ಬೆಂಗಳೂರು –
ಮಹಾಮಾರಿ ಕರೋನಾಗೆ ರಾಜ್ಯದಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಲೆ ಇದೆ. ದಿನದಿಂದ ದಿನಕ್ಕೆ ಸಾವು ನೋವುಗಳ ಸಂಖ್ಯೆ ಹೆಚ್ಚುತ್ತಿದ್ದು ಇನ್ನೂ ಈ ಒಂದು ಕೋವಿಡ್ ಗೆ ರಾಜ್ಯದಲ್ಲಿ ಇಂದು ಕೂಡಾ ಐದು ಜನ ಶಿಕ್ಷಕರು ಸಾವಿಗೀಡಾಗಿದ್ದಾರೆ.

ಹೌದು ರಾಜ್ಯದ ವಿವಿ ಧ ಕಡೆಗಳಲ್ಲಿ ಐದು ಜನ ಶಿಕ್ಷಕರು ಸಾವಿಗೀಡಾಗಿದ್ದಾ ರೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿಂಗನಕುಪ್ಪೆ ಯ ಕೊರೋನಕ್ಕೆ ಬಲಿಯಾಗಿದ್ದಾರೆ.ಮೂರು ನಾ ಲ್ಕು ದಿನಗಳ ಹಿಂದೆ ಇವರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿತ್ತು ಕೂಡಲೇ ಆಸ್ಪತ್ರಗೆ ದಾಖಲು ಮಾಡಲಾಗಿತ್ತು. ನಂತರ ಚಿಕಿತ್ಸೆ ಫಲಿಸದೇ ಆಸ್ಪತ್ರೆ ಯಲ್ಲಿ ಸಾವಿಗೀ ಡಾಗಿದ್ದಾರೆ

ಇನ್ನೂ ಇಂಡಿ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆ ಗಣವಲಗ ಶಾಲೆಯ ತೀರ್ಥಪ್ಪ ಚಾಂದ ಕವಟೆ ಇವರು ಕೂಡಾ ಮಹಾಮಾರಿಗೆ ಬಲಿಯಾ ಗಿದ್ದಾರೆ.ಕಳೆದ ನಾಲ್ಕು ದಿನಗಳ ಇವರಿಗೆ ಕರೋನಾ ಸೋಂಕು ಕಾಣಿಸಿಕೊಂಡಿತ್ತು ಇವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೂಡಲೇ ಆಸ್ಪತ್ರಗೆ ದಾಖ ಲು ಮಾಡಲಾಗಿತ್ತು ಇಂದು ಚಿಕಿತ್ಸೆ ಫಲಿಸದೇ ಆಸ್ಪತ್ರೆ ಯಲ್ಲಿ ಸಾವಿಗೀಡಾಗಿದ್ದಾರೆ.

ಇನ್ನೂ ಅತ್ತ ದೇವದುರ್ಗ ತಾಲೂಕಿನ ಸುಂಕೇಶ್ವ ರಹಾಳ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಶ್ರೀಯುತ ಕಟ್ಟಪ್ಪ ಅವರು ಕೂಡಾ ಈ ಒಂದು ಮಹಾಮಾರಿಗೆ ಬಲಿಯಾಗಿದ್ದಾರೆ.ಇವರಿಗೂ ಒಂದು ವಾರದ ಹಿಂದೆ ಕರ್ತವ್ಯದ ಮೇಲಿದ್ದಾಗ ಸೋಂಕು ಕಾಣಿಸಿಕೊಂಡು ನಂತರ ಆಸ್ಪತ್ರೆಗೆ ದಾಖಲಾಗಿದ್ದರು ಚಿಕಿತ್ಸೆ ಪಲಿಸದೇ ಇಂದು ಇವರು ಸಾವಿಗೀಡಾಗಿದ್ದಾ ರೆ.


ಇನ್ನೂ ರಮೇಶ್ ತಿಗಡಿ ಬೈಲಹೊಂಗಲ ಕುರಗುಂದ ಶಾಲೆಯ ಶಿಕ್ಷಕರು ಇವರು ಕೂಡಾ ಅಕಾಲಿಕವಾಗಿ ಮರಣವನ್ನು ಹೊಂದಿದ್ದಾರೆ.ಇವರ ನಿಧನದಿಂದಾಗಿ ಅಲ್ಲಿನ ಶೈಕ್ಷಣಿಕ ಕ್ಷೇತ್ರಕ್ಕೆ ತುಂಬಲಾರದ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ.

ಇತ್ತ ಹಗರಿ ಬೊಮ್ಮನಹಳ್ಳಿಯ ಹಂಪಸಾಗರ ಕ್ಲಸ್ಟರ್ ಕ್ರಿಯಾಶೀಲ CRP ವೆಂಕಟೇಶ ನಾಯ್ಕ್ ಇವರು ಕೊವಿಡ್ ಗೆ ಬಲಿಯಾಗಿದ್ದಾರೆ.ಇವರ ಸಾವು ಅತ್ಯಂತ ನೋವಿನ ಸಂಗತಿಯಾಗಿದ್ದು ಇವರ ಆತ್ಮಕ್ಕೆ ಶಾಂತಿ ಸಿಗಲಿ ಕುಟುಂಬಕ್ಕೆ ನೋವು ಸಹಿಸುವ ಶಕ್ತಿ ಯನ್ನು ಭಗವಂತ ಕೊಡಲಿ ಎಂದು ಹಂಪಸಾಗರ ಕ್ಲಸ್ಪರ್ ಬಳದವರು ಪ್ರಾರ್ಥನೆ ಮಾಡಿದ್ದಾರೆ.

ಇನ್ನೂ ಕೆ ವಿ ಕಡಿವಾಲ ಸರಕಾರಿ ಹಿರಿಯ ಪ್ರಾಥಮಿ ಕ ಶಾಲೆಯ ಶಿಕ್ಷಕ ಇವರು ಕೂಡಾ ಚಿಕ್ಕ ವಯಸ್ಸಿನ ವರಾಗಿದ್ದರೂ ಕೂಡಾ ಕೋವಿಡ್ ಗೆ ಬಲಿಯಾಗಿ ದ್ದಾರೆ.ಇವರ ನಿಧನಕ್ಕೆ ವೀರಾಪೂರ ಶಾಲೆಯ ಸರ್ವ ಸಿಬ್ಬಂದಿಗಳು ಸಂತಾಪವನ್ನು ಸೂಚಿಸಿದ್ದಾರೆ.

ಇನ್ನೂ ಇದರೊಂದಿಗೆ ಇನ್ನೂ ರಾಜ್ಯದ ಹಲವು ಭಾಗ ಗಳಲ್ಲಿ ಶಿಕ್ಷಕರು ಕೋವಿಡ್ ಗೆ ಬಲಿಯಾಗಿದ್ದಾರೆ. ದಯಮಾಡಿ ಶಿಕ್ಷಕ ಬಂಧುಗಳೇ ಭಯಬೇಡ ಆತಂ ಕ ಬೇಡ ದಯಮಾಡಿ ಕಾಳಜಿ ಇರಲಿ ನಿರ್ಲಕ್ಷ್ಯಬೇಡ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಮನೆಯಲ್ಲಿ ಇರಿ ಆರೋಗ್ಯವಾಗಿರಿ ಇದು ಕರ್ನಾಟಕ ರಾಜ್ಯ ಪ್ರಾಥಮಿ ಕ ಶಾಲಾ ಶಿಕ್ಷಕರ ಸಂಘದ ಸರ್ವ ಸದಸ್ಯರ ವಿನಂತಿ ಯಾಗಿದ್ದು ಇನ್ನೂ ಮೃತರಾದ ಶಿಕ್ಷಕರಿಗೆ ಸಂಘವೂ ಕೂಡಾ ಸಂತಾಪವನ್ನು ಸೂಚಿಸಿದೆ.ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ.ಪ್ರಧಾನ ಕಾರ್ಯದ ರ್ಶಿ ಚಂದ್ರಶೇಖರ ನುಗ್ಗಲಿ ಹಾಗೇ ಸುರೇಶ ಶೇಡಶ್ಯಾ ಳ,ಬಿ ಟಿ ಗೌಡರ,ಜುಬೇರ ಕೆರೂರ,ಜೆ ಎಸ್ ಬಾಲೇ ಸೂರ,ಹೆಚ್ ಬಿ ಕೊನಾಡಿ ಸೇರಿದಂತೆ ಸಂಘದ ಸರ್ವ ಸದಸ್ಯರು ಒಂದೇ ದಿನ ಮೃತರಾದ ಮೂವ ರು ಶಿಕ್ಷಕರಿಗೆ ಭಾವಪೂರ್ಣ ನಮನವನ್ನು ಸಲ್ಲಿಸಿದ್ದಾ ರೆ ಇದರೊಂದಿಗೆ ಕಾಳಜಿವಹಿಸಿಕೊಳ್ಳುವಂತೆ ವಿನಂ ತಿಸಿ ಇದರೊಂದಿಗೆ ಮೃತ ಶಿಕ್ಷಕರ ಕುಟುಂಬಕ್ಕೆ ಕೂಡಲೇ ಸೂಕ್ತವಾದ ಪರಿಹಾರವನ್ನು ನೀಡುವಂತೆ ಒತ್ತಾಯವನ್ನು ಮಾಡಿದ್ದಾರೆ.