ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಧಾರವಾಡ ತಾಲೂಕು ಅದ್ಯಕ್ಷರಾಗಿ ಭೀಮಪ್ಪ ಕಾಸಾಯಿ ಆಯ್ಕೆ, ಶುಭಕೋರಿದರು ಶಂಕರ ಹಲಗತ್ತಿ ಲಕ್ಕಮ್ಮನವರ ತಿಗಡಿ…..

Suddi Sante Desk

ಧಾರವಾಡ –

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಧಾರವಾಡ ತಾಲೂಕಿನ ಅದ್ಯಕ್ಷರಾಗಿ ಧಾರವಾಡ ತಾಲೂಕಿನ ತಡಕೋಡ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರು ಧಾರವಾಡದ ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಗೌರವಾದ್ಯಕ್ಷರಾದ ಭೀಮಪ್ಪ ಕಾಸಾಯಿ ಇವರನ್ನು ನೇಮಕ ಮಾಡಲಾಗಿದೆ

ಹೌದು ಧಾರವಾಡದಲ್ಲಿ ಜರುಗಿದ ಸಭೆಯಲ್ಲಿ ಧಾರವಾಡ ಜಿಲ್ಲಾ ಅದ್ಯಕ್ಷರು ವಾಘೀಶ ಹಿರೇಮಠ ಹೆಸರನ್ನು ಘೋಷಿಸಿದರು ಮುಖ್ಯ ಅತಿಥಿಯಾಗಿ ಸಾಹಿತಿ ಶಂಕರ ಹಲಗತ್ತಿ ಆಗಮಿಸಿ,ಭೀಮಪ್ಪ ಕಾಸಾಯಿ ಸತತ ಐದು ಅವದಿ ಗ್ರಾಮ ಪಂಚಾಯತಿ ಸದಸ್ಯರಾಗಿ ಬಹಳಷ್ಟು ಅಭಿವೃದ್ಧಿಯ ಜೊತೆಗೆ ರೈತಪರ ಹೋರಾಟಗಳನ್ನು ಮಾಡುತ್ತಾ ಬಂದಿದ್ದಾರೆ, ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರ ಜೊತೆ ನಿಕಟ ಸಂಪರ್ಕದಲ್ಲಿ ಇರುವ ಇವರು ಅವರ ಗರಡಿಯಲ್ಲಿ ಬೆಳೆದವರು, ಸಮಾಜ ದ ಪ್ರಮುಖ ಪಿಡುಗುಗಳಾದ ವರದಕ್ಷಿಣೆ, ಬಾಲ್ಯವಿವಾಹ, ಮೂಢನಂಬಿಕೆ ಮುಂತಾದ ಅನಿಷ್ಟಗಳನ್ನು ಈ ಸಮಾಜ ದಿಂದ ಕಿತ್ತು ಹಾಕಲು ರಾಜ್ಯಾದ್ಯಕ್ಷರಾದ ಡಾ, ಹುಲಿಕಲ್ ನಟರಾಜ ಅವರ ಕನಸಿನ ಈ ವೈಜ್ಞಾನಿಕ ಸಂಸ್ಥೆಯ ಧಾರವಾಡ ತಾಲೂಕಿನ ಅದ್ಯಕ್ಷರಾಗಿ ಭೀಮಪ್ಪ ಕಾಸಾಯಿ ಆಯ್ಕೆ ಸೂಕ್ತವಾಗಿದೆ ಎಂದರು,

ಇನ್ನೂ ಈ ಒಂದು ಸಮಯದಲ್ಲಿ ಪ್ರಕಾಶ ಹೂಗಾರ, ಚಂದ್ರಶೇಖರ ತಿಗಡಿ,ಎಲ್ ಐ ಲಕ್ಕಮ್ಮನವರ,ಎಸ್ ಟಿ ಸಮಾಜೆ,ಗಂಗವ್ವ ಕೋಟಿಗೌಡರ,ಹಸೀನ ಸಮುದ್ರಿ, ಸುಭಾಸ ಚವ್ಹಾನ, ಅಕ್ಷರತಾಯಿ ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಹಾವೇರಿ ಜಿಲ್ಲಾ ಸಂಚಾಲಕರು ಸುರೇಶ ಮಲ್ಲಾಡದ,ರುದ್ರೇಶ ಕುರ್ಲಿ ಮುಂತಾದವರು ಹಾಜರಿದ್ದು ಭೀಮಪ್ಪ ಕಾಸಾಯಿ ಅವರಿಗೆ ಶುಭಹಾರೈಸಿದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.