ಪುದುಚೇರಿ –
ಬಿಜೆಪಿ ಹಿರಿಯ ಶಾಸಕ ಕೆ.ಜಿ.ಶಂಕರ್ ಇಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.ಪುದುಚೇರಿಯ ಬಿಜೆಪಿ ಘಟಕದ ಖಜಾಂಚಿಯಾಗಿಯೂ ಅವರು ಸೇವೆ ಸಲ್ಲಿಸುತ್ತಿದ್ದರು. ರಾಜ್ಯ ಸರ್ಕಾರದಿಂದ ಈಬಾರಿ ವಿಧಾನಸಭೆಗೆ ನಾಮನಿರ್ದೇಶನಗೊಂಡಿದ್ದರು.

1950ರಲ್ಲಿ ಜನಿಸಿದ ಶಂಕರ್ ಚಿಕ್ಕಂದಿನಲ್ಲೇ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದರು. ಶಾಸಕ ಶಂಕರ್ ನಿಧನಕ್ಕೆ ಮುಖ್ಯಮಂತ್ರಿ ಸೇರಿದಂತೆ ಗಣ್ಯರು ಕಂಬನಿ ಮಿಡಿದಿದ್ದು ಹಿರಿಯ ಶಾಸಕರ ನಿಧನದಿಂದ ಪುದುಚೇರಿ ಬಿಜೆಪಿ ಘಟಕದಲ್ಲಿ ತುಂಬಲಾರದ ನಷ್ಟವಾಗಿದೆ.