ಶಿಕ್ಷಕರ ವರ್ಗಾವಣೆಯನ್ನು ಆರಂಭ ಮಾಡಿ ಇಲ್ಲವಾದರೆ – ಬೀದಿಗಿಳಿದು ಹೋರಾಟ – ರಾಜ್ಯ ಗ್ರಾಮೀಣ ಶಿಕ್ಷಕರ ಸಂಘ ಎಚ್ಚರಿಕೆ…..

Suddi Sante Desk

ಹುಬ್ಬಳ್ಳಿ –

ಶಾಲೆಗಳು ಪ್ರಾರಂಭವಾಗುವುದರೊಳಗಾಗಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಮುಗಿಸುವಂತೆ ರಾಜ್ಯ ದ ಗ್ರಾಮೀಣ ಶಿಕ್ಷಕರ ಸಂಘ ಮುಖ್ಯಮಂತ್ರಿಗೆ ಮತ್ತು ಶಿಕ್ಷಣ ಸಚಿವರಿಗೆ ಆಗ್ರಹವನ್ನು ಮಾಡಿದೆ

ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ.ರಾಜ್ಯ ಘಟಕ ಹುಬ್ಬಳ್ಳಿಯ ವತಿಯಿಂ ದ ಶಿಕ್ಷಕರ ವರ್ಗಾವಣೆ ಆರಂಭಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಶಿಕ್ಷಕರ ವರ್ಗಾವಣೆ  ಆರಂಭವಾಗುತ್ತಿಲ್ಲ ಐದು ವರ್ಷಗಳಲ್ಲಿ ಒಂದು ಬಾರಿ ಮಾತ್ರ ಶಿಕ್ಷಕರ ವರ್ಗಾವಣೆ ನಡೆದಿದೆ

ಐದು ತಿಂಗಳ ಹಿಂದೆ ಪ್ರಾರಂಭಗೊಂಡ ಪ್ರಕ್ರಿಯೆ ಕೆ.ಎ.ಟಿ.ಯಲ್ಲಿ ಅರ್ಜಿ ಇದ್ದ ಪ್ರಯುಕ್ತ ಸ್ಥಗಿತವಾಗಿ ತ್ತು.ಆದರೆ ಈಗ ಗೌರವಾನ್ವಿತ ಕೆ.ಎ.ಟಿ ಹಾಗೂ ಉಚ್ಛ ನ್ಯಾಯಾಲಯದಲ್ಲಿ ತೀರ್ಪು ಬಂದಿದೆ.ಆದರೆ ಈ ತನಕ ವರ್ಗಾವಣೆ ಪ್ರಕ್ರಿಯೆ ನಿಂತ ಕಾರಣ 7200 0 ಅರ್ಜಿ ಹಾಕಿದ ಪರಸ್ಪರ ಹಾಗೂ ಕೋರಿಕೆ ವರ್ಗಾ ವಣೆ ಅಪೇಕ್ಷಿತರು ಸಂಕಷ್ಟ ತೊಳಲಾಟಗಳಿಂದ ಕಣ್ಣೀರಿಡುತ್ತಿದ್ದಾರೆ ಎಂದಿದ್ದಾರೆ

ಅರ್ಜಿ ಹಾಕಿದ ತೀವ್ರ ತರ ಕಾಯಿಲೆಯವರಲ್ಲಿ ಕೆಲ ವರು ಮೃತಪಟ್ಟಿದ್ದಾರೆ.ಈ ಎಲ್ಲ ಅಂಶಗಳನ್ನು ಪರಿಗಣಿಸಿ ತತ್ ಕ್ಷಣ ವರ್ಗಾವಣೆ ಪ್ರಾರಂಭಿಸಲು ನಮ್ಮ ಸಂಘ ಆಗ್ರಹಿಸುತ್ತದೆ.ತತ ಕ್ಷಣ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪ್ರಾರಂಭಿಸಲು ವಿನಮ್ರವಾಗಿ ವಿನಂತಿಸುತ್ತೇವೆ.ಇಲ್ಲವಾದಲ್ಲಿ ನಿರಂತರ ಚಳುವಳಿ ಉಪವಾಸ ಸತ್ಯಾಗ್ರಹ ಆಮರಣಾಂತ ಉಪವಾಸ ಹಾಗೂ ಬೀದಿಗಿಳಿದು ಹೋರಾಟ ಮಾಡಬಹುದಾದ ಸಂದರ್ಭ ಒದಗಿಬರಬಹುದು. ಆದ್ದರಿಂದ ತಾವು ಗಳು ಇದಕ್ಕೆ ಅವಕಾಶ ಕೊಡದೆ ವರ್ಗಾವಣೆ ಪ್ರಕ್ರಿಯೆ ಆರಂಭ ಮಾಡುವಂತೆ ರಾಜ್ಯಾಧ್ಯಕ್ಷ ಅಶೋಕ ಸಜ್ಜನ ಒತ್ತಾಯಿಸಿದ್ದಾರೆ

ಅಶೋಕ ಸಜ್ಜನ

ಶಿಕ್ಷಕರ ಮೇಲೆ ಕರುಣೆ ದಯೆ ತೋರಿ ವರ್ಗಾವಣೆ ಪ್ರಕ್ರಿಯೆ ಪ್ರಾರಂಭಿಸಿ ಶಾಲೆ ಪ್ರಾರಂಭವಾಗುವುದ ರೊಳಗಾಗಿ ಮುಗಿಯುವ ತುಂಬು ಭರವಸೆ ಹೊಂದಿ ದ್ದೇವೆ ಎಂದು ಮುಖ್ಯ ಮಂತ್ರಿಗಳಿಗೆ ಶಿಕ್ಷಣ ಸಚಿವ ರಿಗೆ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸಂಘದ ರಾಜ್ಯಾಧ್ಯಕ್ಷರಾದ ಅಶೋಕ.ಎಮ್.ಸಜ್ಜನ.ರಾಜ್ಯ ಪ್ರ.ಕಾ. ಮಲ್ಲಿಕಾ ರ್ಜುನ ಸಿ.ಉಪ್ಪಿನ ಗೌರವಾಧ್ಯಕ್ಷರಾದ ಎಲ್ ಆಯ್ ಲಕ್ಕಮ್ಮನವರ ಕಾರ್ಯಾಧ್ಯಕ್ಷರಾದ ಶರಣಪ್ಪಗೌಡ್ರ ಮಹಾ ಪೋಷಕರಾದ ಪವಾಡೆಪ್ಪ ಕಾಂಬಳೆ ಕೋಶಾಧ್ಯಕ್ಷರಾದ ಎಸ್.ಎಫ್.ಪಾಟೀಲ ರಾಜ್ಯ ಸಂಚಾಲಕರಾದ ಹನುಮಂತಪ್ಪ ಮೇಟಿ ರಾಮಪ್ಪ ಹಂಡಿ ಉಪಾಧ್ಯಕ್ಷರಾದ ಎಮ್.ಆಯ್.ಮುನವಳ್ಳಿ ನಾಗರಾಜು ಕೆ. ಎಮ್.ವಿ.ಕುಸುಮಾ ರಾಜಶ್ರೀ ಪ್ರಭಾಕರ.ಅಕ್ಕಮಹಾದೇವಿ.

ನೂಲ್ವಿ. ಲಕ್ಷ್ಮಿದೇವಮ್ಮ ಮಹ್ಮದ ರಫಿ. ಸುರೇಶ. ಅರಳಿ.ಗೋವಿಂದ ಜುಜಾರೆ.ಹೇಮಾ ಕಂಪ್ಲಿ. ವಿಜಯಲಕ್ಷ್ಮಿ ಶಿಡ್ಲಘಟ್ಟ ಅರ್.ಎಮ್. ಕುರ್ಲಿ. ಶರಣಬಸವ ಬನ್ನಿಗೋಳ ಆರ್.ಎಮ್.ಕಮ್ಮಾರ ನಾಗರಾಜ ಆತಡಕರ ಎಸ್.ಸಿ. ಬಸನಗೌಡರ. ಎಸ್.ಸಿ.ಕಾಮನಳ್ಳಿ ಸುನಿಲಗೌಡ್ರ ಪೀರಸಾಬ ನದಾಫ ಬಸವರಾಜ ಹೊನ್ನಳ್ಳಿ.ಅಕ್ಬರಲಿ ಇ ಸೊಲ್ಲಾ ಪೂರ ಮುಂತಾದವರು ಮನವಿ ಮಾಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.