ಪ್ಲಾಸ್ಟಿಕ್ ಮುಕ್ತ ಭಾರತ ನಮ್ಮದಾಗಲಿ ಶಿವಾಜಿ ಜಾಧವ ಕರೆ ಹೆಬ್ಬಳ್ಳಿಯಲ್ಲಿ ಮಕ್ಕಳಿಗೆ ಜಾಗ್ರತೆ ಮೂಡಿಸಿದ ರೂಪಕ…..

Suddi Sante Desk

ಹೆಬ್ಬಳ್ಳಿ –

ಹೆಬ್ಬಳ್ಳಿಯಲ್ಲಿ ಪ್ಲಾಸ್ಟಿಕ್ ಮುಕ್ತ ಪರಿಸರ ಮಕ್ಕಳಿಗೆ ಜಾಗ್ರತೆ ಮೂಡಿಸಿದ ಕೆ ಎಲ್ ಇ ಬಿಸಿಎ ಪೈನಲ್ ವರ್ಷದ ವಿದ್ಯಾರ್ಥಿಗಳಿಂದ ರೂಪಕ ಪ್ರದರ್ಶನ ನಡೆಯಿತು. ಹೌದು ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಪ್ಲಾಸ್ಟಿಕ್ ಮುಕ್ತ ಪರಿಸರದ ಅಂಗವಾಗಿ ಪ್ಲಾಸ್ಟಿಕ್ ಬಳಕೆಯಿಂದ ಆಗುವ ತೊಂದರೆ ಕುರಿತು ರೂಪಕದ ಮೂಲಕ ಮಕ್ಕಳಿಗೆ ಜಾಗ್ರತೆ ಮೂಡಿಸಿ ದರು.

ರಾಘವೇಂದ್ರ,ಸಂಜಯ ಅನನ್ಯ ಹಾಗೂ ಗೆಳೆಯರ ಬಳಗದಿಂದ ಈ ಜಾಗ್ರತಿ ಮೂಡಿಸುವ ರೂಪಕ ಮೂಡಿ ಬಂದಿತು,ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಂಗಕಲಾವಿದ ಶಿಕ್ಷಕ ರಾಜೀವ ಹಲವಾಯಿ ಮಾತನಾಡಿ ನಾಟಕ ರೂಪಕದಂತಹ ಕಾರ್ಯಕ್ರಮ ಗಳು ಮಕ್ಕಳಲ್ಲಿ ಜಾಗ್ರತೆ ಮೂಡಲಿದೆ ಎಂದರು

ಜೊತೆಗೆ ಕೇವಲ ಉಪನ್ಯಾಸಗಳಿಂದ ಸಾದ್ಯವಾಗದೇ ಇರುವುದು ದೃಶ್ಯ ಮಾದ್ಯಮದ ಮೂಲಕ ಹೆಚ್ಚು ಪರಿಣಾಮ ಮೂಡಲಿದೆ ಎಂದರು,ಪ್ಲಾಸ್ಟಿಕ್ ತಿಂದು ಬೀಸಾಡುವುದನ್ನು, ಅವುಗಳನ್ನು ಹಸುಗಳು ಮತ್ತು ಇನ್ನಿತರ ಪ್ರಾಣಿಗಳು ತಿನ್ನುವುದರಿಂದ ಅವುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದು, ಅದೇ ರೀತಿ ನದಿ ಮತ್ತು ಸಮುಸ್ರ ತಟದಲ್ಲಿ ಯಾವು ದೇ ರೀತಿಯ ಪ್ಲಾಸ್ಟಿಕ್ ಎಸೆಯದಂತೆ ನೋಡಿಕೊಳ್ಳು ವದು ಮುಖ್ಯವಾಗಿದೆ ಆದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ನಗರ ಪ್ರದೇಶಗಳಲ್ಲಿ ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್ ನಲ್ಲಿ ತರುವುದು ಸಂಪೂರ್ಣವಾಗಿ ನಿಷೇಧಿಸಬೇಕೆಂದರು

ಈ ಪ್ಲಾಸ್ಟಿಕ್ ರಾಸಾಯನಿಕ ಪದಾರ್ಥಗಳನ್ನು ಹೊರಚಲ್ಲುವುದರಿಂದ ಅಹಾರ ಪದಾರ್ಥಗಳ ಮೇಲೆ ವಿಷಕಾರಿ ಕ್ರಿಮಿಕೀಟಗಳು ಸಂಗ್ರಹವಾಗುವು ದರಲ್ಲಿ ಸಂದೇಹವಿಲ್ಲ ಮಕ್ಕಳು ಕುರಕುರಿ ತಿನ್ನುವುದ ರಿಂದ ಹೊಟ್ಟೆ ಬಾಧೆಯಾಗಿ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಹಿರಿಯ ಶಿಕ್ಷಕ ಎಸ್ ಎ ಜಾಧವ ತಿಳಿಸಿದರು,ಇಡೀ ಜಗತ್ತಿನಲ್ಲಿ ಏಷಿಯಾ ಖಂಡ ಪ್ಲಾಸ್ಟಿಕ್ ಬಳಕೆಯಲ್ಲಿ ಮೊದಲ ಸ್ಥಾನದ ಲ್ಲಿದೆ,ಆದ್ದರಿಂದ ಜಾಗತಿಕ ತಾಪಮಾನ ಹೆಚ್ಚುತ್ತಿದ್ದು, ಎಚ್ಚೆತ್ತುಕೊಳ್ಳದಿದ್ದರೆ ಪರಿಣಾಮ ಗಂಭೀರವಾಗಲಿದೆ ಎಂದು ಶಿಕ್ಷಕ ಎಲ್ ಐ ಲಕ್ಕಮ್ಮನವರ ತಿಳಿಸಿದರು, ನಾಗರತ್ನ ಅಂಚಟಗೇರಿ ಪಿ ವಾಯ್ ದೊಡಮನಿ ಎ ಎಸ್ ಪಾಟೀಲ, ಎ ಎಂ ಕೊಲ್ಹಾಪುರ, ಎಸ್ ಎನ್ ಕೊಳಕ್ಕನವರ,ಎಸ್ ಎ ಸಂಕೇಶ್ವರ ಮುಂತಾದವರು ಹಾಜರಿದ್ದರು.

ವರದಿ – ಎಲ್ ಐ ಲಕ್ಕಮ್ಮನವರ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.