ಕಲಘಟಗಿ –
ಧಾರವಾಡ ಜಿಲ್ಲೆಯ ಕಲಘಟಗಿ ಮತಕ್ಷೇತ್ರದ ಜನತೆಗೆ ಕೋವಿಡ್ ಬಗ್ಗೆ ಸರಿಯಾದ ಮಾಹಿತಿ ಸಿಗಬೇಕೆಂಬ ಉದ್ದೇಶದಿಂದ ಮಾಜಿ ಸಚಿವ ಸಂತೋಷ್ ಲಾಡ್ ಅವರ ಆಶಯದಂತೆ ವಾಯು ವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮಾಜಿ ನಿರ್ದೇಶಕ ಆನಂದ್ ಕಲಾಲ್ ಅವರ ನೇತೃತ್ವದಲ್ಲಿ ‘ವಿಶೇಷ ಕೋವಿಡ್ ಸಹಾಯವಾಣಿ’ಯೊಂದನ್ನು ಆರಂಭಿಸಲಾಗುತ್ತಿದೆ.ಈ ಸಹಾಯವಾಣಿಯ ಮೂ ಲಕ ಕ್ಷೇತ್ರದ ಜನರಿಗೆ ಕೋವಿಡ್ ಬಗ್ಗೆ ಯಾವುದೇ ಅನುಮಾನ, ಮಾಹಿತಿ ಹಾಗೂ ಮುನ್ನೆಚ್ಚರಿಕಾ ಕ್ರಮ ಗಳ ಬಗ್ಗೆ ತಜ್ಞ ವೈದ್ಯರು ನೇರವಾಗಿ ಸಲಹೆಗಳನ್ನು ನೀಡಲಿದ್ದಾರೆ.

ಕೊರೊನ ಸೋಂಕಿನ ಬಗ್ಗೆ ಅನಗತ್ಯ ಗೊಂದಲಗಳಿಂ ದ, ಹರಡುತ್ತಿರುವ ಸುಳ್ಳು ಸುದ್ದಿಗಳಿಂದ ಕ್ಷೇತ್ರದ ಜನರು ಆತಂಕಗೊಳ್ಳಬಾರದೆಂಬ ಉದ್ದೇಶದಿಂದ ಆರಂಭಿಸಲಾಗಿರುವ ಈ ಸಹಾಯವಾಣಿ ಸಂಖ್ಯೆ 7676688688 ಗೆ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಗಳ ವರೆಗೆ ನಾಗರಿಕರು ಕರೆ ಮಾಡಿ ಸೂಕ್ತ ವೈದ್ಯಕೀಯ ಸಲಹೆ ಪಡೆಯಬಹುದಾಗಿದೆ ಎಂದು ಆನಂದ್ ಕಲಾಲ ಹೇಳಿದ್ದಾರೆ