ಧಾರವಾಡ –
ಕೋವಿಡ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ಬಂದ್ ಮಾಡಲಾಗಿದ್ದ ಮಧ್ಯದ ಅಂಗಡಿ ಮತ್ತು ಹೊಟೇಲ್ ಗಳಿಗೆ ಜಿಲ್ಲಾಧಿ ಕಾರಿ ನಿತೀಶ್ ಪಾಟೀಲ್ ತೆರೆಯಲು ಅವಕಾಶವನ್ನು ನೀಡಿದ್ದಾರೆ.ಹೌದು ಬಂದ್ ಮಾಡಿದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಮಸ್ಯೆಯಾಗುತ್ತಿರುವ ಹಿನ್ನಲೆಯ ಲ್ಲಿ ಹಾಗೇ ಮಧ್ಯವನ್ನು ಅಕ್ಕ ಪಕ್ಕದ ಜಿಲ್ಲೆಗಳಿಗೆ ಹೋಗಿ ತರುತ್ತಿರುವ ವಿಚಾರ ಗಮನಕ್ಕೆ ಬಂದಿದ್ದು ಹಾಗೇ ಕೋವಿಡ್ ನಿಂದಾಗಿ ಮನೆಯಲ್ಲಿ ಐಶೋಲೇ ಶನ್ ಇದ್ದ ಕಾರಣಕ್ಕಾಗಿ ಊಟದ ಸಮಸ್ಯೆ ಕುರಿತಂತೆ ದೂರು ಬಂದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಈಗ ಹೊಟೇಲ್ ಮತ್ತು ಮಧ್ಯದ ಅಂಗಡಿ ಆರಂಭಕ್ಕೆ ತೆರೆಯಲು ಅವಕಾಶವನ್ನು ನೀಡಿದ್ದಾರೆ.ಜೂನ್ 1 ರಿಂದ 6 ರವರೆಗೆ ಜಿಲ್ಲೆಯಲ್ಲಿ ಮಧ್ಯದ ಅಂಗಡಿ ಮತ್ತು ಹೊಟೇಲ್ ತೆರೆಯಲು ಅವಕಾಶವನ್ನು ನೀಡಿ ಹೊಸ ಆದೇಶವನ್ನು ಮಾಡಿದ್ದಾರೆ.

ಬೆಳಿಗ್ಗೆ 6 ರಿಂದ 8 ರವರೆಗೆ ಹೋಟೆಲ್ ಪಾರ್ಸೆಲ್, ಹೋಂ ಡೆಲೆವರಿ ಹಾಗೂ ಮದ್ಯದಂಗಡಿ ತೆರೆಯಲು ಅವಕಾಶ. ಕಲ್ಪಿಸಿದ್ದಾರೆ.ಜಿಲ್ಲೆಯಾದ್ಯಂತ ಕೋವಿಡ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ದಿನಾಂಕ 24-05-2021 ರಿಂದ ದಿನಾಂಕ 07-05- 2021 ರ ವರೆಗೆ ಕಠಿಣ ಲಾಕ್ ಡೌನ್ ವಿಧಿಸಿತ್ತು. ಇದರಿಂದ ಜಿಲ್ಲೆಯಲ್ಲಿ ನಿರಾಶ್ರಿತರಿಗೆ ಮತ್ತು ಹೋಮ್ ಐಶೂಲೇಶನ್ ನಲ್ಲಿದ್ದವರಿಗೆ ಇರುವ ಜನರಿಗೆ ಊಟದ ತೊಂದರೆಯಾಗುತ್ತಿರುವುದರಿಂದ ಮತ್ತು ಮದ್ಯ ಪ್ರಿಯರು ಪಕ್ಕದ ಅಕ್ಕ ಪಕ್ಕದ ಜಿಲ್ಲೆಗ ಳಿಗೆ ಮಧ್ಯ ಖರೀದಿಗಾಗಿ ತೆರಳುತ್ತಿರುವುದರಿಂದ ಕೋವಿಡ್ ಹರಡುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ ಎಂಬ ಕಾರಣದಿಂದ ಲಾಕ್ ಡೌನ್ ನಿಭಂದನೆಗಳಲ್ಲಿ ಕೆಲವೊಂದು ತಿದ್ದುಪಡಿ ಮಾಡಲಾಗಿದೆ.

ಹೀಗಾಗಿ ದಿ. 01-05-2021 ರಿಂದ ದಿನಾಂಕ 06-05- 2021 ರವರೆಗೆ ಅವಕಾಶವನ್ನು ನೀಡಲಾಗಿದೆ.
ಬೆಳಿಗ್ಗೆ 6 ಗಂಟೆಯಿಂದ ಬೆಳಿಗ್ಗೆ 8ಗಂಟೆಯವರೆಗೆ ಹೋಟೆಲ್ ಗಳಿಗೆ ಪಾರ್ಸಲ್ ಗಾಗಿ ಅವಕಾಶ ನೀಡಲಾಗಿದೆ.
ಬೆಳಿಗ್ಗೆ 6 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ಹೋಟೆಲ್ ಗಳಿಗೆ ಕೋವಿಡ್ ಸುರಕ್ಷತಾ ಕ್ರಮಗಳೊಂದಿಗೆ ಹೋಮ್ ಡೆಲಿವರಿಗೂ ಅವಕಾಶವನ್ನು ನೀಡಲಾಗಿದೆ.
ಬೆಳಿಗ್ಗೆ 6 ಗಂಟೆಯಿಂದ ಬೆಳಿಗ್ಗೆ 8 ಗಂಟೆಯವರೆಗೆ ಎರಡು ಗಂಟೆಗಳ ಕಾಲ ಮಧ್ಯದಂಗಡಿಗಳಲ್ಲಿ ಪಾರ್ಸಲ್ ಗೆ ಅವಕಾಶ ಕಲ್ಪಿಸಲಾಗಿದೆ
ಹೀಗೆ ಹೊಸ ಆದೇಶವನ್ನು ಮಾಡಿರುವ ಜಿಲ್ಲಾಧಿಕಾ ರಿಗಳು ಜಿಲ್ಲೆಯಲ್ಲಿ ಹೊಟೇಲ್ ತೆರೆಯಲು ಮತ್ತು ಮಧ್ಯದ ಅಂಗಡಿಗಳ ಆರಂಭಕ್ಕೆ ಸಧ್ಯ ತೆರೆಯಲು ಅವಕಾಶವನ್ನು ನೀಡಿದ್ದಾರೆ.