ಬೆಂಗಳೂರು
ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಕುಪಿತಗೊಂಡ ನ್ಯಾಯವಾದಿ ಯೊಬ್ಬರು ಸಾಹಿತಿ ಭಗವಾನ್ ಮುಖಕ್ಕೆ ಕೋರ್ಟ್ ಆವರಣದಲ್ಲೇ ಮಸಿ ಬಳಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಖಾಸಗಿ ದೂರು ಹಿನ್ನೆಲೆಯಲ್ಲಿ ಗುರುವಾರ ಮೈಸೂರಿನ ಸಾಹಿತಿ ಭಗವಾನ್ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರಾಗಿದ್ದರು. ವಿಚಾರಣೆ ನಡೆಸಿ ಜಾಮೀನು ಮಂಜೂರು ಮಾಡಿದ ಬಳಿಕ ಕೋರ್ಟ್ ನಿಂದ ಹೊರಗೆ ಬರುವಾಗ ಭಗವಾನ್‍ಗೆ ನ್ಯಾಯವಾದಿ ಮೀರಾ ರಾಘವೇಂದ್ರ ಮಸಿ ಬಳಿದು, ಆಕ್ರೋಶ ಹೊರ ಹಾಕಿದ್ದಾರೆ.

” ಕೋರ್ಟ್ ಕಟ್ಟಕಟೆಗೆ ತಂದು ನಿಲ್ಲಿಸಬೇಕೆಂಬ ಆಸೆಯಲ್ಲೇ ನಿಂತಿದ್ದೇನೆ. ನನ್ನನ್ನು ಬೇಕಾದ್ರೆ ಕರೆದುಕೊಂಡು ಹೋಗಿ. ಐ ಯ್ಯಾಮ್ ರೆಡಿ ಫಾರ್ ಎವರಿಥಿಂಗ್. ನಾನು ಜೈಲಿಗೆ ಹೋಗಲು ರೆಡಿ. ಏನ್ ಸಾರ್ ನಿಮ್ಗೆ ಇಷ್ಟು ವಯಸ್ಸಾಗಿದೆ ಇನ್ನೂ ದೇವರ ಬಗ್ಗೆ ರಾಮನ ಬಗ್ಗೆ, ಧರ್ಮದ ಬಗ್ಗೆ ಮಾತನಾಡ್ತೀರಾ ನಿಮ್ಗೆ ನಾಚಿಕೆ ಆಗೋಲ್ವಾ” ಎಂದು ವಕೀಲೆ ಆಕ್ರೋಶ ಹೊರ ಹಾಕಿದ್ದಾರೆ.

ಇನ್ನೂ ಭಗವಾನ್ ರನ್ನು ಗನ್ ಮ್ಯಾನ್ ಹಾಗೂ ಪೊಲೀಸರು ಕೋರ್ಟ್ ಆವರಣದಿಂದ ಕರೆದೊಯ್ದಿದ್ದಾರೆ. ಈ ಬಳಿಕ ದೂರು ನೀಡಲು ಬೆಂಗಳೂರಿನ ಹಲಸೂರು ಠಾಣೆಗೆ ಪ್ರೊ.ಕೆ.ಎಸ್. ಭಗವಾನ್ ತೆರಳಿದರು.