ಮಂಡ್ಯ –
ಸರ್ಕಾರಿ ನೌಕರರು ಹಾಗೂ ಶಿಕ್ಷಕರಿಗೆ 25000 ರೂಪಾಯಿ ಗಳು ಹಬ್ಬದ ಮುಂಗಡ ಮಂಜೂರು ಮಾಡಿಸಿದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷಾರಿ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.ಹೌದು ಕರ್ನಾಟಕ ರಾಜ್ಯ ಷಡಕ್ಷರಿ ಅವರ ಅಭಿಮಾನಿಗಳ ಬಳಗದ ರಾಜ್ಯ ಸಂಚಾಲಕರಾದ ಬೂದನೂರು ಮಹೇಶ ಮಂಡ್ಯ ಹಾಗೂ ಬಳಗದ ಸದಸ್ಯರು ಅಭಿನಂದನೆ ತಿಳಿಸಿದ್ದಾರೆ

ಹೌದು ವಿಷಯವಾಗಿ 2021-21 ನೇ ಸಾಲಿನಲ್ಲಿ ಹಬ್ಬದ ಮುಂಗಡ 25000 ಸಾವಿರ ರೂಪಾಯಿಗಳು ಮಂಡ್ಯ ದಕ್ಷಿಣ ವಲಯದ ಶಿಕ್ಷಕರಿಗೆ ಮಂಜೂರು ಆಗಿರುತ್ತದೆ. ಬೂದನೂರು ಮಹೇಶ ಶಿಕ್ಷಕರು ಮಂಡ್ಯಹಾಗೂ ಷಡಕ್ಷರಿ ಅಭಿಮಾನಿಗಳ ಬಳಗದ ರಾಜ್ಯ ಸಂಚಾಲಕರಾದ ನನಗೂ ಹಾಗೂ ಮಂಡ್ಯ ದಕ್ಷಿಣ ವಲಯದ ಶಿಕ್ಷಕ ಬಂಧುಗಳಿಗೂ
ದಿನಾಂಕ-19-02-2022 ರಂದು 25000 ಸಾವಿರ ರೂಪಾಯಿಗಳು ಹಬ್ಬದ ಮುಂಗಡ ಮಂಜೂರು ಆಗಿರುತ್ತದೆ.



ಆದ್ದರಿ೦ದ ಹಬ್ಬದ ಮುಂಗಡ ಹಿಂದಿನ ವರ್ಷಗಳಲ್ಲಿ 10000 ರೂಪಾಯಿ ಮಾತ್ರ ಮಂಜೂರು ಆಗುತ್ತಾ ಇತ್ತು ಅದಕ್ಕಿಂತಲೂ ಹಿಂದೆ 5000 ರೂಪಾಯಿ ಮಾತ್ರ ಮಂಜೂರು ಆಗುತ್ತಾ ಇತ್ತು.2021-22 ನೇ ಸಾಲಿನಲ್ಲಿ ಮಾನ್ಯ ಷಡಕ್ಷರಿ ರವರು ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ರಿ) ಬೆಂಗಳೂರು ರವರ ಹಾಗೂ ಕೇಂದ್ರ ಸಂಘದ ಎಲ್ಲಾರ ಪರಿಶ್ರಮದಿಂದ ರಾಜ್ಯ ಸರ್ಕಾರ ಕ್ಕೆ ಮನವಿ ಸಲ್ಲಿಸಿ 25000 ರೂಪಾಯಿಗಳು ಮಂಜೂರು ಆಗಲು ಶ್ರಮ ವಹಿಸಿರುತ್ತಾರೆ



ಆದ್ದರಿಂದ ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಘನ ಸರ್ಕಾರಕ್ಕೂ ಹಾಗೂ ಷಡಕ್ಷರಿ ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (ರಿ) ಬೆಂಗಳೂರು ರವರಿಗೂ ಹಾಗೂ ಕೇಂದ್ರ ಸಂಘದ ಎಲ್ಲಾ ಪದಾಧಿಕಾರಿ ಗಳಿಗೂ ಹಾಗೂ ಸಕಾಲಕ್ಕೆ ಹಬ್ಬದ ಮುಂಗಡ ಮಂಜೂರು ಆಗಲು ಶ್ರಮ ವಹಿಸಿದ ಮಂಡ್ಯ ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಚಂದ್ರಕಾಂತ ರವರಿಗೂ ಹಾಗೂ ಕಛೇರಿಯ ಎಲ್ಲಾ ಸಿಬ್ಬಂದಿ ವರ್ಗ ದವರಿಗೂ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಕರ್ನಾಟಕ ರಾಜ್ಯ ಷಡಕ್ಷರಿ ಅಭಿಮಾನಿಗಳ ಬಳಗದ ರಾಜ್ಯ ಸಂಚಾಲಕರಾದ ಬೂದನೂರು ಮಹೇಶ ಮಂಡ್ಯ ಹಾಗೂ ಬಳಗದ ಸದಸ್ಯರು ಹೇಳಿದ್ದಾರೆ.