ವಿಜಯಪುರ –
ದೇಶ ನಾಡು ಕಂಡ ಅಪರೂಪದ ಸಂತರಲ್ಲಿ ಸ್ವಾಮಿಜಿಗಳಲ್ಲಿ ವಿಜಯಪುರದ ಸಿದ್ದೇಶ್ವರ ಶ್ರೀಗಳು ಕೂಡಾ ಒರ್ವರಾಗಿದ್ದಾರೆ ಇವರ ಕುರಿತಂತೆ ಎಷ್ಟೇ ಹೇಳಿದರು ಅದು ಕಡಿಮೆ ಏನಿಸುತ್ತದೆ ಅಷ್ಟೊಂದು ದೊಡ್ಡ ವ್ಯಕ್ತಿತ್ವವನ್ನು ಹೊಂದಿದವರು ಶ್ರೀಗಳಾಗಿದ್ದರು.ಇನ್ನೂ ಯಾರೇ ಬರಲಿ ಹೇಗೆ ಇರಲಿ ಪ್ರತಿಯೊಬ್ಬರನ್ನು ತುಂಬಾ ಪ್ರೀತಿಯಿಂದ ಮಾತನಾಡಿಸುತ್ತಿದ್ದ ನಡೆದಾಡುವ ದೇವರಿಗೆ ಹಾಡು ಕೇಳೊದು ಅಂದರೆ ತುಂಬಾ ಇಷ್ಟ.
ಅದರಲ್ಲೂ ಮಕ್ಕಳ ಹಾಡು ಅಂದರೆ ತುಂಬಾ ಇಷ್ಟಪಡುತ್ತಿದ್ದರು ಶ್ರೀಗಳು.ಹೌದು ಇದಕ್ಕೆ ಬಾಲಕಿ ಸಾಕ್ಷಿ ಶ್ರೇಯಾ ಪರಮೇಶ ಕಬಟಗಿ ಅವಳು ಆಶ್ರಮಕ್ಕೆ ಬಂದಾಗಲೇಲ್ಲ ಅವಳಿಂದ ಕಲಿಸು ಗುರುವೇ ಕಲಿಸು ಎನ್ನುವ ಹಾಡನ್ನು ಗುರುಗಳು ಪದೇ ಪದೇ ಕೇಳುತ್ತಿದ್ದರು.
5 ವರ್ಷದ ಬಾಲಕಿಯ ಸುಮಧುರ ಕಂಠದಿಂದ ಈ ಒಂದು ಹಾಡನ್ನು ದೇವರು ಕೇಳುತ್ತಿದ್ದರು ಇನ್ನೂ ಇತ್ತ ಬಾಲಕಿ ಶ್ರೇಯಾ ಕೂಡಾ ಸ್ವಾಮಿಜಿ ಮುಂದೆ ಹಾಡು ಹೇಳುತ್ತಿದ್ದರೆ ಮುಗ್ದರಾಗಿ ಕೇಳು ತ್ತಿದ್ದರು.ಪೊಲೀಸ್ ಅಧಿಕಾರಿ ಪರಮೇಶ ಕಬಟಗಿ ಅವರು ಸಿದ್ದೇಶ್ವರ ಸ್ವಾಮಿಜಿ ಯ ಭಕ್ತರಾಗಿದ್ದು ಹೀಗಾಗಿ ತಾವು ಗುರುಗಳ ಬಳಿ ಹೋದಾಗಲೇಲ್ಲ ತಮ್ಮೊಂದಿಗೆ ಮಗಳನ್ನು ಕರೆದುಕೊಂಡು ಹೋಗುತ್ತಿದ್ದರು.
ಹೀಗಾಗಿ ಗುರುಗಳ ಮುಂದೆ ಶ್ರೇಯಾ ಅದ್ಭುತ ವಾಗಿ ಹಾಡನ್ನು ಹೇಳಿದ ವಿಡಿಯೋ ಈಗ ವೈರಲ್ ಆಗಿದೆ.ನಾಲ್ಕೈದು ಬಾರಿ ಶ್ರೀಗಳ ಮುಂದೆ ಈ ಒಂದು ಹಾಡನ್ನು ಹಾಡಿದ್ದು ವೈರಲ್ ಆಗಿದ್ದು ಇನ್ನೂ ನಿಧನರಾದ ದಿನದಂದು ಕೂಡಾ ಶ್ರೇಯಾ ಶ್ರೀಗಳ ದರ್ಶನವನ್ನು ಪಡೆದುಕೊಂಡು ಕಣ್ಣೀರು ಹಾಕಿರುವ ದೃಶ್ಯಗಳು ಸಧ್ಯ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದು ತಂದೆಯ ಹೇಗಲ ಮೇಲೆ ಕುಳಿತುಕೊಂಡು ದರ್ಶನ ಮಾಡುತ್ತಾ ಕಣ್ಣೀರು ಹಾಕಿದ್ದಾಳೆ ಶ್ರೇಯಾ.
ಯಾರೇ ತಮ್ಮ ಎದುರು ಮಕ್ಕಳು ಬಂದರೆ ಅವರಿಂದ ಹಾಡೊಂದನ್ನು ಕೇಳುತ್ತಿದ್ದರು ಗುರು ಗಳು.ಮಕ್ಕಳು ಹಾಡನ್ನು ಹೇಳುತ್ತಿದ್ದರೆ ಅತ್ತ ನಡೆದಾಡುವ ದೇವರು ಹಾಡಿಗೆ ಮುಗುಳ್ನಗುತ್ತಾ ಅವರಿಗೆ ಆಶೀರ್ವಾದವನ್ನು ಮಾಡುತ್ತಿದ್ದರು ಸಿದ್ದೇಶ್ವರ ಶ್ರೀಗಳು.
ಸುದ್ದಿ ಸಂತೆ ನ್ಯೂಸ್ ವಿಜಯಪುರ…..