ಹೈದರಾಬಾದ್ –
ಸಾಮಾನ್ಯವಾಗಿ ಯಾರೇ ಯಾವುದೇ ಸಮಸ್ಯೆಯನ್ನು ಹೊತ್ತುಕೊಂಡು ಪೊಲೀಸರ ಬಳಿ ಬಂದರೆ ಕ್ಷಣಾರ್ಧದಲ್ಲಿಯೇ ಪರಿಹಾರ ಮಾಡಿ ಕಳಿಸುತ್ತಾರೆ. ಆದರೆ ಪೊಲೀಸರೇ ಸಮಸ್ಯೆಯಲ್ಲಿ ಸಿಲುಕಿಕೊಂಡರೇ ಏನು ಮಾಡಬೇಕು ಯಾರ ಬಳಿ ಹೋಗಬೇಕು. ಹೌದು ಇಂಥದೊಂದು ಇಕ್ಕಟ್ಟಿಗೆ ಹೈದರಾಬಾದ್ ನಲ್ಲಿನ ಪೊಲೀಸರು ಈಗ ಸಿಲುಕಿಕೊಂಡಿದ್ದಾರೆ. ಅದು ಲೇಡಿಜ್ ಟೇಲರ್ ರೊಬ್ಬರ ಜಾಲದಲ್ಲಿ ಸಿಲುಕಿಕೊಂಡಿರುವ ದೊಡ್ಡ ಹುದ್ದೆಯಲ್ಲಿ ಇರುವ ಇನ್ಸ್ಪೆಕ್ಟರ್ ಕಥೆ ಇದು.

ಹೌದು ಲೇಡಿಜ್ ಟೇಲರ್ ರೊಬ್ಬರು ಬರೋಬ್ಬರಿ ಆರು ಸಬ್ ಇನ್ಸ್ಪೆಕ್ಟರ್ ಗಳನ್ನು ಬೆದರಿಸಿ ಹಣ ವಸೂಲಿ ಮಾಡಿದ ಆರೋಪದಡಿಯಲ್ಲಿ ರಾಚಕೊಂಡ ಪೊಲೀಸರು ಮಹಿಳೆಯೊಬ್ಬಳನ್ನು ಬಂಧಿಸಿದ್ದಾರೆ.

ಅವರೇ ಆರೋಪಿ ಲತಾ ರೆಡ್ಡಿ ಎಂದು ಗುರುತಿಸಲಾಗಿದೆ. ವೃತ್ತಿಪರ ಟೈಲರ್ ಆಗಿ ಕೆಲಸ ಮಾಡುವ ಲತಾ ರೆಡ್ಡಿ ವನಸ್ಥಳಿಪುರಂ ನಿವಾಸಿ. ಪತಿಯೊಂದಿಗೆ ಸಂಬಂಧ ಕಡಿದುಕೊಂಡಿರುವ ಆಕೆ ಸುಮಾರು 13 ವರ್ಷಗಳಿಂದ ಆತನಿಂದ ದೂರವಿದ್ದಾಳೆ. ಇದರ ನಡುವೆ ವ್ಯಕ್ತಿಯೊಬ್ಬನ ಜತೆ ವಿವಾಹೇತರ ಸಂಬಂಧವನ್ನು ಹೊಂದಿದ್ದು, ಆತ ಮೊಸ ಮಾಡಿರುವುದಾಗಿ ಕೆಲವು ದಿನಗಳ ಹಿಂದೆ ವನಸ್ಥಳಿಪುರಂ ಪೊಲೀಸ್ ಠಾಣೆಯಲ್ಲಿ ಲತಾ ರೆಡ್ಡಿ ದೂರು ದಾಖಲಿಸುತ್ತಾಳೆ.

ಅವಮಾನ ಎದುರಿಸಬೇಕಾಗುತ್ತದೆ ಎಂಬ ಭಯದಿಂದ ಆಕೆಯೊಂದಿಗೆ ಸಂಬಂಧ ಹೊಂದಿದ್ದ ವ್ಯಕ್ತಿ ಸ್ವಲ್ಪ ಹಣವನ್ನು ನೀಡಿ, ಕ್ಷಮೆಯಾಚಿಸಿ ರಾಜಿ ಮಾಡಿಕೊಳ್ಳುತ್ತಾನೆ.

ಆದರೆ, ಇಷ್ಟಕ್ಕೆ ಸುಮ್ಮನಾಗದ ಲತಾ ರೆಡ್ಡಿ ಕಣ್ಣು ಸಬ್ ಇನ್ಸ್ಪೆಕ್ಟರ್ ಮೇಲೆ ಬೀಳುತ್ತದೆ. ಆಗಾಗ ಠಾಣೆಗೆ ಹೋಗುವ ಆಕೆ ಎಸ್ಐ ಪರಿಚಯ ಮಾಡಿಕೊಳ್ಳುತ್ತಾಳೆ. ಎಲ್ಲ ವಿಧದಲ್ಲೂ ಅವರೊಂದಿಗೆ ಮುಂದುವರಿಯುತ್ತಾಳೆ. ಬಳಿಕ ಹಿರಿಯ ಅಧಿಕಾರಿಗಳಿಗೆ ದೂರು ನೀಡುವುದಾಗಿ ಬೆದರಿಸಿ ಹಣ ಕೀಳುವ ಕೆಲಸಕ್ಕೆ ಇಳಿಯುತ್ತಾಳೆ. ಸುಮಾರು 6 ಸಬ್ ಇನ್ಸ್ಪೆಕ್ಟರ್ ಗಳಿಗೆ ಬೆದರಿಕೆ ಹಾಕಿರುತ್ತಾಳೆ. ಸಾಕಷ್ಟು ಹಣವನ್ನು ಕಸಿದಿರುತ್ತಾಳೆ.

ಆದರೆ, ಯಾವೊಬ್ಬ ಎಸ್ಐ ಸಹ ಲತಾ ರೆಡ್ಡಿ ವಿರುದ್ಧ ದೂರು ನೀಡಿರುವುದಿಲ್ಲ. ಆದರೆ, ಕೊನೆಯಲ್ಲಿ ಎಸ್ಸಿ ಮತ್ತು ಎಸ್ಟಿ ದೌರ್ಜನ್ಯ ಕಾಯ್ದೆ ಅಡಿ ವನಸ್ಥಳಿಪುರಂ ಪೊಲೀಸರು ಆಕೆಯನ್ನು ಬಂಧಿಸುತ್ತಾರೆ.
