ಹೊಸದುರ್ಗ –
ಹಾಡು ಹಗಲೇ ಶಿಕ್ಷಕಿಯೊಬ್ಬರ ಕಣ್ಣಿಗೆ ಖಾರದ ಪುಡಿ ಎರಚಿ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾದ ಘಟನೆ ಹೊಸದುರ್ಗ ದಲ್ಲಿ ನಡೆದಿದೆ.ಹೌದು ಎಂದಿನಂತೆ ಶಾಲಾ ಕರ್ತವ್ಯವನ್ನು ಮುಗಿಸಿಕೊಂಡು ಮನೆಯತ್ತ ಶಿಕ್ಷಕಿ ಮದಜ್ಯೋತಿ ಎಂಬುವರು ಹೊರಟಿದ್ದರು.ಈ ಒಂದು ಸಮಯದಲ್ಲಿ ಕಳ್ಳನೊಬ್ಬ ಇವರನ್ನು ಅಡ್ಡಗಟ್ಟಿ ಖಾರದ ಪುಟಿ ಎರಚಿ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾ ಗಿದ್ದಾನೆ.ಈ ಒಂದು ಘಟನೆ ನಿನ್ನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದ್ದು ಶ್ರೀರಾಂಪುರ ಹೋಬಳಿಯ ವೆಂಗಳಾ ಪರು ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಮದಜ್ಯೋತಿ ಅವರು ಕರ್ತವ್ಯವನ್ನು ಮಾಡುತ್ತಿದ್ದು ವನೆಂಗಳಾಪುರ ಗ್ರಾಮದಿಂದ ಶ್ರೀರಾಂಪರ ಗ್ರಾಮಕ್ಕೆ ಹೋಗುವಾಗ ಇವರ ನ್ನು ಹಿಂಬಾಲಿಸಿಕೊಂಡು ಬಂದ ಬೈಕ್ ಸವಾರನು ಹಿರೇಕೆರೆ ಏರಿ ಹಿಂಭಾಗ ಕಾಚಾಪುರ ರಸ್ತೆಯಲ್ಲಿ ಬೈಕ್ ನಲ್ಲಿ ಹಿಂಬದಿ ಯಿಂದ ಬಂದ ಯುವಕನೊಬ್ಬ ಶಿಕ್ಷಕಿಯ ಬೈಕ್ ನ್ನು ಅಡ್ಡ ಗಟ್ಟಿ ಕಣ್ಣಿಗೆ ಖಾರದ ಪುಡಿ ಎರಚಿ 50 ಗ್ರಾಮ ಚಿನ್ನದ ಮಾಂಗಲ್ಯ ಸರವನ್ನು ಕಿತ್ತು ಪರಾರಿಯಾಗಿದ್ದಾನೆ.

ಕಳೆದ ವಾರವಷ್ಟೇ ಶಿವಮೊಗ್ಗ ಜಿಲ್ಲೆಯ ಸಾಗರ ದಲ್ಲಿ ಇಂಥಹದೊಂದು ಘಟನೆ ನಡಿದಿದ್ದು ಈಗ ಮತ್ತೊಂದು ಘಟನೆ ನಡಿದೆದ್ದು ಮೇಲಿಂದ ಮೇಲೆ ಮಹಿಳಾ ಶಿಕ್ಷಕಿಯರ ಮೇಲೆ ಇಂಥಹ ದೌರ್ಜನ್ಯ ಪ್ರಕರಣಗಳು ನಡೆಯುತ್ತಿದ್ದು ದಯಮಾಡಿ ಇನ್ನಾದರೂ ಗೃಹ ಸಚಿವರೇ ಮಹಿಳಾ ಶಿಕ್ಷಕಿ ಯರಿಗೆ ಸೂಕ್ತವಾದ ರಕ್ಷಣೆ ನೀಡಿ ಇನ್ನೂ ಮಾನ್ಯ ಶಿಕ್ಷಣ ಸಚಿವರೇ ದಯಮಾಡಿ ಕಾಡಿನಂಚಿಲ್ಲಿರುವ ಅಥವಾ ಒಬ್ಬಂಟಿಯಾಗಿ ಹೋಗುತ್ತಿರುವ ಮಹಿಳಾ ಶಿಕ್ಷಕಿಯರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಅನುಕೂಲ ಮಾಡಿಕೊಡಿ ಇಲ್ಲವಾದರೆ ಭಯದ ವಾತಾವರಣದಿಂದ ಕರ್ತವ್ಯ ಮಾಡಲು ಮಹಿಳಾ ಶಿಕ್ಷಕಿಯರು ಹಿಂದೆ ಮುಂದೆ ನೋಡು ವಂತಹ ಪರಸ್ಥಿತಿ ನಿರ್ಮಾಣವಾಗುತ್ತದೆ.ಇನ್ನೂ ಈ ಒಂದು ಪ್ರಕರಣದಲ್ಲಿ ಸುದ್ದಿ ತಿಳಿದ ಹಿರಿಯ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ಮಾಡಿ ಆರೋಪಿಯ ಬಂಧನಕ್ಕೆ ಜಾಲವನ್ನು ಬೀಸಿದ್ದಾರೆ.