ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ನೀಡುವ ವಿಚಾರ ಕುರಿತಂತೆ ನಿನ್ನೆ ಯಷ್ಟೇ ಮುಖ್ಯಮಂತ್ರಿ ಅವರು ಷಡಾಕ್ಷರಿ ಅವರು ಎರಡು ದಿನಗಳಲ್ಲಿ ಈ ಕುರಿತಂತೆ ಆದೇಶ ಮಾಡೊದಾಗಿ ಹೇಳಿದ ಬೆನ್ನಲ್ಲೇ ಈ ಒಂದು ಕುರಿ ತಂತೆ ಚಟುವಟಿಕೆಗಳು ಚುರುಕುಗೊಂಡಿದ್ದು ಇನ್ನೂ ಮುಖ್ಯಮಂತ್ರಿ ಯೊಂದಿಗೆ ಷಡಾಕ್ಷರಿ ಅವರು ಪೈನಲ್ ಸಭೆ ಮಾಡಿದರು.
ಇಂದಿನಿಂದ ಮೂರು ದಿನಗಳ ಕಾಲ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳುವ ಹಿನ್ನಲೆಯಲ್ಲಿ ನಿನ್ನೆ ತಡರಾತ್ರಿ ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಭೆ ಮಾಡಿದ ಬೆನ್ನಲ್ಲೇ ಬೆಳ್ಳಂ ಬೆಳಿಗ್ಗೆ ಷಡಾಕ್ಷರಿ ಅವರು ಮುಖ್ಯಮಂತ್ರಿ ಅವರ ಬಳಿ ತೆರಳಿ ಈ ಕುರಿತಂತೆ ಸಮಿತಿ ರಚನೆಗೆ ಪೈನಲ್ ಟಚ್ ನೀಡಿ ದರು.ಸಮಿತಿಯ ಜವಾಬ್ದಾರಿ ಯಾರ ಹೆಗಲಿಗೆ ಯಾರು ಯಾರನ್ನು ಸಮಿತಿಯಲ್ಲಿ ನೇಮಕ ಮಾಡಬೇಕು ವರದಿಯನ್ನು ಸಮಿತಿ ಎಷ್ಟು ದಿನಗಳಲ್ಲಿ ನೀಡಬೇಕು ಹೀಗೆ ಹಲವಾರು ವಿಚಾರಗಳ ಕುರಿತಂತೆ ಈ ಒಂದು ಸಭೆಯಲ್ಲಿ ಚರ್ಚೆಯನ್ನು ಮಾಡಿ ಇಂದು ಸಂಜೆಯೊಳಗಾಗಿ ಆದೇಶವನ್ನು ಕೂಡಾ ಮಾಡುವಂತೆ ಮುಖ್ಯ ಮಂತ್ರಿ ಅವರಿಗೆ ಷಡಾಕ್ಷರಿ ಅವರು ಒತ್ತಾಯ ವನ್ನು ಮಾಡಿ ಬೇಡಿಕೆಯನ್ನು ಇಟ್ಟಿದ್ದಾರೆ.
ಹೀಗಾಗಿ ಸಧ್ಯ ಪೈನಲ್ ಟಚ್ ನೀಡಲು ಷಡಾಕ್ಷರಿ ಅವರು ಈ ಒಂದು ಸಮಿತಿಗೆ ಮುಖ್ಯಮಂತ್ರಿ ನೇತ್ರತ್ವದಲ್ಲಿ ನೀಡಿದ್ದು ಯಾರು ಯಾರನ್ನು ನೇಮಕ ಮಾಡುತ್ತಾರೆ ಇರುತ್ತಾರೆ ಎಂಬೊದನ್ನು ಸಂಜೆಯೊಳಗಾಗಿ ಆಗುವ ಆದೇಶದಲ್ಲಿ ಉತ್ತರ ಸಿಗಲಿದೆ.
ಮಂಜುನಾಥ ಸರ್ವಿ ಜೊತೆಯಲ್ಲಿ ಚಕ್ರವರ್ತಿ ಸುದ್ದಿ ಸಂತೆ ನ್ಯೂಸ್ ಬೆಂಗಳೂರು