ಧಾರವಾಡ –
ಹವಾಮಾನ ಬದಲಾವಣೆ, ಹವಾಮಾನ ವೈಪರೀತ್ಯ ಗಳಿಂದ ಜೀವಸಂಕುಲಕ್ಕೆ ತುಂಬಾ ತೊಂದರೆ ಆಗಲಿದೆ, ಬೆಂಗಳೂರಿನ ಹಿರಿಯ ವಿಜ್ಞಾನಿ ಪ್ರೊ ಕಮಲ ಲೋದಯಾ ಕಳವಳ
ಭೂಮಿಯ ತಾಪಮಾನ ಹಗಲು ಮತ್ತು ರಾತ್ರಿ ವ್ಯತ್ಯಾಸಕ್ಕೆ ಕಾರಣಗಳೇನು, ಮುಂಗಾರು ಮಾರುತಗಳ ಏರುಪೇರಿಗೆ ಪ್ರಮುಖ ಕಾರಣವೇನು? ಗಾಳಿಯ ಒತ್ತಡಗಳಿಂದ ಮುಂಗಾರು ಮಳೆ ಹೇಗೆ ಆಗುತ್ತದೆ, ಮಳೆಗಾಲದ ಬದಲಾವಣೆಗೆ ಪ್ರಮುಖ ಕಾರಣಗಳನ್ನು ಮಕ್ಕಳ ಜೊತೆಗೆ ಸಂವಾದ ನಡೆಸುವುದರ ಮೂಲಕ ವಿಜ್ಞಾನಿ ಕಮಲ ಲೋದಯ ಮಕ್ಕಳ ಜೊತೆಗೆ ಸುದೀರ್ಘ ಚರ್ಚೆ ನಡೆಸಿ, ಪರಿಸರದಲ್ಲಿ ಆಗುವ ವ್ಯತ್ಯಾಸ ಮತ್ತು ಸೂರ್ಯನ ತಾಪಮಾನದ ಕುರಿತು ವಿವರಿಸಿದರು.
ಧಾರವಾಡದ ಹಿರೇಮಲ್ಲೂರ ಈಶ್ವರನ್ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸಿ ಮಕ್ಕಳ ಪ್ರಶ್ಮೆಗಳಿಗೆ ಉತ್ತರಿಸಿ ದರು, ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾ ಡಿದ ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರಾದ ಡಾ, ವೀರಣ್ಣ ಭೋಳಿಶೆಟ್ಟಿ ಜ್ಞಾನ ಇಂದಲ್ಲ ನಾಳೆ ಉಪಯೋಗ ಆಗಲಿದೆ, ವಿಜ್ಞಾನದ ಕುರಿತು ವಿದ್ಯಾರ್ಥಿಗಳು ಅರಿಯಬೇಕು, ಸದ್ಯದಲ್ಲೇ ಧಾರವಾಡದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ತ್ರೀಡಿ ತಾರಾಲಯ ನಿರ್ಮಾಣ ಆಗುತ್ತದೆ,
ಸದ್ಯದಲ್ಲೇ ಸಾರ್ವಜನಿಕರಿಗೆ, ಹಾಗೂ ವಿದ್ಯಾರ್ಥಿಗಳಿಗೆ ನೋಡಲು ಅದು ಲೋಕಾರ್ಪಣೆ ಆಗಲಿದೆ ಎಂದರು ಅದ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಶಶಿಧರ ತೋಡಕರ ಮಾತನಾಡಿ ನಾವು ಚಿಕ್ಕವರಿದ್ದಾಗ ಹಳ್ಳ,ಕೊಳ್ಳದ ನೀರನ್ನು ಬೊಗಸೆಯಲ್ಲಿ ಕುಡಿಯುತ್ತಿ ದ್ದೇವು ಆದರೆ ಈಗ ಅದು ಸಾದ್ಯವಿಲ್ಲ ಕಾರಣ ಭೂಮಿ ಮತ್ತು ನೀರನ್ನು ಕಲುಷಿತ ಮಾಡಿ ಅದರ ಪಾವಿತ್ರ್ಯ ತೆಯನ್ನು ಹಾಳು ಮಾಡಿದ್ದೇವೆ,ನಮ್ಮ ಮನಸ್ಸು ಕೂಡ ಕಲುಷಿತವಾಗಿದೆ, ವಿದ್ಯಾರ್ಥಿಗಳು ಪ್ರೀತಿ ವಾತ್ಸಲ್ಯ ಶುಧ್ಧ ಮನಸ್ಸಿನಿಂದ ಓದಿ ಮುಂದೆ ಬರಬೇಕು ಎಂದು ಕರೆ ನೀಡಿದರು
ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಧಾರವಾಡ ನಗರ ಬಿಇಒ ಅಶೋಕಕುಮಾರ ಸಿಂದಗಿ, ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಅದ್ಯಕ್ಷರಾದ ಗುರು ತಿಗಡಿ, ಗಣಿತ ತಜ್ಞರಾದ ಕೆ ಜಿ ದೇವರಮನಿ, ಪರಿಸರತಜ್ಞ ವೀರಪ್ಪ ಅರಕೇರಿ ಎಲ್ ಐ ಲಕ್ಕಮ್ಮನವರ ಮುಂತಾದವರು ವೇದಿಕೆಯ ಮೇಲಿದ್ದರು,ಎನ್ ಎಸ್ ಕೋಟಿ ಸ್ವಾಗತಿಸಿದರು, ಡಾ, ಈರಣ್ಣ ಇಂಜನಗೇರಿ ನಿರೂಪಿಸಿದರು ಗೌರಿ ಶೆಟ್ಟಿ ವಂದಿಸಿದರು
ಸುದ್ದಿ ಸಂತೆ ನ್ಯೂಸ್ ಧಾರವಾಡ…..