ಧಾರವಾಡ –

ಬಿಜೆಪಿ ಮಾಜಿ ಮಹಾನಗರ ಪಾಲಿಕೆಯ ಸದಸ್ಯರು ಬಿಜೆಪಿಯ ಹಿರಿಯ ಮುಖಂಡರು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ದೇಶಕರಾದ ಪ್ರಕಾಶ್ ಗೋಡಬೋಲೆ ನಿಧನರಾಗಿದ್ದಾರೆ. ನಿಧನ ದಿಂದಾಗಿ ಬಿಜೆಪಿ ಕಾರ್ಯಕರ್ತರಿಗೆ ತುಂಬಲಾರದ ನಷ್ಟ ಇವರ ಅಗಲಿಕೆಯ ನೋವನ್ನು ಭರಿಸೊ ಶಕ್ತಿ ಭಗವಂತ ಅವರ ಕುಟುಂಬಕ್ಕೆ ನೀಡಲಿ ಅಂತ ಕೇಂದ್ರ ಕಲ್ಲಿದ್ದಲು ಹಾಗು ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಪ್ರಲ್ಹಾದ ಜೋಶಿ ಶಾಸಕ ರಾದ ಅಮೃತ ದೇಸಾಯಿ,ಅರವಿಂದ್ ಬೆಲ್ಲದ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಅಧ್ಯಕ್ಷರು ಈರೇಶ ಅಂಚಟಗೇರಿ ಸೇರಿದಂತೆ ಹಲವರು ಸಂತಾ ಪ ಸೂಚಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.