ಧಾರವಾಡ –
ಧಾರವಾಡ ಜಿಲ್ಲೆಯ ಮಾಜಿ ಜಿಲ್ಲಾ ಪಂಚಾಯತ ಸದಸ್ಯ,ಹಳಿಯಾಳ ಪಿಎಲ್ ಡಿ ಬ್ಯಾಂಕಿನ ಮಾಜಿ ನಿರ್ದೇಶಕ, ಬಿಜೆಪಿ ಮುಖಂಡ ಶಿವಲಂಗಪ್ಪ ಚಿಕ್ಕಣ್ಣನವರ ನಿಧನರಾಗಿದ್ದಾರೆ.ಎದೇನೊವು ಹಿನ್ನಲೆಯಲ್ಲಿ ಆಸ್ಪತ್ರೆಗೆ ಕೂಡಲೇ ಕರೆದುಕೊಂಡು ಬರಲಾಯಿತು.ಧಾರವಾಡದ ಜರ್ಮನ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಯನ್ನು ಪಡೆದುಕೊಳ್ಳುತ್ತಿದ್ದ ಇವರು ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.ಸಮಾಜದ ಹಿರಿಯ ಮುಖಂಡರು,ಬಿಜೆಪಿಯ ಹಿರಿಯ ನಾಯಕ,ಜಿ ಪಂ ಮಾಜಿ ಉಪಾಧ್ಯಕ್ಷರಾಗಿದ್ದರು.ಸಮಾಜ ಸೇವಕರು, ಸರಳ ಸಜ್ಜನ ಜನನಾಯಕ ಎಂದೇ ಗುರುತಿಸಿಕೊಂ ಡಿದ್ದರು.ಇಂದು ಮುಂಜಾನೆ ಜರ್ಮನ್ ಆಸ್ಪತ್ರೆ ಯಲ್ಲಿ ಅವರು ಹೃದಯಾಘಾತದಿಂದ ನಿಧನರಾಗಿ ದ್ದಾರೆ.

ಅವರ ಸ್ವಗ್ರಾಮವಾದ ಗಳಗಿ ಹುಲಕೊಪ್ಪದಲ್ಲಿ ಇಂದು ಮಧ್ಯಾಹ್ನ 4 ಗಂಟೆಗೆ ಅಂತ್ಯಕ್ರಿಯೆ ಜರಗು ವುದು.ನಿಧನರಾದ ಇವರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಚಿವ ಸಂತೋಷ ಲಾಡ್, ಶಾಸಕರಾದ ಅಮೃತ ದೇಸಾಯಿ,ಅರವಿಂದ ಬೆಲ್ಲದ್,ಶಂಕರಪಾಟೀಲ ಮುನೇನಕೊಪ್ಪ,ಮಹೇಶ ಟೆಂಗಿನಕಾಯಿ,ಕುಂದಗೋಳಮಠ,ಈರಣ್ಣ ಜಡಿ,ಮಹೇಶ್ ಶ್ಯಾಗೋಟಿ ಸೇರಿದಂತೆ ಹಲವರು ನಿಧನಕ್ಕೆ ಸಂತಾಪವನ್ನು ಸೂಚಿಸಿ ಭಾವಪೂರ್ಣ ನಮನವನ್ನು ಸಲ್ಲಿಸಿದ್ದಾರೆ.