ಧಾರವಾಡ –
ಶ್ರೀರಾಮ ಸೇನಾ ಸಂಘಟನೆ ಆರಂಭ ಮಾಡುವ ವಿಚಾರ ಕುರಿತು ಕಳೆದ 13 ವರುಷಗಳ ಹಿಂದೆ ಧಾರವಾಡದ ಕುರುಬಗಟ್ಟಿ ಗ್ರಾಮದಲ್ಲಿ ನಡೆದ ಗಲಾಟೆ ವಿಚಾರ ಕುರಿತು ಆರೋಪಿಗಳಾಗಿದ್ದ 37 ಜನ ಶ್ರೀರಾಮ ಸೇನಾ ಸಂಘಟನೆಯ ಮುಖಂಡರು ಕಾರ್ಯಕರ್ತರು ದೋಷ ಮುಕ್ತರಾಗಿದ್ದಾರೆ.
13 ವರ್ಷದ ಹಿಂದೆ ಶ್ರೀರಾಮ ಸೇನೆಯನ್ನು ಕುರುಬಗಟ್ಟಿ ಗ್ರಾಮದಲ್ಲಿ ಪ್ರಾರಂಭಿಸುವಾಗ ಒಂದು ಸಮುದಾಯದವರು ವಿರೋಧಿಸಿ ದೊಡ್ಡ ಪ್ರಮಾಣದಲ್ಲಿ ಗಲಾಟೆ ಮಾಡಿ ಶ್ರೀರಾಮ ಸೇನಾ ಸಂಘದ 21 ಜನರ ಮೇಲೆ ದೂರು ದಾಖಲಾಗಿ ಜೈಲಿಗೆ ಕಳಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಬಂಧಿತರೆಲ್ಲರೂ ಹೊರಗಡೆ ಬಂದಿದ್ದರು.ಇನ್ನೂ ಇತ್ತ ಶ್ರೀರಾಮ ಸೇನೆಯಿಂದಲೂ ಎದುರಾಳಿ ಮೇಲೆ ಪ್ರತಿ ದೂರು ದಾಖಲು ಮಾಡಲಾಗಿತ್ತು.
ನಂತರ ಗರಗ ಪೊಲೀಸರು ದೋಷಾರೊಪ ಪಟ್ಟಿ ಸಲ್ಲಿಸುವ ಸಮಯದಲ್ಲಿ ಒಟ್ಟು 37 ಜನರ ಹೆಸರನ್ನು ನಮೂದಿಸಿ ನ್ಯಾಯಾಲಯಕ್ಕೆ ಪೊಲೀಸರು ಸಲ್ಲಿಸಿದ್ದರು.ಕೊನೆಗೂ ಈವರೆಗೆ ಕಳೆದ 13 ವರುಷಗಳ ಸುಧೀರ್ಘ ವಿಚಾರಣೆ ಬಳಿಕ ಪ್ರಕರಣದಲ್ಲಿ ಆರೋಪ ಹೊತ್ತುಕೊಂಡಿದ್ದ ಶ್ರೀರಾಮ ಸೇನಾ ಸಂಘಟನೆಯ 37 ಜನರನ್ನು ಧಾರವಾಡ ಜಿಲ್ಲಾ ನ್ಯಾಯಾಲಯ ದೋಷ ಮುಕ್ತರನ್ನಾಗಿ ಮಾಡಿದೆ.
ಗಂಗಾಧರ್ ಕುಲಕರ್ಣಿ, ಶಂಕರ್ ಶೇಳಕೆ,ಶಿವಾನಂದ ಗುಂಡಗೋವಿ,ರುದ್ರಪ್ಪ ಹರವಾಳ ಸೇರಿದಂತೆ ಒಟ್ಟು 37 ಜನರಿಗೆ ನ್ಯಾಯಾಲಯ ದೋಷಮುಕ್ತ ಮಾಡಿದೆ.ಇನ್ನೂ ಫಲಾಪೇಕ್ಷೆ ಇಲ್ಲದೇ ಇಷ್ಟು ವರ್ಷ ಕೇಸ್ ನಡೆಸಿದ ಅಡ್ವೊಕೇಟ್ ಸಚಿನ್ ಕುಲಕರ್ಣಿ ಹಾಗೂ ಅವರ ಸಹೋದ್ಯೋಗಿಗಳಿಗೆ ಅನಂತ ವಂದನೆಗಳು.ಸತ್ಯಮೇವ ಜಯತೆ.ಎಂದು ಗಂಗಾಧರ್ ಕುಲಕರ್ಣಿ ಅವರು ತಮ್ಮ ಫೇಸ್ ಬುಕ್ ನಲ್ಲಿ ಪೊಸ್ಟ್ ಮಾಡಿದ್ದಾರೆ.