ಧಾರವಾಡ –
ಸರಾಯಿ ಕುಡಿಯಲು ಹಣ ಕೊಡಲಿಲ್ಲ ಎಂಬ ಕಾರಣದಿಂದಾಗಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡದ ಬಾಡ ಗ್ರಾಮದಲ್ಲಿ ನಡೆದಿದೆ.

ಬಾಡ ಗ್ರಾಮದ ಬಸ್ ನಿಲ್ದಾಣ ಬಳಿಯ ಜಮೀನಿನಲ್ಲಿ ಈ ಒಂದು ಘಟನೆ ನಡೆದಿದೆ. ಬಸವರಾಜ ಬಿಂಗಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ

ಮೂಲತಃ ಕಲಘಟಗಿಯ ಮಡಕಿಹೊನ್ನಿಹಳ್ಳಿ ಗ್ರಾಮದವರಾದ ಇವರು ಬಾಡ ಗ್ರಾಮದಲ್ಲಿ ಮದುವೆಯಾಗಿ ಇಲ್ಲೇ ವಾಸಿಸುತ್ತಿದ್ದರು

ಇಟ್ಟಂಗಿ ಬಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಇವರು ಸರಾಯಿ ಕುಡಿಯುವ ವಿಚಾರದಲ್ಲಿ ಎಲ್ಲರೊಂದಿಗೆ ಜಗಳ ಮಾಡುತ್ತಿದ್ದರು ನಿನ್ನೆ ಕೂಡಾ ಇದೇ ವಿಚಾರದಲ್ಲಿ ಜಗಳ ಮಾಡಿ

ತಾನು ಹಾಕಿಕೊಂಡ ಟೀ ಶರ್ಟ್ ನಿಂದ ಬಸವರಾಜ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಧಾರವಾಡ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
