ಮುಂದಿನ ಬಾಗಿಲಲ್ಲಿ ಮಲಗಿದ್ರು – ಹಿತ್ತಲ ಬಾಗಿಲದಾಗ ಬಂದ ಕಳ್ಳತನ ಮಾಡಿದ್ರು – ಕೈಚಳಕ ತೋರಿದ ಚಾಲಕಿ ಕಳ್ಳರು

Suddi Sante Desk

ಹುಬ್ಬಳ್ಳಿ –

ಕುಂದಗೋಳ ತಾಲ್ಲೂಕಿನ ಇನಾಂಕೊಪ್ಪ ದಲ್ಲಿ ಮನೆಯೊಂದನ್ನು ಕಳ್ಳತನ ಮಾಡಲಾಗಿದೆ. ಗ್ರಾಮದ ಫಕೀರಯ್ಯ ಹಿರೇಮಠ ಎಂಬುವರು ಕುಟುಂಬ ಸಮೇತರಾಗಿ ತಮ್ಮ ಮನೆಯ ಮುಂದೆ ಮಲಗಿದ್ದಾರೆ. ಮನೆಗೆ ಬೀಗ ಹಾಕಿಕೊಂಡು ಎಲ್ಲರೂ ಮನೆಯ ಮುಂದೆ ಮಲಗಿದ್ದಾರೆ. ಈ ಒಂದು ವಿಷಯ ತಿಳಿದ ಕಳ್ಳರು ತಡರಾತ್ರಿ ಕಳ್ಳತನಕ್ಕೇ ಸ್ಕೇಚ್ ಹಾಕಿಕೊಂಡು ಮನೆಯ ಹಿತ್ತಲ ಬಾಗಿಲು ಮುರಿದು ಕಳ್ಳತನ ಮಾಡಿದ್ದಾರೆ.

ಇನಾಂಕೊಪ್ಪ ಗ್ರಾಮದಲ್ಲಿ ಈ ಒಂದು ಕಳ್ಳತನ ನಡೆದಿದೆ.ಫಕೀರಯ್ಯ ತಮ್ಮ ಕುಟುಂಬದವರೊಂದಿಗೆ ಮನೆಯ ಮುಂದೆ ಮಲಗಿಕೊಂಡಿದ್ದರು ಹಿತ್ತಲ ಬಾಗಿಲು ಮುರಿದ ಕಳ್ಳರು ತಮ್ಮ ಕೈ ಚಳಕ ತೋರಿದ್ದಾರೆ.

ಇನ್ನೂ ಮನೆಯಲ್ಲಿದ್ದ 1 ಲಕ್ಷ 20 ಸಾವಿರ ಹಣ 30 ಗ್ರಾಂ ಬಂಗಾರ 200 ಗ್ರಾಂ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.ಇನ್ನೂ ಕಳ್ಳತನದ ವಿಷಯ ತಿಳಿದ ಧಾರವಾಡ ಡಿವೈಎಸ್ಪಿ ರವಿ ನಾಯಕ ಇನಸ್ಪೇಕ್ಟರ್ ಬಸವರಾಜ ಕಲ್ಲಮ್ಮನವರ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಕಳ್ಳತನ ನಡೆದ ಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ ಪೊಲೀಸ್ ಅಧಿಕಾರಿಗಳು ಕುಂದಗೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮಾಡ್ತಾ ಇದ್ದಾರೆ.

ಪೊಲೀಸ್ ಹಿರಿಯ ಅಧಿಕಾರಿಗಳೊಂದಿಗೆ ಈರಪ್ಪ ಗಸ್ತಿ, ಬಸವರಾಜ ಶಿರಕೋಳ ,ಎಆರ್ ಎಸ್ ಐ ಮಲ್ಲೇಶ ದೊಡ್ಡಮನಿ , ಮಡವಳ್ಳಿ ಜೋಡಗೇರಿ,ಶಿವಪುತ್ರಪ್ಪ ಕಳ್ಳಿಮನಿ, ಮಾರುತಿ ಕುಂಬಾರ,ಶರಣಪ್ಪ ತೊಗುಣಸಿ, ವಿ ವಿ ಬೇವಿಣವರದ ಸೇರಿದಂತೆ ಹಲವು ಪೊಲೀಸ್ ಸಿಬ್ಬಂದ್ದಿಗಳು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.