ಸವದತ್ತಿ –
ಸವದತ್ತಿ ತಾಲೂಕಿನ ಸರಕಾರಿ ಹಿರಿಯ ಮಾದರಿ ಪ್ರಾಥ ಮಿಕ ಕನ್ನಡ ಶಾಲೆ ಯರಜರ್ವಿಯ ಹೊಸಕೊಠಡಿಗಳನ್ನು ಕರ್ನಾಟಕ ಸರ್ಕಾರದ ವಿದಾನ ಸಭೆಯ ಉಪಸಭಾಪತಿ ಗಳು ಹಾಗೂ ಶಾಸಕರು ಸವದತ್ತಿ ಇವರು ನಿನ್ನೆಯ ದಿನ ಉದ್ಘಾಟಿಸಿದರು.ಇದೇ ಸಂದರ್ಭದಲ್ಲಿ ಧಾರವಾಡದ ಪ್ರತಿಷ್ಠಿತ ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯು ನೀಡಿದ ಶಿಕ್ಷಕರತ್ನ ರಾಜ್ಯ ಪ್ರಶಸ್ತಿಯನ್ನು ಪಡೆದ ಈ ಶಾಲೆಯ ಹಿರಿಯ ಶಿಕ್ಷಕರಾದ ಮಲ್ಲಿಕಾರ್ಜುನ ಚರಂತಿ ಮಠ ಅವರಿಗೆ ಆನಂದ ಮಾಮನಿ ಶಾಲು ಹೊದಿಸಿ ಸತ್ಕರಿಸಿ ಗೌರವಿಸಿದರು

ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಭೀಮವ್ವ ದಾಸಪ್ಪನವರ ಇವರ ಅಧ್ಯಕ್ಷತೆ ಯಲ್ಲಿ ಜರುಗಿದ ಈ ಸಭೆಯಲ್ಲಿ ವಿಧಾನ ಸಭೆಯ ಉಪಸಭಾಪತಿಗಳು ಆನಂದ ಮಾಮನಿ ಮಾತನಾಡಿ ನಮ್ಮ ತಾಲ್ಲೂಕಿನಲ್ಲಿ ನಾನು ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವೆ ಶೈಕ್ಷಣಿಕವಾಗಿ ನಮ್ಮ ತಾಲೂಕು ಮುಂದುವರೆದಿದೆ.ಇನ್ನೂ ಸಹ ಶಿಕ್ಷಣ ರಂಗದಲ್ಲಿ ಪ್ರಗತಿಯನ್ನು ಸಾಧಿಸಲು ಎಲ್ಲರೂ ಕೈಜೋಡಿಸ ಬೇಕು ಕರೋನ ಮಹಾಮಾರಿಯಿಂದಾಗಿ ನಮ್ಮ ಮಕ್ಕಳು ಶಿಕ್ಷಣದಿಂದ ತುಂಬಾ ಸಮಸ್ಯೆಯಾಗಿದೆ ಎಂದರು

ಈಗ ಕರೋನ ಕಡಿಮೆಯಾಗಿ ಮಕ್ಕಳು ಕಲಿಕೆಯಲ್ಲಿ ಕ್ರಮೇಣ ಮೊದಲಿನಂತೆ ಒಂದು ಲಯಕ್ಕೆ ಬಂದಿದ್ದಾರೆ, ಇದರಲ್ಲಿ ಅಧಿಕಾರಿಗಳು ಸಿಆರ್ ಪಿ ಬಿ ಆರ್ ಪಿ ಗಳು, ಹಾಗೂ ಎಲ್ಲಾ ಮುಖ್ಯ ಶಿಕ್ಷಕರು, ಸಹಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಲ್ಲರೂ ನಿಷ್ಠೆಯಿಂದ ಕೆಲಸ ಮಾಡುತ್ತಿ ದ್ದಾರೆ ಎಂದರು, ನಾನು ನನ್ನ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಗಮನಹರಿಸಿರುವೆ, ಮುಂದಿನ ದಿನಗಳಲ್ಲಿ ಇನ್ನೂ ಆಗಬೇ ಕಾದ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದರು


ಗ್ರಾಮದ ಪಂಚಾಯತಿ ಅದ್ಯಕ್ಷರಾದ ಶ್ರೀಮತಿ ಈರವ್ವ ಸುರೇಶ ಹರಿಜನ,ಯಲ್ಲಮ್ಮ ದೇವಸ್ಥಾನದ ಅಧ್ಯಕ್ಷರಾದ ಬಸಯ್ಯ ಹಿರೇಮಠ,ಕ್ಷೇತ್ರ ಶಿಕ್ಷಣಾಧಿಕಾರಿ ಎ ಎನ್ ಕಂಬೋಗಿ, ಮುಖ್ಯ ಶಿಕ್ಷಕ ಆರ್ ಜಿ ಶ್ರೀಪಣ್ಣವರ,ಸಿ ಆರ್ ಪಿ ಎ ಕೆ ಮುಳ್ಳೂರ, KSPSTA ಸವದತ್ತಿ ತಾಲೂಕಿನ ಅಧ್ಯಕ್ಷರಾದ ಎಚ್ ಆರ್ ಪೆಟ್ಲೂರ, ಹಿರಿಯರಾದ ಈರಣ್ಣ ಚಳಕೊಪ್ಪ ಡಾ, ಶಂಕರಲಿಂಗಪ್ಪ, ಎಸ್ ಡಿ ದಾಸಪ್ಪನವರ ಸಿದ್ದಣ್ಣ ಮಾಳಗಿ ಡಾ, ಬಗನಾಳ ಮುಂತಾದವರು ಇದ್ದರು,