ಉತ್ತರಾಖಂಡ –
ಉತ್ತರಾಖಂಡದ ಚಮೋಲಿಯಲ್ಲಿ ಉಂಟಾದ ಪ್ರವಾಹದಲ್ಲಿ ಮೃತರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ. ಅಲ್ಲದೇ 197 ಮಂದಿ ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ.ಅಲಕಾನಂದ ಮತ್ತು ದೌಲಿಗಂಗದಲ್ಲಿ ನಡೆದ ಈ ದುರಂತದಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ

ತಪೋ ವನ್ ಹೈಡ್ರೋಪವರ್ ಯೋಜನೆ ಮತ್ತು ರಿಷಿಗಂಗಾದ ಹೈಡೆಲ್ ಪ್ರಾಜೆಕ್ಟ್ ಗೆ ಭಾರೀ ಹಾನಿಯಾಗಿದೆ. ಸುಮಾರು 600 ಮಂದಿ ಭಾರತೀಯ ಸೇನಾ ಯೋಧರು, ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಚಮೋಲಿ ಜಿಲ್ಲೆಯಲ್ಲಿ ಕಾರ್ಯಾಚರಣೆ ಮುಂದುವರೆಸಿವೆ.

ಸದ್ಯ ರೈನಿ ಗ್ರಾಮದಲ್ಲಿ ಕುಸಿದು ಬಿದ್ದ ಕಟ್ಟಡಗಳ ಅವಶೇಷಗಳ ಅಡಿಯಲ್ಲಿದ್ದ ಐವರ ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ತಪೋವನ ವಿದ್ಯುತ್ ಯೋಜನೆಯ ಸ್ಥಳದಲ್ಲಿ ೩೦ಕ್ಕೂ ಹೆಚ್ಚು ಕಾರ್ಮಿಕರು ಟನೆಲ್‌ನೊಳಗೆ ಸಿಲುಕಿಕೊಂಡಿದೆ.ಹೀಗಾಗಿ ಸತತ 3 ದಿನಗಳಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
