ಶೀಘ್ರದಲ್ಲೇ ಜಾರಿಯಾಗಲಿದೆ ಹಳೆ ಪಿಂಚಣಿ ಯೋಜನೆ ಭರವಸೆ ನೀಡಿದ ಷಡಾಕ್ಷರಿಯವರು – OPS ನಿರೀಕ್ಷೆಯಲ್ಲಿದ್ದ ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದ ರಾಜ್ಯಾಧ್ಯಕ್ಷರು…..

Suddi Sante Desk
ಶೀಘ್ರದಲ್ಲೇ ಜಾರಿಯಾಗಲಿದೆ ಹಳೆ ಪಿಂಚಣಿ ಯೋಜನೆ ಭರವಸೆ ನೀಡಿದ ಷಡಾಕ್ಷರಿಯವರು – OPS ನಿರೀಕ್ಷೆಯಲ್ಲಿದ್ದ ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದ ರಾಜ್ಯಾಧ್ಯಕ್ಷರು…..

ತುಮಕೂರು

ಶೀಘ್ರದಲ್ಲೇ ರಾಜ್ಯದಲ್ಲಿ ಹಳೆ ಪಿಂಚಣಿ ಯೋಜನೆ ಜಾರಿಯಾಗಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಹೇಳಿದರು.ತುಮಕೂರಿನಲ್ಲಿ ಮಾತನಾಡಿದ ಅವರು ಹಳೆಯ ಪಿಂಚಣಿ ವ್ಯವಸ್ಥೆ (ಒಪಿಎಸ್‌) ಶೀಘ್ರದಲ್ಲೇ ಜಾರಿಯಾಗಲಿದೆ ಎಂದರು

ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ ನೌಕರರಿಗೆ 7ನೇ ವೇತನ ಆಯೋಗದ ವರದಿ ಅನ್ವಯ ಸಂಬಳ ದೊರೆಯುತ್ತಿದೆ.ಇದಕ್ಕಾಗಿ ಸರ್ಕಾರ ₹21,500 ಕೋಟಿ ನೀಡಿದೆ. ನಮ್ಮ ಹೋರಾಟದಲ್ಲಿ ಜಿಲ್ಲೆಯ ನೌಕರರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸಂಘ ಆರ್ಥಿಕವಾಗಿ ಸದೃಢವಾಗಿದೆ ಎಂದರು

ಮಕ್ಕಳು ಸಾಧನೆ ಮಾಡಿದಾಗ ಅವರನ್ನು ಗೌರವಿಸುವುದು ನಮ್ಮ ಕರ್ತವ್ಯ ಇದುವರೆಗೂ 40 ಸಾವಿರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಗಿದೆ.ಶಿಕ್ಷಣದಿಂದ ಸ್ವಾಭಿಮಾನದ ಬದುಕು ಸಾಧ್ಯ.ಉನ್ನತ ಸ್ಥಾನಕ್ಕೆ ಹೋದಾಗ ಯಾರೂ ಸಂಬಂಧಗಳನ್ನು ಮರೆಯಬಾರದು ಎಂದರು

ಹಿರಿಯರ ಮೇಲಿನ ಗೌರವ ಕಡಿಮೆಯಾಗ ಬಾರದು ನಿಮ್ಮ ಸಾಧನೆಯ ಹಿಂದೆ ಅವರ ಶ್ರಮವಿದೆ ಎಂಬುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು ಶಾಸಕ ಜಿ.ಬಿ.ಜ್ಯೋತಿಿ ಗಣೇಶ್ ಮಾತನಾಡಿ  ಮಕ್ಕಳ ಪ್ರತಿಭೆ ವಿಕಾಸಗೊಳಿಸುವ ಕಾರ್ಯಕ್ರಮ ಕಾರ್ಯಾಗಾರ ಏರ್ಪಡಿಸಬೇಕು.

ಸಂಪನ್ಮೂಲ ವ್ಯಕ್ತಿಗಳಿಂದ ಹಲವು ವಿಚಾರಗಳ ಕುರಿತು ತಿಳಿಸಬೇಕು. ಮಕ್ಕಳ ಶೈಕ್ಷಣಿಕ, ಸಾಮಾಜಿಕ ಬೆಳವಣಿಗೆಗೆ ಸಹಕಾರಿಯಾಗಬೇಕು’ ಎಂದರು.ನೌಕರರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಬಸವರಾಜು,ಮಕ್ಕಳು ಮಾನವೀಯ ಮೌಲ್ಯ ರೂಢಿಸಿಕೊಳ್ಳಬೇಕು. ಸಮಾಜದಲ್ಲಿ ವಿದ್ಯಾವಂತರಿಂದಲೇ ಹೆಚ್ಚಿನ ಅವಘಡಗಳು ನಡೆಯುತ್ತಿವೆ.

ಪ್ರತಿಭೆಯನ್ನು ಜಾತಿಯ ಮೂಲಕ ಅಳೆಯ ಲಾಗುತ್ತದೆ. ಇದು ಬದಲಾಗಬೇಕು’ ಎಂದು ಹೇಳಿದರು.ಹೆಚ್ಚುವರಿ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ, ಜಿಲ್ಲಾಧಿಕಾರಿ ಕಚೇರಿ ಸಹಾಯಕ ಜಿ.ವಿ. ಮೋಹನ್‌ಕುಮಾರ, ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ನರಸಿಂಹರಾಜು, ಪದಾಧಿಕಾರಿಗಳಾದ ಶ್ರೀನಿವಾಸ್ ತಿಮ್ಮೇಗೌಡ, ಸಿದ್ದರಾಮಯ್ಯ, ರುದ್ರಪ್ಪ, ಪಾಂಡುರಂಗ, ಆರ್.ಪರಶಿವಮೂರ್ತಿ, ಎಚ್‌.ವಿ.ರಮೇಶ್‌, ಬಿ.ಆರ್.ವೆಂಕಟೇಶ್, ಕರುಣಾಕರಶೆಟ್ಟಿ, ಎಚ್.ಎಂ.ರುದ್ರೇಶ್, ಟಿ.ಎನ್.ಜಗದೀಶ್, ಮಂಜುಳಾ, ಎಚ್.ಕೆ.ನರಸಿಂಹಮೂರ್ತಿ, ಆರ್‌.ಪರಶಿವಮೂರ್ತಿ, ರೇಣುಕಾರಾಧ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ತುಮಕೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.