ಹುಬ್ಬಳ್ಳಿ –
ಸಾಮಾನ್ಯವಾಗಿ ಪೊಲೀಸ್ ಠಾಣೆಗಳು , ಅಧಿಕಾರಿಗಳು ಅಂದರೆ ಬಿಡುವಿಲ್ಲದ ಕೆಲಸ ಕೆಲಸ . ಅದರಲ್ಲೂ ಸಂಚಾರಿ ಪೊಲೀಸ್ ಠಾಣೆ ಅಂದರಂತೂ ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಪರಸ್ಥಿತಿ ದೇವರಿಗೆ ಪ್ರೀತಿ.
ಒಂದು ನಿಮಿಷವೂ ಬಿಡುವಿಲ್ಲದೇ ಸದಾ ಯಾವಾಗಲೂ ಕೆಲಸ ಮಾಡುತ್ತಾ ಯಾರ ಮುಖವನ್ನು ನೋಡಲಾರದಂತಹ ಒತ್ತಡದಲ್ಲಿ ಇರುತ್ತಾರೆ.
ಇವೆಲ್ಲದರ ನಡುವೆ ಹುಬ್ಬಳ್ಳಿಯ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ವಿಶೇಷವಾದ ಹೃದಯಸ್ಪರ್ಶಿಯಾದ ಕಾರ್ಯಕ್ರಮವೊಂದು ನಡೆಯಿತು.
ಠಾಣೆಯ ಇನಸ್ಪೇಕ್ಟರ್ ಎನ್ ಸಿ ಕಾಡದೇವರ ಮತ್ತು ಪಿಎಸೈ ಶರಣಗೌಡ ದೇಸಾಯಿಗೌಡರ ವಿಶೇಷವಾದ ಕಾರ್ಯಕ್ರಮವನ್ನು ಮಾಡಿ ಎಲ್ಲರ ಪ್ರೀತಿಗೆ ಪಾತ್ರರಾದರು.
ಠಾಣೆಯ ಸಿಬ್ಬಂದಿ ಪ್ರಶಾಂತ ಕುದರಿ ಎಂಬುವರ ಹುಟ್ಟು ಹಬ್ಬ ಇತ್ತು. ಇದರಿಂದ ಇಬ್ಬರು ಅಧಿಕಾರಿಗಳು ಕೇಕ್ ತರಿಸಿ ಎಲ್ಲಾ ಸಿಬ್ಬಂದಿ ಗಳೊಂದಿಗೆ ಕೇಕ್ ಕತ್ತರಿಸಿದರು.
ಪರಸ್ಪರ ಕೇಕ್ ತಿನ್ನಿಸಿ ಸಿಬ್ಬಂದಿ ಹುಟ್ಟು ಹಬ್ಬವನ್ನು ಇಬ್ಬರು ಅಧಿಕಾರಿಗಳು ಎಲ್ಲಾ ಸಿಬ್ಬಂದಿ ಗಳೊಂದಿಗೆ ಸೇರಿಕೊಂಡು ಆಚರಣೆ ಮಾಡಿ ಹುಟ್ಟು ಹಬ್ಬದ ಆಚರಣೆಯಲ್ಲಿರುವ ಪ್ರಶಾಂತ್ ಕುದರಿ ಅವರಿಗೆ ಕಚೇರಿಯ ಎಲ್ಲಾ ಸಿಬ್ಬಂದಿ ಗಳು ಶುಭಾಶಯ ಹೇಳಿ ಶುಭ ಹಾರೈಸಿದರು.
ಹುಟ್ಟು ಹಬ್ಬ ಆಚರಣೆಯೊಂದಿಗೆ ಇದೇ ವೇಳೆ ಸಂಚಾರಿ ಪೊಲೀಸ್ ಠಾಣೆಯಿಂದ ಬೇರೆ ಠಾಣೆಗೆ ವರ್ಗಾವಣೆಗೊಂಡ ಇಬ್ಬರು ಸಿಬ್ಬಂದಿ ಗಳಾದ ವಾಯ್ ಸಿ ಮಲ್ಲಾಪೂರ. ಮತ್ತು ಶೇಖಪ್ಪ ಕಮತರ ಇವರಿಗೆ ಆತ್ಮೀಯವಾಗಿ ಸನ್ಮಾನಿಸಿ ಬಿಳ್ಕೋಡಲಾಯಿತು.
ಠಾಣೆಯ ಇನ್ಸ್ಪೆಕ್ಟರ್ ಅವರು ಎಲ್ಲಾ ಸಿಬ್ಬಂದಿ ಗಳೊಂದಿಗೆ ಸೇರಿಕೊಂಡು ಠಾಣೆಯಿಂದ ಬೇರೆ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡ ಇಬ್ಬರು ಸಿಬ್ಬಂದಿ ಗಳಿಗೆ ಆತ್ಮೀಯವಾಗಿ ಸನ್ಮಾನ ಮಾಡಿದರು.
ಸನ್ಮಾನಿಸಿ ಗೌರವಿಸಿ ನೆನಪಿನ ಕಾಣಿಕೆಯೊಂದಿಗೆ ಠಾಣೆಯಿಂದ ಇಬ್ಬರು ಸಿಬ್ಬಂದಿ ಗಳನ್ನು ಹೃದಯಸ್ಪರ್ಶಿಯಾಗಿ ಬಿಳ್ಕೋಟ್ಟರು.
ಇನ್ನೂ ಈ ಹೃದಯಸ್ಪರ್ಶಿ ಅಪರೂಪದ ಕಾರ್ಯಕ್ರಮಕ್ಕೆ ಇನ್ಸ್ಪೆಕ್ಟರ್ ಮತ್ತು PSI ಅವರೊಂದಿಗೆ ಠಾಣೆಯ ಎಎಸ್ ಐ ರಮೇಶ ಚಲವಾದಿ,ಎಮ್ ಜಿ ಬೆಂಗೇರಿ,ಬಸವರಾಜ ಡಾಸ್ಕೋನವರ,
ಎಮ್ ಆರ್ ಸಣ್ಣಮನಿ,ಪ್ರಶಾಂತ ಕುದರಿ,ಪ್ರಕಾಶ ಕಲಗುಡಿ,ಶಿವಾನಂದ ಕುಂಬಾರ,ಮಂಜುನಾಥ ಮೆಣಸಿನಕಾಯಿ, ಆನಂದ ಜಕನೂರು,ಮಂಜು ಮುಗದ ಸೇರಿದಂತೆ ಹಲವು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡ ಪ್ರಶಾಂತ್ ಕುದರಿ ಮತ್ತು ವರ್ಗಾವಣೆಯಾದ ಇಬ್ಬರು ಸಿಬ್ಬಂದಿ ಗಳೊಂದಿಗೆ ಸೆಲ್ಪಿ ತಗೆಸಿಕೊಂಡು ಕರ್ತವ್ಯದ ಜೊತೆಯಲ್ಲಿ ಖುಷಿ ಪಟ್ಟರು ಪೂರ್ವ ಸಂಚಾರಿ ಪೊಲೀಸ್ ಸಿಬ್ಬಂದಿ ಗಳು.
ಪ್ರಮುಖವಾಗಿ ಈ ಒಂದು ಹೃದಯಸ್ಪರ್ಶಿ ಕಾರ್ಯಕ್ರಮಕ್ಕೆ ಪ್ರೇರಣೆಯಾದ ಇನ್ಸ್ಪೆಕ್ಟರ್ ಎನ್ ಸಿ ಕಾಡದೇವರ ಮತ್ತು ಪಿಎಸೈ ಶರಣಗೌಡ ದೇಸಾಯಿಗೌಡರ ಅವರಿಗೆ
ಕಚೇರಿಯ ಎಲ್ಲಾ ಸಿಬ್ಬಂದಿ ಗಳು ಧನ್ಯವಾದಗಳನ್ನು ಹೇಳುತ್ತಾ ಖುಷಿಪಟ್ಟರು.ಏನೇ ಆಗಲಿ ಸದಾ ಯಾವಾಗಲೂ ಕರ್ತವ್ಯ ಕರ್ತವ್ಯ ಎನ್ನುತ್ತಿದ್ದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಹೃದಯಸ್ಪರ್ಶಿ ಕಾರ್ಯಕ್ರಮ ಮಾಡಿ ಖುಷಿಪಟ್ಟರು ಎಲ್ಲಾ ಸಿಬ್ಬಂದಿಗಳು.