೇಷ ಚೇತನರು ತಮ್ಮ ನ್ಯೂನತೆಯನ್ನು ಸವಾಲಾಗಿ ತೆಗೆದುಕೊಂಡು ಸಾಧಿಸಿ ತೋರಿಸ್ತಾರೆ.ಬಿಹಾರದ ಜಮ್ಮಯ್ಯಾ ಕೈರಾ ಬ್ಲಾಕ್‌ನ ಫತೇಫುರ್ ಗ್ರಾಮದ ಮಹಾದಲಿತ ಕುಟುಂಬದ 10 ವರ್ಷದ ಹುಡುಗಿ ಸೀಮಾಗೆ ಓದುವ ಮತ್ತು ಬರೆಯುವ ಉತ್ಸಾಹ.ಚೆನ್ನಾಗಿ ಓದಿ ಶಿಕ್ಷಕಿಯಾಗಬೇಕೆಂಬ ಆಸೆಯಿದೆ.
ಅಂಗವೈಕಲ್ಯ ಇದ್ದರೂ ಕೂಡಾ ಒಂದು ಕಾಲಿನಲ್ಲಿ ಪ್ರತಿ ದಿನ ನಡೆದುಕೊಂಡು ಹೋಗತಾ ಇದ್ದಾರೆ.ಹೌದು ನೋಡಿ ಸಧ್ಯ ಅಂಗವೈಕಲ್ಯವಿದ್ದರೂ ಒಂದೇ ಕಾಲಿನಲ್ಲಿ 1 ಕಿಮೀ ನಡೆದು ಶಾಲೆಗೆ ಹೋಗಿ ಕಲಿಯುತ್ತಿದ್ದಾಳೆ.2 ವರ್ಷದ ಹಿಂದೆ ಅಪ ಘಾತದ ನಂತರ ಈಕೆಯ ಜೀವ ಉಳಿಸಲು ಒಂದು ಕಾಲನ್ನು ಕತ್ತರಿಸಲಾಯಿತು.ಯಾರಿಗೂ ಹೊರೆಯಾಗಬಾರ ದೆಂದು ಈಕೆ ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳುತ್ತಾಳೆ.