ಬೆಂಗಳೂರು –
ನಮ್ಮ ಸರಕಾರ ಬಂದ ಮೇಲೆ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಲಾಗಿದ್ದು ಸಧ್ಯ ಮತ್ತೆ 15 ಸಾವಿರ ಶಿಕ್ಷಕರನ್ನುಶೀಘ್ರವೇ ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು ಬೆಂಗಳೂರು ನಲ್ಲಿ ಮಾತನಾಡಿದ ಅವರು ಕಾಲೇಜಿನಲ್ಲಿ 6 ಸಾವಿರ ಸ್ಮಾರ್ಟ್ ಕ್ಲಾಸ್‌ಗಳನ್ನು ಆರಂಭಿಸಲಾಗುವುದು.ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮೊದಲ ಬಾರಿಗೆ ಒಂದೇ ವರ್ಷದಲ್ಲಿ ಏಳು ಸಾವಿರ ಶಾಲಾ ಕೊಠಡಿ ಗಳನ್ನು ಗ್ರಾಮೀಣ ಭಾಗದಲ್ಲಿ ಕಟ್ಟಲು ಅನುದಾನ ನೀಡಿ ಇದೇ ವರ್ಷದಲ್ಲಿ ಪೂರ್ತಿಗೊಳಿಸಲು ಸೂಚಿಸಲಾಗಿದೆ ಎಂದರು
ಇನ್ನು ಏಳು ಸರಕಾರಿ ಎಂಜಿನಿಯರಿಂಗ್ ಕಾಲೇಜುಗ ಳನ್ನು ಐಐಟಿ ಮಾದರಿಯಲ್ಲಿ ಮೇಲ್ದರ್ಜೆಗೆ ಏರಿಸಲಾಗು ವುದು ಜೊತೆಗೆ ವಿದೇಶದ ವಿವಿಯೊಂದಿಗೆ ಒಡಂಬಡಿಕೆ ಮಾಡಲಾ ಗುವುದು.ಆರ್ ಆ್ಯಂಡ್ ಡಿ ನೀತಿ ಮಾಡಲಾಗುತ್ತಿದೆ ಎಂದರು